ಹಿರಿಯ ಯಕ್ಷಗಾನ ಕಲಾವಿದ ಥಂಡಿಮನೆ ಶ್ರೀಪಾದ ಭಟ್ ನಿಧನ
ಶ್ರೀಪಾದ ಭಟ್ ಅವರು ತಮ್ಮ ಕಲಾ ಬದುಕಿನಲ್ಲಿ ಬಡಗುತಿಟ್ಟು ಶೈಲಿಯ ಪ್ರಮುಖ ಟೆಂಟ್ ಯಕ್ಷಗಾನ ಮೇಳಗಳಾದ ಸಾಲಿಗ್ರಾಮ ಮತ್ತು ಪೆರ್ಡೂರು ಸೇರಿದಂತೆ ಹಲವು ಪ್ರಸಿದ್ಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.
By Darshan Shetty Narkali | ದರ್ಶನ್ ಶೆಟ್ಟಿ ನಾರ್ಕಳಿ
1 min read
ಉಡುಪಿ: ಬಡಗುತಿಟ್ಟು ಯಕ್ಷಗಾನದ ಹಿರಿಯ ಹಾಗೂ ಹೆಸರಾಂತ ಕಲಾವಿದರಾದ ಥಂಡಿಮನೆ ಶ್ರೀಪಾದ ಭಟ್ ಅವರು 62ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಅಗಲಿಕೆ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಕಲಾಭಿಮಾನಿಗಳು, ಸಹ ಕಲಾವಿದರು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶ್ರೀಪಾದ ಭಟ್ ಅವರು ತಮ್ಮ ಕಲಾ ಬದುಕಿನಲ್ಲಿ ಬಡಗುತಿಟ್ಟು ಶೈಲಿಯ ಪ್ರಮುಖ ಟೆಂಟ್ ಯಕ್ಷಗಾನ ಮೇಳಗಳಾದ ಸಾಲಿಗ್ರಾಮ ಮತ್ತು ಪೆರ್ಡೂರು ಸೇರಿದಂತೆ ಹಲವು ಪ್ರಸಿದ್ಧ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು. ಇದಲ್ಲದೆ, ಅನೇಕ ಬಯಲಾಟ ಮೇಳಗಳಲ್ಲಿಯೂ ಅವರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು.
ಗಂಭೀರ ವ್ಯಕ್ತಿತ್ವ, ವೇಷ, ನೃತ್ಯ ಹಾಗೂ ಪಾತ್ರದ ಸಂಭಾಷಣೆ ಮತ್ತು ಭಾವಾರ್ಥವನ್ನು ಆಳವಾಗಿ ಅರ್ಥೈಸುವ ಸಾಮರ್ಥ್ಯವು ಶ್ರೀಪಾದ ಭಟ್ ಅವರ ಕಲಾಜೀವನದ ಪ್ರಮುಖ ವೈಶಿಷ್ಟ್ಯವಾಗಿತ್ತು. ನಾಯಕ ಹಾಗೂ ಖಳನಾಯಕ ಪಾತ್ರಗಳಲ್ಲಿ ಸಮಾನವಾಗಿ ಮಿಂಚಿದ ಅವರು ಬಡಗುತಿಟ್ಟು ಯಕ್ಷಗಾನ ಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.
ಉತ್ತರ ಬಡಗುತಿಟ್ಟು ಶೈಲಿಯ ಹಲವು ಹಿರಿಯ ಕಲಾವಿದರೊಂದಿಗೆ ಅವರು ಆತ್ಮೀಯ ಒಡನಾಟ ಹೊಂದಿದ್ದರು.
ಪೌರಾಣಿಕ ಕಥಾನಕಗಳ ವಿವಿಧ ಪಾತ್ರಗಳಿಗೆ ಜೀವ ತುಂಬುವ ಮೂಲಕ ಯಕ್ಷಗಾನ ರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಯಕ್ಷಗಾನದ ಮೇರು ಪಾತ್ರಗಳಾದ ದುಷ್ಟಬುದ್ಧಿ, ಭೀಷ್ಮ, ವೀರಮಣಿ, ಶಾಲ್ವ, ಹನುಮಂತ, ರಾವಣ, ಶ್ರೀರಾಮ, ದಕ್ಷ, ಹಾಗೂ ಈಶ್ವರ ಸೇರಿದಂತೆ ಅನೇಕ ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ ಕಲಾಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು.
Topics
ಸಂಬಂಧಿತ ಸುದ್ದಿಗಳು
udupi
ಕೃಷ್ಣನೂರಿನಲ್ಲಿ ಸಿಎಂ ಡಿ.ಕೆ ಶಿವಕುಮಾರ್ ಧಾರ್ಮಿಕ ಪ್ರವಾಸ : ಉಚ್ಚಿಲ ಮಹಾಲಕ್ಷ್ಮಿ ಸನ್ನಿಧಿಗೆ ಭೇಟಿ
udupi
ಬ್ಯಾಂಕ್ ಆಫ್ ಬರೋಡಾ ವಿರುದ್ದ ಉದ್ಯಮಿ ಬಿಆರ್ ಶೆಟ್ಟಿ ಕಾನೂನು ಸಮರ : ಬಾಂಬೆ ಹೈಕೋರ್ಟ್ನಲ್ಲಿ 1.44 ಲಕ್ಷ ಕೋಟಿ ದಾವೆ
udupi
ಕೋಟ: ಅಕ್ರಮ ಜಾನುವಾರು ಸಾಗಾಟ; ಬುಲೆರೋ ಪಿಕಪ್ ವಾಹನ ಸೇರಿ 4 ಮಂದಿ ವಶ
udupi

