ಏಕದಿನ ವಿಶ್ವಕಪ್ಗೆ ಭಾರತದ ತಂಡದ ಸಿದ್ದತೆ: 4 ಸ್ಟಾರ್ ಆಟಗಾರರು ತಂಡದಿಂದ ಔಟ್
ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಬಹುತೇಕ ಯುವ ಆಟಗಾರರನ್ನೇ ಆಯ್ಕೆ ಮಾಡಲಾಗಿದ್ದು, ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರಿಗೆ ತಂಡದಿಂದ ಕೋಕ್ ನೀಡಲಾಗಿದೆ.
ಮುಂದಿನ ವರ್ಷ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಸಿದ್ದತೆಗಳು ನಡೆಯುತ್ತಿದೆ. ಅದ್ರಲ್ಲೂ ಭಾರತ ತಂಡ ವಿಶ್ವಕಪ್ ಪಂದ್ಯಾವಳಿಗಾಗಿ ಸಜ್ಜಾಗುತ್ತಿದೆ. ಈ ನಡುವಲ್ಲೇ ವಿಶ್ವಕಪ್ನಿಂದ 4 ಮಂದಿ ಆಟಗಾರರು ತಂಡದಿಂದ ಹೊರ ಬೀಳೋದು ಖಚಿತ. ನ್ಯೂಜಿಲೆಂಡ್ ಪ್ರವಾಸಕ್ಕೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಈ ಹೊಸ ಚರ್ಚೆ ಶುರುವಾಗಿದೆ.
ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳನ್ನು ಶುಭಮನ್ ಗಿಲ್ ಮುನ್ನೆಡೆಸಲಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಅವರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸಲಾಗಿದೆ. ಟೆಸ್ಟ್ ಸರಣಿಯನ್ನು ಗಮನದಲ್ಲಿ ಇಟ್ಟುಕೊಂಡು ಗಿಲ್ಗೆ ವಿಶ್ರಾಂತಿ ನೀಡಲಾಗಿದೆ ಎನ್ನಲಾಗುತ್ತಿದೆ.
ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಬಹುತೇಕ ಯುವ ಆಟಗಾರರನ್ನೇ ಆಯ್ಕೆ ಮಾಡಲಾಗಿದ್ದು, ಭಾರತ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರಿಗೆ ತಂಡದಿಂದ ಕೋಕ್ ನೀಡಲಾಗಿದೆ. ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೇಲ್, ಮೊಹಮ್ಮದ್ ಸೆಮಿಗೆ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯೋದು ಅನುಮಾನ.
ರವೀಂದ್ರ ಜಡೇಜಾ ಬ್ಯಾಟಿಂಗ್, ಬೌಲಿಂಗ್ ಸೇರಿದಂತೆ ಆಲ್ರೌಂಡರ್ ಆಟದ ಪ್ರದರ್ಶನ ನೀಡುತ್ತಿದ್ದಾರೆ. ಮುಂಬರುವ ವಿಶ್ವಕಪ್ನಲ್ಲಿ ಆಡುವ ಕನಸು ಕಾಣುತ್ತಿದ್ದ ಜಡೇಜಾಗೆ ಬಿಸಿಸಿಐ ಶಾಕ್ ಕೊಟ್ಟಿದೆ. ಜಡೇಜಾ ಅವರ ಬದಲು ಅಕ್ಷರ್ ಪಟೇಲ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಭಾರತ ಏಕದಿನ ತಂಡದ ನಾಯಕನರಾಗಿರುವ ಶುಭಮನ್ಗಿಲ್ ನಾಯಕತ್ವದ ಜೊತೆಗೆ ಆರಂಭಿಕ ಆಟಗಾರನಾಗಿಯೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಯಶಸ್ವಿ ಜೈಸ್ವಾಲ್ ತಂಡದಲ್ಲಿ ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಅವಕಾಶ ಸಿಗೋದು ಅನುಮಾನ. ರೋಹಿತ್ ಶರ್ಮಾ ಹಾಗೂ ಗಿಲ್ ಭರ್ಜರಿ ಫಾರ್ಮ್ನಲ್ಲಿ ಇರೋದೇ ಇದಕ್ಕೆ ಕಾರಣ. ರೋಹಿತ್ ಶರ್ಮಾ ಜೊತೆಗೆ ಶುಭಮನ್ ಗಿಲ್ ಕಾಣಿಸಿಕೊಳ್ಳುವುದು ಖಚಿತ. ಹೀಗಾಗಿ ಜೈಸ್ವಾಲ್ ಅವಕಾಶ ವಂಚಿತರಾಗಲಿದ್ದಾರೆ.
