ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಕಾಂಗ್ರೆಸ್ ಮೀನೂಟ : ಕೈ ಪಾಳಯದ ನಡೆಗೆ ಬಿಜೆಪಿ ಕೆಂಡ, ಸ್ವಪಕ್ಷದವರಿಂದಲೂ ವಿರೋಧ
ಸನಾತನ ಧರ್ಮದ ನಂಬಿಕೆಗಳಿಗೆ ಹಾಗೂ ಪವಿತ್ರ ನಗರಿಗೆ ಕಾಂಗ್ರೆಸ್ ಮಾಡಿರುವ ಘೋರ ಅಪಮಾನ ಎಂದು ಬಿಜೆಪಿ ಮತ್ತು ಸ್ಥಳೀಯ ಸಾಧು-ಸಂತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಪ್ರದೇಶ : ಪವಿತ್ರ ಶ್ರೀರಾಮ ಜನ್ಮಭೂಮಿ ಅಯೋಧ್ಯೆ ನಗರಿ ಈಗ ಬಾರೀ ರಾಜಕೀಯ ಮತ್ತು ಧಾರ್ಮಿಕ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನಾಯಕರು ಅಯೋಧ್ಯೆಯಲ್ಲಿ ಮೀನೂಟದ ಪಾರ್ಟಿ ಮಾಡಿರುವುದು ಬಿಜೆಪಿ ಮಾತ್ರವಲ್ಲ ಸ್ವಪಕ್ಷೀಯರ ವಿರೋಧಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದ ನಾಯಕ ರಾಮ್ ನಿಹಾಲ್ ನಿಷಾದ್ ಅವರು ಪಕ್ಷದ ಹಿರಿಯ ನಾಯಕರ ಸ್ವಾಗತಕ್ಕಾಗಿ ಹಮ್ಮಿಕೊಂಡಿದ್ದ ಸಮಾರಂಭವೊಂದರಲ್ಲಿ ಭಾರಿ ಪ್ರಮಾಣದ ಮೀನೂಟದ ವ್ಯವಸ್ಥೆ ಮಾಡಿದ್ದು ಈ ವಿವಾದಕ್ಕೆ ಮುಖ್ಯ ಕಾರಣವಾಗಿದೆ.
ದೇಶಾದ್ಯಂತ ಕೋಟ್ಯಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಆಚರಿಸುವ ಶ್ರಾವಣ ಮಾಸದ ಅವಧಿಯಲ್ಲೇ ಅಯೋಧ್ಯೆಯ ಬ್ಯಾಂಕ್ವೆಟ್ ಹಾಲ್ ಒಂದರಲ್ಲಿ ಮೀನಿನ ಅಡುಗೆ ಸಿದ್ಧಪಡಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದು ಸನಾತನ ಧರ್ಮದ ನಂಬಿಕೆಗಳಿಗೆ ಹಾಗೂ ಪವಿತ್ರ ನಗರಿಗೆ ಕಾಂಗ್ರೆಸ್ ಮಾಡಿರುವ ಘೋರ ಅಪಮಾನ ಎಂದು ಬಿಜೆಪಿ ಮತ್ತು ಸ್ಥಳೀಯ ಸಾಧು-ಸಂತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಒಂದೆಡೆ ದೇವಸ್ಥಾನಗಳಿಗೆ ಭೇಟಿ ನೀಡಿ ನಾಟಕವಾಡುವ ಕಾಂಗ್ರೆಸ್, ಮತ್ತೊಂದೆಡೆ ಇಂತಹ ಕೃತ್ಯಗಳ ಮೂಲಕ ತನ್ನ ಹಿಂದೂ ವಿರೋಧಿ ಮಾನಸಿಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ಶಾಸಕ ವೇದ್ ಪ್ರಕಾಶ್ ಗುಪ್ತಾ ವಾಗ್ದಾಳಿ ನಡೆಸಿದ್ದಾರೆ.
ಆದರೆ ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಆಯೋಜಕರು, ದೇಶದ ಪ್ರತಿಯೊಬ್ಬ ನಾಗರಿಕನಿಗೂ ತಮಗಿಷ್ಟ ಬಂದ ಆಹಾರ ಸೇವಿಸುವ ಸಂವಿಧಾನಾತ್ಮಕ ಹಕ್ಕಿದೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಮೀನುಗಾರಿಕೆ ಹಾಗೂ ಮೀನು ಸೇವನೆ ತಮ್ಮ ನಿಷಾದ್ ಸಮುದಾಯದ ಸಾಂಪ್ರದಾಯಿಕ ಆಹಾರ ಪದ್ಧತಿಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಈ ಘಟನೆಯು ಕಾಂಗ್ರೆಸ್ ಪಕ್ಷದ ಆಂತರಿಕ ವಲಯದಲ್ಲೂ ಭಿನ್ನಾಭಿಪ್ರಾಯ ಮೂಡಿಸಿದ್ದು, ಜಿಲ್ಲಾ ನಾಯಕರು ತಮಗೆ ಈ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಎಂದು ಹೇಳುವ ಮೂಲಕ ವಿವಾದದಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ. ಒಟ್ಟಾರೆಯಾಗಿ ಹಬ್ಬದ ದಿನಗಳಲ್ಲಿ ಅಯೋಧ್ಯೆಯಲ್ಲಿ ನಡೆದ ಈ ಮೀನೂಟದ ಪಾರ್ಟಿ ಈಗ ದೇಶಾದ್ಯಂತ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
Topics
ಸಂಬಂಧಿತ ಸುದ್ದಿಗಳು
india
ಬಾಲಿವುಡ್ ದಿಗ್ಗಜ ನಾನಾ ಪಾಟೇಕರ್ ಸಾವಿನ ರಹಸ್ಯ ಬಯಲು: ಕೊರೊನರಿ ಆರ್ಟರಿ ಕಾಯಿಲೆಯಿಂದ ಕೊನೆಯುಸಿರು
india
ಯೂಟ್ಯೂಬರ್ ಮಧುಮಿತಾ ನಾಪತ್ತೆ : ಕಳವಾಗಿದ್ದ 1 ಕೋಟಿ ಮೌಲ್ಯದ ಚಿನ್ನಾಭರಣ ವಶ, ಕಳತನಕ್ಕೆ ಬಿಗ್ಟ್ವಿಸ್ಟ್
india
Koel Mallick : ಟಿಎಂಸಿ (TMC) ತೊರೆದ 2 ತಿಂಗಳಲ್ಲೇ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೋಯಲ್ ಮಲ್ಲಿಕ್ : ಯಾರು ಈಕೆ ?
india

