ಮಂಗಳೂರಿನಿಂದ ಅರಬ್‌ ನಾಡಿಗೆ ಹೆಚ್ಚಿದ ವಿಮಾನಗಳ ಸಂಚಾರ: ಕುವೈತ್, ಪುಣೆ, ಹೈದರಾಬಾದ್‌ಗೆ ಹೊಸ ವಿಮಾನ ಸೇವೆ ಆರಂಭ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಳಿಗಾಲದ ವಿಮಾನಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

WhatsAppPost
mangaluru-to-kuwait-pune-hyderabad-flights-winter-schedule
mangaluru-to-kuwait-pune-hyderabad-flights-winter-schedule

ಯುಎಇ ಸೇರಿದಂತೆ ಅರಬ್‌ ನಾಡಿನಲ್ಲಿ ನೆಲೆಸಿರುವ ಕರಾವಳಿಗರಿಗೆ ಭರ್ಜರಿ ಗುಡ್‌ನ್ಯೂಸ್‌ ಇಲ್ಲಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಳಿಗಾಲದ ವಿಮಾನಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಯುಎಇ ರಾಸ್‌ ಅಲ್‌ ಖೈಮಾ ಸೇರಿದಂತೆ ಒಟ್ಟು ಐದು ಪ್ರಮುಖ ನಗರಗಳಿಗೆ ಮಂಗಳೂರಿನಿಂದ ಹೊಸದಾಗಿ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ.

ಮಂಗಳೂರಿನಿಂದ ಹೈದ್ರಾಬಾದ್‌ಗೆ ವಿಮಾನಯಾನ ಸೇವೆ ಮತ್ತೆ ಪುನರಾರಂಭಗೊಳ್ಳಲಿದೆ. ಯುಎಇ ಜೊತೆಗೆ ಕುವೈತ್‌, ಲಕ್ಷದ್ವೀಪ ಹಾಗೂ ಪುಣೆಗೆ ಮಂಗಳೂರಿನಿಂದ ವಿಮಾನ ಹಾರಾಟ ನಡೆಸಲಿದೆ. ಬೇಸಿಗೆ ಕಾಲದ ವಿಮಾನಗಳ ವೇಳಾಪಟ್ಟಿಯನ್ನು ಹೋಲಿಕೆ ಮಾಡಿದ್ರೆ ವಾರದಲ್ಲಿ ಒಟ್ಟು 181 ವಿಮಾನ ಸಂಚಾರವು 195ಕ್ಕೆ ಏರಿಕೆ ಕಾಣಲಿದೆ. ಅದ್ರಲ್ಲೂ ಪ್ಲೈ 91 ವಿಮಾನಯಾನ ಸಂಸ್ಥೆಗಳು ಮಂಗಳೂರಿನಿಂದ ಪುಣೆಗೆ ಹೊಸದಾಗಿ ದೈನಂದಿನ ವಿಮಾನಯಾನ ಸೇವೆಯನ್ನು ಒದಗಿಸಲಿದೆ.

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯು ಬೋಯಿಂಗ್‌ 737-8 ವಿಮಾನದ ಮೂಲಕ ಮಂಗಳೂರು ಹಾಗೂ ಹೈದ್ರಾಬಾದ್‌ ನಡುವೆ ವಾರಕ್ಕೆ ಮೂರು ಬಾರಿ ವಿಮಾನಯಾನ ಸೇವೆ ಒದಗಿಸಲಿದೆ. ಇನ್ನು ಇಂಡಿಗೋ ವಿಮಾನಯಾನ ಸಂಸ್ಥೆಯು ಮುಂಬೈ ಮಾರ್ಗದಲ್ಲಿ ಹೆಚ್ಚುವರಿ ವಿಮಾನಗಳನ್ನು ಸೇವೆಗೆ ಒದಗಿಸಲು ಮುಂದಾಗಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರು ಮತ್ತು ಹೈದ್ರಾಬಾದ್‌ ನಡುವೆ ಸಂಪರ್ಕಕೊಂಡಿಯಾಗಿ ಕೆಲಸ ಮಾಡಲಿದೆ. ಹೆಚ್ಚುವರಿ ವಿಮಾನಯಾನ ಸೇವೆಗಳು ದೇಶದ ಪ್ರಮುಖ ವಾಣಿಜ್ಯ ಕೇಂದ್ರ ಹಾಗೂ ಪ್ರವಾಸಿ ತಾಣಗಳ ನಡುವೆ ಸಂಚಾರ ನಡೆಸುವುದರಿಂದ ಕರಾವಳಿಯ ಪ್ರವಾಸೋದ್ಯಮ ಇನ್ನಷ್ಟು ತೆರೆದುಕೊಳ್ಳಲಿದೆ.

ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆ ಇದೀಗ ಅರಬ್‌ ರಾಷ್ಟ್ರಗಳಿಗೆ ಹೆಚ್ಚುವರಿ ವಿಮಾನ ಸೇವೆಯನ್ನು ಪ್ರಕಟಿಸಿದೆ. ಕುವೈತ್‌, ಯುಎಇ ಮಾತ್ರವಲ್ಲದೇ ಬೆಹರಿನ್‌, ಅಬುದಾಬಿಗೆ ವಿಮಾನಗಳು ಹಾರಾಟ ನಡೆಸಲಿವೆ. ಚಳಿಗಾಲದ ವೇಳಾಪಟ್ಟಿಯ ಪ್ರಕಾರ ಮಂಗಳೂರಿನಿಂದ ಹಾರಾಟ ನಡೆಸುವ ಅಂತರಾಷ್ಟ್ರೀಯ ವಿಮಾನಗಳ ಸಂಖ್ಯೆ ಇದೀಗ 34ರಿಂದ 45ಕ್ಕೆ ಏರಿಕೆ ಕಂಡಿದೆ.

ಹೊಸದಾಗಿ ವಿಮಾನಯಾನ ಸೇವೆ ಆರಂಭಗೊಳ್ಳುವ ಜೊತೆ ಜೊತೆಗೆ ದೋಹಾ, ಮಸ್ಕತ್‌, ಅಬುದಾಬಿ, ದುಬೈ, ದಮ್ಮಾಮ್‌, ಜೆಡ್ಡಾ ನಡುವೆ ಸಂಚಾರ ನಡೆಸುತ್ತಿದ್ದ ವಿಮಾನಯಾನ ಸೇವೆಗಳು ಎಂದಿನಂತೆಯೇ ಮುಂದುವರಿಕೆ ಆಗಲಿದೆ.

Topics

ಸಂಬಂಧಿತ ಸುದ್ದಿಗಳು