ಇನ್ನು ಪ್ರತಿಭಾನ್ವಿತ ಆಟಗಾರ ಧ್ರುವ್ ಜುರೆಲ್ಗೆ ಕೂಡ ಸ್ಥಾನ ಸಿಗೋದು ಅನುಮಾನ. ಕನ್ನಡಿಗ ಕೆಎಲ್ ರಾಹುಲ್ ಈಗಾಗಲೇ ಭಾರತ ತಂಡ ಖಾಯಂ ಆಟಗಾರನಾಗಿದ್ದು, ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ನಿಬಾಯಿಸುತ್ತಿದ್ದಾರೆ. ಅಲ್ಲದೇ ಧ್ರುವ್ ಜುರೇಲ್ ಜೊತೆಗೆ ರಿಷಬ್ ಪಂತ್ಗೆ ಕೂಡ ತಂಡದಲ್ಲಿ ಸ್ಥಾನ ಸಿಗೋದು ಡೌಟ್.
ಭಾರತ ತಂಡದ ಹಿರಿಯ ಆಟಗಾರ ಮೊಹಮ್ಮದ್ ಶಮಿಗೆ ನ್ಯೂಜಿಲೆಂಡ್ ಸರಣಿಯಲ್ಲಿ ಸ್ಥಾನ ಸಿಕ್ಕಿಲ್ಲ. ಜಸ್ಪ್ರಿತ್ ಬೂಮ್ರಾ ಅನುಪಸ್ಥಿತಿಯಲ್ಲಿ ಸೆಮಿ ಕಣಕ್ಕೆ ಇಳಿತಾರೆ ಎಂದು ಹೇಳಲಾಗಿತ್ತು. ಆದರೆ ಬಿಸಿಸಿಐ ಆಯ್ಕೆ ಸಮಿತಿ ಇದಕ್ಕೆ ಅವಕಾಶ ನೀಡಿಲ್ಲ. ಹೀಗಾಗಿ ಮುಂದಿನ ವಿಶ್ವಕಪ್ನಲ್ಲಿ ಆಡುವ ಸೆಮಿ ಕನಸು ನುಚ್ಚು ನೂರಾಗಿದೆ.
ಜಸ್ಪ್ರಿತ್ ಬೂಮ್ರಾ ಅವರನ್ನು ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿಯಿಂದ ಹೊರಗಿಡಲಾಗಿದೆ. ಬೂಮ್ರಾ ಬದಲು ಮೊಹಮ್ಮದ್ ಸೆಮಿ ಏಕದಿನ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿತ್ತು. ಆದರೆ ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಮೊಹಮ್ಮದ್ ಸೆಮಿ ಆಯ್ಕೆ ಆಗದೇ ಇರೋದ್ರಿಂದಾಗಿ ಸೆಮಿ ಮುಂಬರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುವುದು ಅನುಮಾನ.
Topics
ಸಂಬಂಧಿತ ಸುದ್ದಿಗಳು
cricket
ನ್ಯೂಜಿಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ : ಏಕದಿನ ಸರಣಿಗೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ನಾಯಕರು
cricket
Royal Challengers Bengaluru: ಗೂಗಲ್ ಸರ್ಚ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಸ್ಥಾನ, ಯಾಕಿಷ್ಟು ಕ್ರೇಜ್ ?
cricket
ನಿವೃತ್ತರಾಗಿ ಇಲ್ಲಾ ತಂಡ ಬಿಡಿ : ಯುವರಾಜ್ ಸಿಂಗ್, ಗಂಭೀರ್ ಕ್ರಿಕೆಟ್ ವೃತ್ತಿ ಜೀವನ ಅಂತ್ಯವಾಗಿದ್ದು ಹೇಗೆ ?
cricket

