Premada Oorali OTT : ಪ್ರೇಮದ ಊರಲಿ ಮನೆಯಲ್ಲಿ ಕುಳಿತು ಸಿನಿಮಾ ನೋಡಿ : ಒಟಿಟಿ ಎಂಟ್ರಿ ಕೊಡಿದ ಸಿನಿಮಾ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆ ಕಂಡಿರುವ ಪ್ರೇಮದ ಊರಲಿ ಸಿನಿಮಾ ನಿರೀಕ್ಷೆಗೂ ಮೀರಿನ ಪ್ರದರ್ಶನವನ್ನು ಕಂಡಿದೆ.
ಕನ್ನಡ ಸಿನಿಮಾರಂಗದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿರುವ ಸಿನಿಮಾ ಪ್ರೇಮದ ಊರಲಿ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆದಿರುವ ಸಿನಿಮಾ ಇದೀಗ ಡಿಜಿಟಲ್‌ನಲ್ಲೂ ಪ್ರಸಾದರಕ್ಕೆ ಸಿದ್ದತೆ ನಡೆಸಿದೆ. ಪ್ರೇಮದ ಊರಲಿ ಒಟಿಟಿಯಲ್ಲಿ ರಿಲೀಸ್ ಆದ್ರೆ ಮನೆಯಲ್ಲಿಯೇ ಕುಳಿತು ಸಿನಿಮಾ ವೀಕ್ಷಿಸಬಹುದಾಗಿದೆ.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶನದಲ್ಲಿ ತೆರೆ ಕಂಡಿರುವ ಪ್ರೇಮದ ಊರಲಿ ಸಿನಿಮಾ ನಿರೀಕ್ಷೆಗೂ ಮೀರಿನ ಪ್ರದರ್ಶನವನ್ನು ಕಂಡಿದೆ. ಪ್ರೇಕ್ಷಕರು ನೀಡಿದ ಅತ್ಯುತ್ತಮ ವಿಮರ್ಷೆ ಜೊತೆಗೆ ಬಾಯಿಮಾತಿನ (Word of Mouth) ಪ್ರಚಾರ ಸಿನಿಮಾವನ್ನು ಗೆಲ್ಲಿಸಿದ್ದು, ದಿನೇ ದಿನೇ ಪ್ರದರ್ಶನಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ.
ಅತ್ಯಂತ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಪ್ರೇಮದ ಊರಲಿ ಸಿನಿಮಾ ಬಾಕ್ಸ್‌ಆಫೀಸ್‌ನಲ್ಲಿಯೂ ಅತ್ಯುತ್ತಮ ಕಲೆಕ್ಷನ್ಸ್ ಮಾಡಿದೆ. ಸಿನಿಮಾ ರಿಲೀಸ್ ಆಗಿರುವ ಕೇವಲ ಹತ್ತೇ ಹತ್ತು ದಿನಗಳಲ್ಲಿ ಭಾರತದಾದ್ಯಂತ ಬರೋಬ್ಬರಿ 16.96 ಕೋಟಿ ರೂಪಾಯಿ ಕಲೆಕ್ಷನ್ಸ್ ಮಾಡಿದೆ.
ಪ್ರೇಮದ ಊರಲಿ ಸಿನಿಮಾ ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು, ಪ್ರೇಮಿಗಳಷ್ಟೇ ಅಲ್ಲಾ, ಇಡೀ ಕುಟುಂಬ ಸಮೇತರಾಗಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದಾರೆ. ಹೀಗಾಗಿ ಪ್ರೇಕ್ಷಕರ ಸಂಖ್ಯೆಯಲ್ಲಿಯೂ ಏರಿಕೆ ಕಾಣುತ್ತಿದ್ದು, ಕನ್ನಡ ಸಿನಿಮಾಗಳ ಸಾಲಿನಲ್ಲಿ ಈ ವರ್ಷದ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರ್ಪಡೆ ಆಗಿದೆ.
