karnatakaಪ್ರಮುಖ ಸುದ್ದಿಗಳು

ಬೆಂಗಳೂರು, ಕೇರಳದಲ್ಲಿ ಹೊಸ ಆತಂಕ : ರೈಲ್ವೆ ನಿಲ್ದಾಣದ ಕುಡಿಯುವ ನೀರಿನಲ್ಲಿ ಡೇಂಜರ್‌ ಬ್ಯಾಕ್ಟೀರಿಯಾ

ರೈಲ್ವೆ ನಿಲ್ದಾಣದಲ್ಲಿ ನೀಡುವ ನೀರು ಸುರಕ್ಷಿತ ಅಲ್ಲಾ ಅನ್ನೋದು ಬಯಲಾಗಿದೆ. ಇ ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
railway station drinking water e coli bacteria bengaluru kerala karnataka
railway station drinking water e coli bacteria bengaluru kerala karnataka

ಬೆಂಗಳೂರು : ಭಾರತದ ಪ್ರಮುಖ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಈ ಕುಡಿಯುವ ನೀರಿನಲ್ಲಿ ಅಪಾಯಕಾರಿಯಾಗಿರುವ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಸಿಎಜಿ ವರದಿ ಬಹಿರಂಗಪಡಿಸಿದೆ.

ಕುಡಿಯುವ ನೀರು ಕೂಡ ಅಪಾಯಕಾರಿ ಅನ್ನೋದು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಬೆಂಗಳೂರು, ಹೈದ್ರಾಬಾದ್‌, ಕೇರಳ, ಮುಂಬೈನಲ್ಲಿಯೂ ಬ್ಯಾಕ್ಟೀರಿಯಾ ಪತ್ತೆ ಆಗಿದ್ದು, ಘಟನೆಯ ಬೆನ್ನಲ್ಲೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ.

ಬೆಂಗಳೂರು, ಮುಂಬೈ ಸೇರಿದಂತೆ ಭಾರತದ ವಿವಿಧ ನಗರಗಳ ಐಷಾರಾಮಿ ಹೋಟೆಲ್‌, ರೆಸ್ಟೋರೆಂಟ್‌, ಬೇಕರಿಗಳ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ. ಈ ದಾಳಿಯ ವೇಳೆಯಲ್ಲಿ ಕೊಳೆತ ಆಹಾರ, ಮಾಂಸ, ತರಕಾರಿಗಳು ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಇದೀಗ ರೈಲ್ವೆ ನಿಲ್ದಾಣದಲ್ಲಿ ಗ್ರಾಹಕರಿಗೆ ನೀಡುವ ನೀರು ಕೂಡ ಸುರಕ್ಷಿತ ಅಲ್ಲಾ ಅನ್ನೋದು ಬಯಲಾಗಿದೆ. ಇ ಕೋಲೈ ಬ್ಯಾಕ್ಟೀರಿಯಾ ಪತ್ತೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ರೈಲ್ವೆ ಇಲಾಖೆ ಎಚ್ಚೆತ್ತುಕೊಂಡಿದೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಹಿರಿಯ ಅಧಿಕಾರಿಗಳ ಜೊತೆಗೆ ತುರ್ತು ಸಭೆ ನಡೆಸಿದ್ದಾರೆ. ಅಲ್ಲದೇ 20,000 ಕೇಂದ್ರಗಳಲ್ಲಿ ವಾಟರ್ ಕೂಲರ್‌ಗಳು ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು ತುರ್ತಾಗಿ ಅಳವಡಿಸುವಂತೆ ಸೂಚನೆ ನೀಡಿದ್ದಾರೆ.

ಪ್ರಮುಖವಾಗಿ ಮುಂಬೈ, ಹೈದ್ರಾಬಾದ್‌, ಪಾಲಕ್ಕಾಡ್‌, ಕೊಯಮತ್ತೂರು, ಕಲ್ಯಾಣ್, ಲೋನಾವಲಾ ಹಾಗೂ ಮಧುಪುರ ರೈಲ್ವೆ ನಿಲ್ದಾಣಗಳಲ್ಲಿ ನೀಡಲಾಗಿರುವ ರೈಲ್ವೆ ನಿಲ್ದಾಣಗಳಲ್ಲಿನ ಒದಗಿಸುವ ಕುಡಿಯುವ ನೀರಿನಲ್ಲಿ ಅಪಾಯಕಾರ ಬ್ಯಾಕ್ಟೀರಿಯಾ ಕಂಡುಬಂದಿದೆ.

ಈ ಬ್ಯಾಕ್ಟೀರಿಯಾ ಮಾನವನ ದೇಹದ ಮೇಲೆ ಗಂಭೀರ ಪರಿಣಾಮವನ್ನು ಬೀರುವ ಇಂತಹ ನೀರನ್ನು ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಲಿದೆ ಎಂದು ಸಿಎಜಿ ಕಚೇರಿ ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.

Topics

ಸಂಬಂಧಿತ ಸುದ್ದಿಗಳು