ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಮತ್ತೋರ್ವ ಆರೋಪಿ ಅನೂಜ್ ಮೇಲೆ ಪೊಲೀಸರ ಶೂಟೌಟ್
ಆರೋಪಿ ಅನೂಜ್‌ನನ್ನು ಪೊಲೀಸರು ವಾಹನದಲ್ಲಿ ಕರೆಡುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹೆಬ್ರಿ ಸಮೀಪದಲ್ಲಿ ಮೂತ್ರ ವಿಸರ್ಜನೆಗಾಗಿ ಕೆಳಗೆ ಇಳಿದಿದ್ದಾನೆ.
By ಅಶ್ವಥ್ ಆಚಾರ್ಯ | Ashwath Acharya
1 min read
ಉಡುಪಿ : ಮುದರಂಗಡಿಯಲ್ಲಿ ನಡೆದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯ ಮೇಲೆ ಪೊಲೀಸರು ಶೂಟೌಟ್ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ನಡೆದಿದೆ.
ಆರೋಪಿ ಅನೂಜ್‌ನನ್ನು ಪೊಲೀಸರು ವಾಹನದಲ್ಲಿ ಕರೆಡುಕೊಂಡು ಹೋಗುತ್ತಿದ್ದ ವೇಳೆಯಲ್ಲಿ ಹೆಬ್ರಿ ಸಮೀಪದಲ್ಲಿ ಮೂತ್ರ ವಿಸರ್ಜನೆಗಾಗಿ ಕೆಳಗೆ ಇಳಿದಿದ್ದಾನೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆಯಲ್ಲಿ ಆರೋಪಿಯನ್ನು ಸೆರೆ ಹಿಡಿಯುವ ಸಲುವಾಗಿ ಕೊಲ್ಲೂರು ಪಿಎಸ್‌ಐ ವಿಜಯ್ ಕೊರ್ಲಹಳ್ಳಿ ಹಾಗೂ ನಂಜ ನಾಯಕ್ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾರೆ.
ಗಾಯಗೊಂಡಿರುವ ಅನೂಜ್ ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೇ ಈ ಕಾರ್ಯಾಚರಣೆಯ ವೇಳೆಯಲ್ಲಿ ಹೆಡ್ ಕಾನ್‌ಸ್ಟೇಬಲ್‌ಗಳಾದ ಮೋಹನ್ ಹಾಗೂ ಶ್ಯಾಮ್ ಕೂಡ ಗಾಯಗೊಂಡಿದ್ದಾರೆ.
ಪ್ರಕರಣ ಆರೋಪಿಯಾಗಿರುವ ಅನೂಜ್ ಕರ್ನಾಟಕ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿಯಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಆಗಿದ್ದಾನೆ. ಡೇವಿಡ್ ಹತ್ಯೆಗೆ ಸಂಬಂಧಿಸಿದಂತೆ ಹೊರ ರಾಜ್ಯಗಳಿಂದ ಶೂಟರ್‌ಗಳನ್ನು ಒದಗಿಸಿದ್ದು ಕೂಡ ಇದೇ ಅನೂಜ್ ಅನ್ನೋದು ತನಿಖೆಯಿಂದ ಬಯಲಾಗಿತ್ತು.
Topics
ಸಂಬಂಧಿತ ಸುದ್ದಿಗಳು
udupi
ಬ್ರಹ್ಮಾವರದಲ್ಲಿ ಡಬಲ್ ಮರ್ಡರ್: ಹೆತ್ತವರನ್ನೇ ಕೊಂದು ಪೊಲೀಸರಿಗೆ ಶರಣಾದ ಹಂತಕ ಮಗ!
udupi
Brahmavar Double Murder : ಬ್ರಹ್ಮಾವರದಲ್ಲಿ ಡಬ್ಬಲ್ ಮರ್ಡರ್ : ತಂದೆ, ತಾಯಿಯನ್ನು ಸುತ್ತಿಗೆಯಿಂದ ಹತ್ಯೆಗೈದ ಮಗ
udupi
ಉಡುಪಿಯಲ್ಲಿ ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ಧಿಡೀರ್ ದಾಳಿ: ಕೃತಕ ರಾಸಾಯನಿಕ ವಶ!
udupi

