ಕುಂದಾಪುರ: ದನ ಕಳವಿಗೆ ವಿಫಲ ಯತ್ನ; ತಲವಾರು ತೋರಿಸಿ ಬೆದರಿಕೆ ಹಾಕಿ, ಆರೋಪಿಗಳು ಎಸ್ಕೇಪ್
ಹಸುವನ್ನು ಕಾರಿನಲ್ಲಿ ತುಂಬಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಬಂದ ಹರೀಶ್ ಶೆಟ್ಟಿ ಎಂಬವರನ್ನು ನೋಡಿ ಆರೋಪಿಗಳು ಹಸುವನ್ನು ಸ್ಥಳದಲ್ಲಿಯೇ ಬಿಟ್ಟಿದ್ದಾರೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಕುಂದಾಪುರ : ಮನೆಯ ಬಳಿಯಲ್ಲಿ ಇರುವ ಗೇರು ಹಾಡಿಯಲ್ಲಿ ಮೇಯುತ್ತಿದ್ದ ದನವನ್ನು ಬಲವಂತವಾಗಿ ಕಾರಿನಲ್ಲಿ ತುಂಬಿಸಿಕೊಂಡು, ಕಳವಿಗೆ ಉತ್ನಿಸಿದ ಘಟನೆ ಕುಂದಾಪುರ ತಾಲೂಕಿನ ಕಾವ್ರಾಡಿ ಎಂಬಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಕಾವ್ರಾಡಿಯ ನಿವಾಸಿಯಾಗಿರುವ ಪ್ರಕಾಶ್ ಎಂಬವರು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದು, ಇಮ್ತಿಯಾಝ್, ರಿಜ್ವಾನ್ ಅಲಿಯಾಸ್ ದಸ್ತರೀರ್ ಹಾಗೂ ಜಿಮಾಮ್ ಎಂಬವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕಾಶ್ ಅವರು ಕೃಷಿ ಮತ್ತು ಹೈನುಗಾರಿಕೆಯನ್ನು ಮಾಡುತ್ತಿದ್ದರು. ಎಂದಿನಂತೆಯೇ ಹಸುವನ್ನು ಮನೆಯ ಸಮೀಪದಲ್ಲಿ ಇರುವ ಗೇರು ಹಾಡಿಯಲ್ಲಿ ಮೇಯುವುದಕ್ಕೆ ಬಿಟ್ಟಿದ್ದರು. ಅಕ್ಟೋಬರ್ 15ರಂದು ಮಧ್ಯಾಹ್ನ 1.15ರ ಸುಮಾರಿಗೆ ವಾಲ್ತೂರು ಗ್ರಾಮದ ಕೊಕ್ಕೋಡಿಗೆ ಹೋಗುವ ದಾರಿಯ ಬಳಿಯ ಗೇರು ಹಾಡಿಯಲ್ಲಿ ಮೇಯುತ್ತಿದ್ದ ಹಸುವಿನ ಕಣ್ಣಿಗೆ ಬಟ್ಟೆ ಕಟ್ಟಿ, ಹಿಂಸಾತ್ಮಕವಾಗಿ ಕಳವು ಮಾಡಲು ಯತ್ನಿಸಿದ್ದಾರೆ.
ಹಸುವನ್ನು ಕಾರಿನಲ್ಲಿ ತುಂಬಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸುತ್ತಿದ್ದ ವೇಳೆಯಲ್ಲಿ ಸ್ಥಳಕ್ಕೆ ಬಂದ ಹರೀಶ್ ಶೆಟ್ಟಿ ಎಂಬವರನ್ನು ನೋಡಿ ಆರೋಪಿಗಳು ಹಸುವನ್ನು ಸ್ಥಳದಲ್ಲಿಯೇ ಬಿಟ್ಟಿದ್ದಾರೆ. ಅಲ್ಲದೇ ಹರೀಶ್ ಶೆಟ್ಟಿ ಎಂಬವರಿಗೆ ತಲವಾರು ತೋರಿಸಿ ಬೆದರಿಕೆ ಹಾಕಿದ್ದಾರೆ. ಕಾರು ಹಾಗೂ ಸ್ಕೂಟಿಯಲ್ಲಿ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಕಾವ್ರಾಡಿ ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಕಾರನ್ನು ಬಿಟ್ಟು ಸ್ಕೂಟಿಯಲ್ಲಿ ಎಸ್ಕೇಪ್ ಆಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಕುಂದಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ.
Topics
ಸಂಬಂಧಿತ ಸುದ್ದಿಗಳು
udupi
ಹಿರಿಯ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ
udupi
ಕೃಷ್ಣನೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಧಾರ್ಮಿಕ ಪ್ರವಾಸ : ಉಚ್ಚಿಲ ಮಹಾಲಕ್ಷ್ಮಿ ಸನ್ನಿಧಿಗೆ ಭೇಟಿ
udupi
ಬ್ಯಾಂಕ್ ಆಫ್ ಬರೋಡಾ ವಿರುದ್ದ ಉದ್ಯಮಿ ಬಿಆರ್ ಶೆಟ್ಟಿ ಕಾನೂನು ಸಮರ : ಬಾಂಬೆ ಹೈಕೋರ್ಟ್ನಲ್ಲಿ 1.44 ಲಕ್ಷ ಕೋಟಿ ದಾವೆ
udupi

