ಭಾರತದಲ್ಲಿ ₹1.64 ಲಕ್ಷ ದಾಟಿದ ಐಫೋನ್ 18 ಪ್ರೋ ಬೆಲೆ: ದುಬಾರಿ ಮೊಬೈಲ್ ಖರೀದಿಗೆ ಹಿಂದೇಟು ಹಾಕುತ್ತಿರುವ ಗ್ರಾಹಕರು
ತಂತ್ರಜ್ಞಾನ ಲೋಕದ ದೈತ್ಯ ಆಪಲ್‌ಸಂಸ್ಥೆ ಇತ್ತೀಚಿಗಷ್ಟೇ ದುಬಾರಿಯಾಗಿರುವ ಐಪೋನ್ 18 ಪ್ರೋ ಮತ್ತು ಐಪೋನ್ 18 ಪ್ರೋ ಮ್ಯಾಕ್ಸ್ ಅನ್ನೋ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
By ಜೋಬಿನ್ ಅಮಾಸೆಬೈಲು | Jobin Amasebail
1 min read
ತಂತ್ರಜ್ಞಾನ ಲೋಕದ ದೈತ್ಯ ಆಪಲ್‌ಸಂಸ್ಥೆ ಇತ್ತೀಚಿಗಷ್ಟೇ ದುಬಾರಿಯಾಗಿರುವ ಐಪೋನ್ 18 ಪ್ರೋ ಮತ್ತು ಐಪೋನ್ 18 ಪ್ರೋ ಮ್ಯಾಕ್ಸ್ ಅನ್ನೋ ಸ್ಮಾರ್ಟ್‌ಪೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ ಈ ಮಾದರಿಯ ಮೊಬೈಲ್ ಪೋನ್‌ಗಳ ಬೆಲೆ ಗಗನಕ್ಕೆ ಏರಿದೆ. ಇದರಿಂದಾಗಿ ಗ್ರಾಹಕರಿಂದ ನಿರೀಕ್ಷಿತ ಮಟ್ಟದ ಸ್ಪಂದನೆ ಸಿಗದೆ ಇರೋದು ಆಪಲ್‌ಗೆ ಮುಳುವಾಗಿದೆ.
ಆಪಲ್ ಕಂಪೆನಿ ಐಪೋನ್ 18 ಮಾದರಿಯ ಸ್ಮಾರ್ಟ್‌ಪೋನ್‌ಗಳಿಗೆ ಬೇಡಿಕೆ ಕುಸಿಯುತ್ತಿದ್ದಂತೆಯೇ ಬಿಡಿಭಾಗಗಳ ಪೂರೈಕೆದಾರರಿಗೆ ಉತ್ಪಾದನೆಯನ್ನು ಕಡಿತಗೊಳಿಸುವಂತೆ ಸೂಚಿಸಿದೆ ಎಂದು ನಿಕ್ಕಿ ಏಷ್ಯಾ ವರದಿ ಮಾಡಿದೆ. ಭಾರತೀಯ ಮಾರುಕಟ್ಟಯಲ್ಲಿ ಐಪೋನ್ 18 ಪ್ರೋ ಆರಂಭಿಕ ಬೆಲೆಯೇ ಬರೋಬ್ಬರಿ 1.64 ಲಕ್ಷ ರೂಪಾಯಿ ಇದ್ದರೆ, ಐಪೋನ್ ಪ್ರೋ ಮ್ಯಾಕ್ಸ್ ಬೆಲೆ 1.79 ಲಕ್ಷದಷ್ಟಿದೆ. ಈ ಹಿಂದಿನ ಐಪೋನ್ ಮಾದರಿಗೆ ಹೋಲಿಕೆ ಮಾಡಿದ್ರೆ ಇದು ಸ್ವಲ್ಪ ದುಬಾರಿ ಎನಿಸಿದೆ.
ಯುಬಿಎಸ್ ವಿಶ್ಲೇಷಕರ ಪ್ರಕಾರ, ಇಷ್ಟೊಂದು ದುಬಾರಿ ಬೆಲೆ ನೀಡಿ ಮೊಬೈಲ್ ಅಪ್‌ಗ್ರೇಡ್ ಮಾಡೋದಕ್ಕೆ ಸಹಜವಾಗಿಯೇ ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ವಿಶ್ವದ 30ಕ್ಕೂ ಅಧಿಕ ಮಾರುಕಟ್ಟೆಯಲ್ಲಿ ಐಪೋನ್18 ವಿತರಣೆಯಲ್ಲಿ ಬಾರೀ ಇಳಿಕೆ ಕಂಡಿದೆ. ಅಲ್ಲದೇ 3 ಲಕ್ಷಕ್ಕೂ ಅಧಿಕ ಬೆಲೆಯ ಮೊಬೈಲ್ ಖರೀದಿಗೆ ಗ್ರಾಹಕರು ಮನಸ್ಸು ಮಾಡುತ್ತಿಲ್ಲವಂತೆ.
