Kannada News Next

religion

ಒಂಬತ್ತು ದಿನ, ಒಂಬತ್ತು ಬಣ್ಣ : ನವರಾತ್ರಿಯ ಪ್ರತಿದಿನದ ವೈಭವಕ್ಕೆ ಇಲ್ಲಿದೆ ನವ ವರ್ಣಗಳ ಪಟ್ಟಿ

ನವರಾತ್ರಿಯ ನವ ವರ್ಣಗಳಿಗೆ ಅದರದೇ ಆದ ಪ್ರಾಮುಖ್ಯತೆಯಿದೆ. ಯಾವ ಬಣ್ಣವನ್ನು ಯಾವ ದಿನ ಧರಿಸಬೇಕು? ಇಲ್ಲಿದೆ ಬಣ್ಣಗಳ ಪಟ್ಟಿ...

By Archana V Bhat | ಅರ್ಚನಾ ವಿ ಭಟ್‌
Navaratri colors

ಹಿಂದೂ ಕ್ಯಾಲೆಂಡರ್‌ ಪ್ರಕಾರ ಇಂದಿನಿಂದ (ಅಕ್ಟೋಬರ್‌ 11, 2026) ಶರನ್ನ ನವರಾತ್ರಿ ಪ್ರಾರಂಭವಾಗುತ್ತದೆ. ಇದು ದೇವಿಯ ಒಂಬತ್ತು ರೂಪಗಳನ್ನು ಪ್ರತಿದಿನ ಒಂದರಂತೆ ಒಂಬತ್ತು ದಿನ ಪೂಜಿಸುವ ಹಬ್ಬವಾಗಿದೆ. ನವರಾತ್ರಿಯ ಸಮಯದಲ್ಲಿ ಭಕ್ತರು ಶಕ್ತಿರೂಪಿಣಿಯಾದ ದುರ್ಗಾದೇವಿಯನ್ನು ಬಹಳ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ದೇವಿಗೆ ಪ್ರಿಯವಾದ ತಿಂಡಿಗಳನ್ನು ತಯಾರಿಸಿ ಅರ್ಪಿಸುತ್ತಾರೆ. ಬಣ್ಣಗಳ ಮೂಲಕವೂ ನವರಾತ್ರಿಯನ್ನು ಆಚರಿಸುತ್ತಾರೆ. ಒಂಬತ್ತು ಬಣ್ಣಗಳು ದೇವಿಯ ರೂಪವನ್ನು ಪ್ರತಿನಿಧಿಸುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ ನವರಾತ್ರಿಯ ನವ ವರ್ಣಗಳಿಗೆ ಅದರದೇ ಆದ ಪ್ರಾಮುಖ್ಯತೆಯಿದೆ. ಪ್ರತಿ ಬಣ್ಣವು ಶುಭ ಸಂಕೇತದ ಜೊತೆಗೆ ಜೀವನದಲ್ಲಿ ಸಂತೋಷ, ಶಾಂತಿ ಹಾಗೂ ಸಮೃದ್ಧಿಯನ್ನು ತರುತ್ತವೆ ಎಂದು ನಂಬಲಾಗಿದೆ.

ದೇವಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸುವುದರಿಂದ, ನೆಚ್ಚಿನ ಬಣ್ಣದ ಬಟ್ಟೆಗಳನ್ನು ಧರಿಸಿದಾಗ ಶುಭ ಫಲಿತಾಂಶಗಳು ಸಿಗುತ್ತವೆ ಎಂಬ ನಂಬಿಕೆಯಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ಒಂಬತ್ತು ರೂಪಗಳನ್ನು ಪ್ರತಿನಿಧಿಸುವ ಯಾವ ಬಣ್ಣಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ ಎಂದು ನೋಡೋಣ.

ಮೊದಲ ದಿನ (ಅಕ್ಟೋಬರ್ 11, ಭಾನುವಾರ) : ಕಿತ್ತಳೆ ಬಣ್ಣ (Orange)

ನವರಾತ್ರಿಯ ಮೊದಲ ದಿನವನ್ನುದಿನ ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಪರಿಗಣಿಸಲಾಗಿದೆ. ಇದು ಶಕ್ತಿ ಮತ್ತು ಉತ್ಸಾಹದ ಸಂಕೇತ.

ಎರಡನೇ ದಿನ (ಅಕ್ಟೋಬರ್‌ 12, ಸೋಮವಾರ) : ಬಿಳಿ ಬಣ್ಣ (White)

ಎರಡನೇ ದಿನ ದೇವಿಯನ್ನು ಬ್ರಹ್ಮಚಾರಿಣಿಯಾಗಿ ಪೂಜಿಸುತ್ತಾರೆ. ಬ್ರಹ್ಮಚಾರಿಣಿ ದೇವಿಗೆ ಬಿಳಿ ಬಣ್ಣ ಬಹಳ ಪ್ರಿಯವಾಗಿದೆ. ಆದ್ದರಿಂದ ಈ ದಿನ ಬಿಳಿ ಬಟ್ಟೆಗಳನ್ನು ಧರಿಸಲಾಗುತ್ತದೆ. ಇದು ಶಾಂತಿ ಮತ್ತು ಏಕಾಗ್ರತೆಯ ಸಂಕೇತ.

