ಇಂದಿನ ರಾಶಿ ಭವಿಷ್ಯ: ನಿಮ್ಮ ರಾಶಿಗಿದೆಯಾ ಅದೃಷ್ಟದ ಯೋಗ? | August 1 Daily Horoscope

ಅನಿರೀಕ್ಷಿತ ಸಂತೋಷ, ಧನಲಾಭ ಹಾಗೂ ಯಶಸ್ಸನ್ನು ತರಲಿದೆ. ಹಾಗಾದರೆ, ಆಗಸ್ಟ್ 1 ರಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ಒಲಿಯಲಿದೆ? ಇಲ್ಲಿದೆ ಸಂಪೂರ್ಣ ವಿವರ

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
today astrolgy
today astrolgy

ಆಗಸ್ಟ್ ತಿಂಗಳ ಮೊದಲ ದಿನವೇ ಕೆಲವು ರಾಶಿಯವರಿಗೆ ಅತ್ಯಂತ ವಿಶೇಷವಾಗಿರಲಿದೆ. ಗ್ರಹ ಮತ್ತು ನಕ್ಷತ್ರಗಳ ಶುಭ ಸಂಚಾರದಿಂದಾಗಿ ಇಂದಿನ ದಿನವು 5 ರಾಶಿಗಳ ಜಾತಕರಿಗೆ ಅನಿರೀಕ್ಷಿತ ಸಂತೋಷ, ಧನಲಾಭ ಹಾಗೂ ಯಶಸ್ಸನ್ನು ತರಲಿದೆ. ಹಾಗಾದರೆ, ಆಗಸ್ಟ್ 1 ರಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ಒಲಿಯಲಿದೆ? ಇಲ್ಲಿದೆ ಸಂಪೂರ್ಣ ವಿವರ!

 1.ಮೇಷ ರಾಶಿ (Aries)

ಮೇಷ ರಾಶಿ (Aries).webp

ಮೇಷ ರಾಶಿಯವರಿಗೆ ಇಂದು ಅತ್ಯಂತ ಲಾಭದಾಯಕ ದಿನ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಮತ್ತು ಮೇಲಧಿಕಾರಿಗಳಿಂದ ಶ್ಲಾಘನೆ ಸಿಗಲಿದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಯಿಂದ ಲಾಭವಾಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.

2. ಮಿಥುನ ರಾಶಿ (Gemini)

ಮಿಥುನ ರಾಶಿ (Gemini).webp

ಮಿಥುನ ರಾಶಿಯ ಜಾತಕರಿಗೆ ಹಣಕಾಸಿನ ವಿಚಾರದಲ್ಲಿ ದೊಡ್ಡ ಮಟ್ಟದ ಸಮಾಧಾನ ಸಿಗಲಿದೆ. ಬಾಕಿ ಉಳಿದಿದ್ದ ಹಣ ನಿಮ್ಮ ಕೈಸೇರಲಿದೆ. ಕುಟುಂಬದ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯಲಿದ್ದು, ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಗವಿದೆ.

3. ಸಿಂಹ ರಾಶಿ (Leo)

ಸಿಂಹ ರಾಶಿ (Leo).webp

ಸಿಂಹ ರಾಶಿಯವರಿಗೆ ಇಂದಿನ ದಿನ ಶುಭ ಸುದ್ದಿಗಳಿಂದ ಕೂಡ ಇರಲಿದೆ. ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ಸಿಗುವ ಸಾಧ್ಯತೆಯಿದೆ. ಮನಸ್ಸಿನಲ್ಲಿದ್ದ ಹಳೆಯ ಚಿಂತೆಗಳು ದೂರವಾಗಿ, ಹೊಸ ಹುರುಪಿನೊಂದಿಗೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೀರಿ.

4. ತುಲಾ ರಾಶಿ (Libra)

ತುಲಾ ರಾಶಿ (Libra).jpg

ತುಲಾ ರಾಶಿಯವರಿಗೆ ಇಂದಿನ ದಿನ ವೈಯಕ್ತಿಕ ಮತ್ತು ವೃತ್ತಿಜೀವನದಲ್ಲಿ ಸಮತೋಲನ ತರಲಿದೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲಿದ್ದ ಕಹಿ ನೆನಪುಗಳು ಮರೆತು ಬಂಧ ಗಟ್ಟಿಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ ಕಾಯುತ್ತಿದೆ.

5. ಧನು ರಾಶಿ (Sagittarius)

ಧನು ರಾಶಿ (Sagittarius).webp

ಧನು ರಾಶಿಯ ಜಾತಕರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ದೂರದ ಪ್ರಯಾಣದಿಂದ ಅನುಕೂಲವಾಗಲಿದ್ದು, ಹೊಸ ಉದ್ಯೋಗಾವಕಾಶಗಳು ನಿಮ್ಮ ಬಾಗಿಲು ತಟ್ಟಲಿವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಶಾಂತಿ ನೆಲೆಸಲಿದೆ.

ಮಿಕ್ಕ ರಾಶಿಯವರು  ತಾಳ್ಮೆಯಿಂದಿದ್ದು, ದೈನಂದಿನ ಕೆಲಸಗಳನ್ನು ಶ್ರದ್ಧೆಯಿಂದ ಮಾಡುವುದು ಒಳಿತು. ದಿನದ ಆರಂಭದಲ್ಲಿ ಕುಲದೇವರನ್ನು ಸ್ಮರಿಸಿ ಕೆಲಸ ಪ್ರಾರಂಭಿಸಿದರೆ ದಿನ ಪೂರ್ತಿ ಶುಭವಾಗುತ್ತದೆ.

Topics

Related News