mangaluruಪ್ರಮುಖ ಸುದ್ದಿಗಳು

ಟೆಕ್‌ ಸಿಟಿಯಾಗ್ತಿದೆ ಉಡುಪಿ, ಮಂಗಳೂರು : ಐಟಿ ಉದ್ಯೋಗಿಗಳ ಸಂಖ್ಯೆಯಲ್ಲಿ ಭಾರೀ ಏರಿಕೆ

ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವಿ ಟೆಕ್ಕಿಗಳು ಬಹುಪಾಲು ಬೆಂಗಳೂರನ್ನೇ ಆಶ್ರಯಿಸಿದ್ದಾರೆ. ಆದರೆ ಇದೀಗ ಮಂಗಳೂರು ಹಾಗೂ ಉಡುಪಿ ಕೂಡ ಅನುಭವಿಗಳನ್ನು ತನ್ನತ್ತ ಸೆಳೆಯುತ್ತಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
mangalore udupi emerging it hub tech employment surge
mangalore udupi emerging it hub tech employment surge

ಮಂಗಳೂರು / ಉಡುಪಿ : ಬಂದರು ನಗರಿ ಮಂಗಳೂರು, ಕೃಷ್ಣನಗರಿ ಉಡುಪಿಯಲ್ಲೀಗ ಟೆಕ್‌ ಪರ್ವ ಶುರುವಾಗಿದೆ. ಕರಾವಳಿ ಭಾಗದಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್‌ ಕ್ಷೇತ್ರ ವೇಗವಾಗಿ ಬೆಳೆಯುತ್ತಿದ್ದು, ಸ್ಥಳೀಯರಿಗೆ ಉದ್ಯೋಗದ ಮಹಾಪೂರವೇ ಹರಿದು ಬರುತ್ತಿದೆ. ಹೀಗಾಗಿ ಉದ್ಯೋಗ ಅರಸಿ ಬೆಂಗಳೂರು, ಮೈಸೂರು ಸೇರಿದಂತೆ ಇತರ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆಯಲ್ಲಿ ಬಾರೀ ಇಳಕೆ ಕಂಡಿದೆ.

ಉಡುಪಿ ಮತ್ತು ಮಂಗಳೂರು ಭಾಗದಲ್ಲಿ ಈಗಾಗಳೇ 2.80 ಲಕ್ಷಕ್ಕೂ ಅಧಿಕ ಟೆಕ್ಕಿಗಳು ಉದ್ಯೋಗ ಕಂಡುಕೊಂಡಿದ್ದಾರೆ. ಅದ್ರಲ್ಲೂ 2026ರ ಅವಧಿಯಲ್ಲಿಯೇ ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡಿದೆ ಅನ್ನೋದು ಸ್ಕಿಲ್ಸ್‌ ಆ್ಯಂಡ್‌ ಟ್ಯಾಲೆಂಟ್‌ ಲ್ಯಾಂಡ್‌ಸ್ಕೇಪ್‌ ಆಫ್‌ ಉಡುಪಿ-ಮಂಗಳೂರು ಕ್ಲಸ್ಟರ್‌ 2026ರ ವರದಿಯಲ್ಲಿ ದಾಖಲಾಗಿದೆ.

ತಂತ್ರಜ್ಞಾನ ಕ್ಷೇತ್ರದಲ್ಲಿ ಅನುಭವಿ ಟೆಕ್ಕಿಗಳು ಬಹುಪಾಲು ಬೆಂಗಳೂರನ್ನೇ ಆಶ್ರಯಿಸಿದ್ದಾರೆ. ಆದರೆ ಇದೀಗ ಮಂಗಳೂರು ಹಾಗೂ ಉಡುಪಿ ಕೂಡ ಅನುಭವಿಗಳನ್ನು ತನ್ನತ್ತ ಸೆಳೆಯುತ್ತಿದೆ. ಮಂಗಳೂರಲ್ಲಿ 2024ರಲ್ಲಿ 45,800 ಅನುಭವಿ ವೃತ್ತಿಪರರಿದ್ದು, 2025ರಲ್ಲಿ ಈ ಸಂಖ್ಯೆ 55 ಸಾವಿರಕ್ಕೆ ಏರಿಕೆ ಕಂಡಿದೆ. ಉಡುಪಿ ಜಿಲ್ಲೆಯಲ್ಲಿ 2024ರಲ್ಲಿ 19,700 ರಷ್ಟಿದ್ದ ಅನುಭವಿಗಳ ಸಂಖ್ಯೆ ಇದೀಗ 22,500ಕ್ಕೆ ಏರಿಕೆಯಾಗಿದೆ.

ಮಂಗಳೂರಿನಲ್ಲಿ ಬೃಹತ್‌ ಟೆಕ್‌ ಪಾರ್ಕ್‌ ನಿರ್ಮಾಣವಾಗಲಿದ್ದು, ಸುಮಾರು 11 ಸಾವಿರ ಮಂದಿಗೆ ಉದ್ಯೋಗವನ್ನು ನೀಡಲಿದೆ. ಬೆಂಗಳೂರು ಹೊರತು ಪಡಿಸಿ ಕರ್ನಾಟಕದ ಇತರ ಜಿಲ್ಲೆಗಳಲ್ಲಿ 11 ಕಂಎಪನಿಗಳು ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಸುಮಾರು 27 ಸಾವಿರ ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಲಿವೆ. ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಟೆಕ್‌ ಕ್ಷೇತ್ರದಲ್ಲಿ ಉದ್ಯೋಗ ದೊರಕಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

Topics

ಸಂಬಂಧಿತ ಸುದ್ದಿಗಳು