ಮೂರನೇ ದಿನ (ಅಕ್ಟೋಬರ್‌ 13, ಮಂಗಳವಾರ) : ಕೆಂಪು ಬಣ್ಣ (Red)

ನವರಾತ್ರಿಯ ಮೂರನೇ ದಿನವು ಚಂದ್ರಘಂಟಾ ದೇವಿಗೆ ಸಮರ್ಪಿತವಾಗಿದೆ. ಈ ದಿನ ಕೆಂಪು ಬಟ್ಟೆ ಧರಿಸುವುದರಿಂದ ಶುಭವೆಂದು ಪರಿಗಣಿಸಲಾಗಿದೆ. ಕೆಂಪು ಬಣ್ಣವು ಕೆಂಪು ಮತ್ತು ಧೈರ್ಯದ ಸಂಕೇತವಾಗಿದೆ.

ನಾಲ್ಕನೇ ದಿನ (ಅಕ್ಟೋಬರ್‌ 14, ಬುಧವಾರ) : ನೀಲಿ ಬಣ್ಣ (Royal Blue)

ನವರಾತ್ರಿಯ ನಾಲ್ಕನೇ ದಿನವನ್ನು ಕೂಷ್ಮಾಂಡಾ ದೇವಿಯ ಪೂಜೆ ಮಾಡಲಾಗುತ್ತದೆ. ನೀಲಿ ಬಣ್ಣ ಈ ದೇವಿಗೆ ಪ್ರಿಯವಾಗಿದೆ. ಈ ಬಣ್ಣವು ಬುದ್ಧಿವಂತಿಕೆ ಮತ್ತು ಶಾಂತಿಯ ಸಂಕೇತವಾಗಿದೆ.

ಐದನೇ ದಿನ (ಅಕ್ಟೋಬರ್‌ 15, ಗುರುವಾರ) : ಹಳದಿ ಬಣ್ಣ (Yellow)

ನವರಾತ್ರಿಯ ಐದನೇ ದಿನವು ಸ್ಕಂದಮಾತೆಯನ್ನು ಒಲಿಸಿಕೊಳ್ಳುವ ದನ. ಈ ದಿನ ಹಳದಿ ಬಣ್ಣಕ್ಕೆ ಮೀಸಲು. ಇದು ಸಂತೋಷ ಮತ್ತು ಬೆಳಕಿನ ಸಂಕೇತವಾಗಿದೆ.

ಆರನೇ ದಿನ (ಅಕ್ಟೋಬರ್‌ 16, ಶುಕ್ರವಾರ) : ಹಸಿರು ಬಣ್ಣ (Green)

ಈ ದಿನದಂದು ದೇವಿಯನ್ನು ಕಾತ್ಯಾಯನಿ ದೇವಿಯಾಗಿ ಪೂಜಿಸಲಾಗುತ್ತದೆ. ಈ ದಿನ ಹಸಿರು ಬಣ್ಣ ಧರಿಸುವುದರಿಂದ ದೇವಿಯ ಕೃಪೆಗೆ ಪಾತ್ರರರಾಗಬಹುದು ಎಂಬ ನಂಬಿಕೆಯಿದೆ. ಈ ಬಣ್ಣವು ಬೆಳವಣಿಗೆ ಮತ್ತು ಸಮೃದ್ಧಿಯ ಸಂಕೇತವಾಗಿದೆ.

ಏಳನೇ ದಿನ (ಅಕ್ಟೋಬರ್‌ 17, ಶನಿವಾರ) : ಬೂದು ಬಣ್ಣ (Grey)

ಭಕ್ತರು ನವರಾತ್ರಿಯ ಏಳನೇ ದಿನವನ್ನು ಕಾಳರಾತ್ರಿ ದೇವಿಯನ್ನು ಪೂಜಿಸುತ್ತಾರೆ. ಈ ದಿನ ಬೂದು ಬಣ್ಣ ದೇವಿಗೆ ಪ್ರಿಯವಾದ ಬಣ್ಣವಾಗಿದೆ. ಈ ಬಣ್ಣವು ಮಾನಸಿಕ ಸಮತೋಲನದ ಸಂಕೇತವಾಗಿದೆ.

ಎಂಟನೇ ದಿನ (ಅಕ್ಟೋಬರ್‌ 18, ಭಾನುವಾರ) : ನೇರಳೆ ಬಣ್ಣ (Purple)

ನವರಾತ್ರಿಯ ಎಂಟನೇ ದಿನವು ಮಹಾಗೌರಿಯ ಆಶೀರ್ವಾದ ಪಡೆಯುವ ದಿನ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ. ಇದು ಆಧ್ಯಾತ್ಮಿಕ ಮತ್ತು ಐಷಾರಾಮಿಯ ಸಂಕೇತವಾಗಿದೆ.

ಒಂಬತ್ತನೇ ದಿನ (ಅಕ್ಟೋಬರ್‌ 19, ಸೋಮವಾರ) : ನವಿಲು ಹಸಿರು (Peacock Green)

ನವರಾತ್ರಿಯ ಕೊನೆಯ ದಿನವನ್ನು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ನವಿಲು ಹಸಿರು ಈ ದೇವಿಗೆ ಪ್ರಿಯವಾದ ಬಣ್ಣ. ಇದು ಅನನ್ಯ ಮತ್ತು ಪ್ರತ್ಯೇಕತೆಯ ಸಂಕೇತವಾಗಿದೆ.