ತೆಲುಗಿನಲ್ಲೂ ಹವಾ ಸೃಷ್ಟಿಸಿ ಪ್ರೇಮದ ಊರಲಿ
ಕನ್ನಡ ಚಿತ್ರರಂಗವಷ್ಟೇ ಅಲ್ಲಾ, ಸಿನಿಮಾ ಇದೀಗ ತೆಲುಗು ಆವೃತ್ತಿಯಲ್ಲಿಯೂ ಬಿಡುಗಡೆ ಆಗಿದ್ದು, ಸಿನಿಮಾವನ್ನು ತೆಲುಗು ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. ಗ್ರಾಮೀಣ ಸೊಗಡಿನ ಕಥೆಯನ್ನು ಹೊಂದಿದು, ಹೊರ ರಾಜ್ಯಗಳಲ್ಲಿಯೂ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕನ್ನಡ, ತೆಲುಗು ಬಳಿಕ ಇನ್ನಷ್ಟು ಭಾಷೆಗಳಲ್ಲಿ ಸಿನಿಮಾ ತೆರೆ ಕಾಣುವ ನಿರೀಕ್ಷೆಯಿದೆ.
ಏನಿದು 'ಪ್ರೇಮದ ಊರಲಿ' ಕಥೆ ?
ಒಂದು ಸುಂದರ ಹಳ್ಳಿಯಲ್ಲಿ ಸಾಗುವ ಪ್ರೇಮಕಥೆ. ಪ್ರೀತಿ, ಪ್ರೇಮದ ಜೊತೆಗೆ ಕುಟುಂಬ, ಮಮತೆಯ ಸಂಬಂಧಗಳ ಸುತ್ತ ಅದ್ಬುತವಾಗಿ ಕಥೆಯನ್ನು ಹಣೆಯಲಾಗಿದೆ. ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ನಾಯಕ, ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರಾಗಿರುವ ರಂಗಾಯಣ ರಘು ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಪ್ರೇಮದ ಊರಲಿ ಸಿನಿಮಾ ಒಟಿಟಿಗೆ ಯಾವಾಗ
ಕರ್ನಾಟಕ ಮಾತ್ರವಲ್ಲ ಭಾರತದಾದ್ಯಂತ ಸಾಕಷ್ಟು ಸದ್ದು ಮಾಡ್ತಾ ಇರೋ ಪ್ರೇಮದ ಊರಲಿ ಸಿನಿಮಾ ಇದೀಗ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿದೆ. ಸಿನಿಮಾ ಮುಂದಿನ ತಿಂಗಳು ಅಂದ್ರೆ ನವೆಂಬರ್‌ನಲ್ಲಿ ಒಟಿಟಿಗೆ ಬರುವುದು ಬಹುತೇಕ ಪಕ್ಕಾ. ಆದರೆ ಸಿನಿಮಾ ತಂಡ ಮಾತ್ರ ಈ ಕುರಿತು ಯಾವುದೇ ಖಚಿತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಪ್ರೇಮದ ಊರಲಿ ಸಿನಿಮಾದ ರೈಟ್ಸ್ ನೆಟ್‌ಪ್ಲಿಕ್ಸ್ ಅಥವಾ ಅಮೇಜಾನ್ ಪ್ರೈಮ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಆದರೆ ಯಾವ ಡಿಜಿಟಲ್ ವೇದಿಕೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಅನ್ನೋದನ್ನು ಖಚಿತ ಪಡಿಸಿಲ್ಲ.
Topics
ಸಂಬಂಧಿತ ಸುದ್ದಿಗಳು
news
WCL 2026 : ಯುವರಾಜ್ ಸಿಂಗ್ 6,6,6,6,6,6 ಆರ್ಭಟ : ಆಸ್ಟ್ರೇಲಿಯಾ ಚಾಂಪಿಯನ್ಸ್ ತತ್ತರ
news
Sigma Movie Review : ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಸಿಗ್ಮಾ ಸಿನಿಮಾ ಬಿಡುಗಡೆ
news
ಖಾದಿ ಗ್ರಾಮೋದ್ಯೋಗ ನೇಮಕಾತಿ : ಪರೀಕ್ಷೆಯಿಲ್ಲದೇ 40,000 ವರೆಗೆ ವೇತನ ! ಯಾರು ಅರ್ಜಿ ಸಲ್ಲಿಸಬಹುದು?
news