ಐಪೋನ್ 18 ಮಾದರಿ ದುಬಾರಿಯ ಬೆಲೆಯ ಕಾರಣದಿಂದಲೇ ಬೇಡಿಕೆ ಕುಸಿತ ಆಗಿರೋದು ಇದೀಗ ಆಪಲ್ ಸಂಸ್ಥೆ ಮಾರುಕಟ್ಟೆಗೆ ಬಿಡುಗಡೆಗೆ ಸಜ್ಜಾಗಿರುವ ಪೋಲ್ಡೇಬಲ್ ಸ್ಮಾರ್ಟ್ ಪೋನ್ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆಯಿದೆ. ಇನ್ನು ಪೋಲ್ಟೇಬಲ್ ಪೋನ್‌ನ ಆರಂಭಿಕ ಭಾರತೀಯ ಬೆಲೆಯೇ 2.90 ಲಕ್ಷ ಇರುವ ಕಾರಣದಿಂದ ಮಧ್ಯಮ ವರ್ಗದ ಜನತೆಗೆ ಇಷ್ಟು ಹಣ ನೀಡಿ ದುಬಾರಿ ಮೊಬೈಲ್ ಖರೀದಿ ಮಾಡ್ತಾರಾ ಅನ್ನೋದು ಸದ್ಯದ ಪ್ರಶ್ನೆ.
ಎಐ ತಂತ್ರಜ್ಞಾನ ಡೇಟಾ ಸೆಂಟರ್‌ಗಳಲ್ಲಿ ಅತೀ ಹೆಚ್ಚು ಬಳಕೆಯಾಗುತ್ತಿರುವ ಕಾರಣದಿಂದಾಗಿ ಮೆಮೋರಿ ಚಿಪ್‌ಗಳ ಬೆಲೆಯಲ್ಲಿ ಬಾರೀ ಏರಿಕೆ ಕಂಡಿದೆ. ಇದರ ನೇರ ಪರಿಣಾಮ ಇದೀಗ ಸ್ಮಾರ್ಟ್‌ಪೋನ್ ತಯಾರಕರ ಮೇಲೆ ಬಿದ್ದಿದೆ. ಐಡಿಸಿ ನೀಡಿರುವ ವರದಿಯ ಪ್ರಕಾರ, ಭಾರತ ಮಾತ್ರವಲ್ಲದೇ ಜಾಗತಿಕವಾಗಿಯೂ ಐಪೋನ್ 18 ಬೇಡಿಕೆಯಲ್ಲಿ ಬಾರೀ ಕುಸಿತ ಕಂಡಿದೆ. ಬೇಡಿಕೆ ಕುಸಿತದ ಬೆನ್ನಲ್ಲೇ ಐಪೋನ್ 18 ಬೆಲೆಯಲ್ಲಿಯೂ ಬಾರಿ ಇಳಿಕೆ ಕಾಣುವ ಸಾಧ್ಯತೆಯಿದೆ. ದೀಪಾವಳಿಯ ಹೊತ್ತಲ್ಲೇ ಬೆಲೆ ಇನ್ನಷ್ಟು ಇಳಿಕೆಯಾಗೋದು ಖಚಿತ.
Topics
ಸಂಬಂಧಿತ ಸುದ್ದಿಗಳು
business
ಯಜಮಾನಿಯರೇ ಗಮನಿಸಿ : ಗೃಹಲಕ್ಷ್ಮೀ ಯೋಜನೆಯಲ್ಲಿ ಭಾರೀ ಬದಲಾವಣೆ
business
ಯುಪಿಐ ಶುಲ್ಕ ವರ್ತಕರಿಗೆ ಬಿಗ್ ರಿಲೀಫ್ : ಹಬ್ಬದ ಹೊತ್ತಲ್ಲಿ ಡಿಜಿಟಲ್ ಪಾವತಿ ಶುಲ್ಕಕ್ಕೆ ವಿನಾಯಿತಿ
business
ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ : ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಆಹ್ವಾನ
business

