ಕೋಟೇಶ್ವರ : ಸಹಕಾರಿ ಸಂಘದ ಸಿಇಓ ರಾಘವೇಂದ್ರ ಜೋಗಿ ಆತ್ಮಹತ್ಯೆ
ಕಟ್ ಬೇಲ್ತೂರಿನ ತಮ್ಮ ನಿವಾಸದ ಬಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
By Darshan Shetty Narkali | ದರ್ಶನ್ ಶೆಟ್ಟಿ ನಾರ್ಕಳಿ
1 min read
ಕುಂದಾಪುರ : ಕೋಟೇಶ್ವರದಲ್ಲಿರುವ ಜೀಗಿ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಜೋಗಿ (48 ವರ್ಷ) ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂದಾಪುರದ ಕಟ್ ಬೇಲ್ತೂರು ನಿವಾಸಿಯಾಗಿದ್ದ ರಾಘವೇಂದ್ರ ಜೋಗಿ ಅವರು ಕಳೆದ 18 ವರ್ಷಗಳಿಂದಲೂ ಕೋಟೇಶ್ವರದ ಜೋಗಿ ವಿವಿದೋದ್ದೇಶ ಸಹಕಾರಿ ಸಂಘದಲ್ಲಿ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಸೆಪ್ಟೆಂಬರ್ 24ರಂದು ಮಧ್ಯಾಹ್ನ ಕಟ್ ಬೇಲ್ತೂರಿನ ತಮ್ಮ ನಿವಾಸದ ಬಳಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಹಾಗೂ ಮಗಳ ಜೊತೆಯಲ್ಲಿ ರಾಘವೇಂದ್ರ ಜೋಗಿ ಅವರು ವಾಸವಾಗಿದ್ದರು.
ಪತಿ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಪತ್ನಿ ಸುಕನ್ಯಾ ಅವರು ರಾಘವೇಂದ್ರ ಜೋಗಿ ಅವರ ಸಹೋದರ ರಾಜೇಶ್ ಜೋಗಿ ಅವರಿಗೆ ಕರೆ ಮಾಡಿದ್ದು. ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ರಾಘವೇಂದ್ರ ಜೋಗಿ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯ್ತು.
ಆದರೆ ಆಸ್ಪತ್ರೆಗೆ ತೆರಳುತ್ತಿದ್ದಂತೆಯೇ ರಾಘವೇಂದ್ರ ಜೋಗಿ ಅವರು ಮೃತಪಟ್ಟಿರುವುದನ್ನು ವೈದ್ಯಾಧಿಕಾರಿಗಲು ಖಚಿತಪಡಿಸಿದ್ದಾರೆ. ಮೃತರ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ವೈಯಕ್ತಿಕ ಕಾರಣ ಅಥವಾ ಇತರ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಮೃತರ ಸಹೋದರ ರಾಜೇಶ್ ಜೋಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
Topics
ಸಂಬಂಧಿತ ಸುದ್ದಿಗಳು
udupi
ಕುಂದಾಪುರ : 9 ತುಂಡುಗಳಾಗಿದ್ದ ಅಲ್ವಿನ್ ಪ್ರಕಾಶ್ ಕುಂದರ್ ಹುಟ್ಟೂರಲ್ಲಿ ಅಂತ್ಯಕ್ರೀಯೆ, ಆರೋಪಿಗಳ ಪತ್ತೆಗೆ ಆಗ್ರಹ
udupi
ಕುಂದಾಪುರಕ್ಕೆ ಬಂದ ಅಲ್ವಿನ್ ಪ್ರಕಾಶ್ ಕುಂದರ್ ಮೃತದೇಹ
udupi
ಪಡುಬಿದ್ರಿ : ಸಿಗಡಿ ಸಾಕಾಣಿಕೆಗೆ ಕರ್ನಾಟಕ ಬ್ಯಾಂಕ್ನಿಂದ 3 ಕೋಟಿ ಸಾಲ ಪಡೆದು ವಂಚನೆ, ನಾಲ್ವರ ವಿರುದ್ದ ಪ್ರಕರಣ ದಾಖಲು
udupi

