ನವರಾತ್ರಿ 2026 ಪ್ರಾರಂಭ : ಮೊದಲನೇ ದಿನ ಶೈಲಪುತ್ರಿ : ಘಟಸ್ಥಾಪನೆಗೆ ಶುಭ ಸಮಯ ಯಾವುದು?
ಈ ವರ್ಷದ ಶರನ್ನ ನವರಾತ್ರಿ ಅಕ್ಟೋಬರ್ 11 ರಿಂದ ಪ್ರಾರಂಭವಾಗಲಿದೆ. ಹತ್ತು ದಿನದ ದಸರಾ ಮಹೋತ್ಸವದ ಘಟಸ್ಥಾಪನೆಯ ಶುಭ ಮುಹೂರ್ತ ಯಾವುದು?
By Archana V Bhat | ಅರ್ಚನಾ ವಿ ಭಟ್
1 min read
ಭಾರತದ ಉದ್ದಗಲಕ್ಕೂ ಮಾತೆ ಪಾರ್ವತಿಯನ್ನು ಶಕ್ತಿ ಸ್ವರೂಪಿಣಿಯಾಗಿ ಪೂಜಿಸುವ ಹಬ್ಬವೇ ನವರಾತ್ರಿ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿವಿಧ ರೂಪಗಳಲ್ಲಿ ಭಕ್ತಿ ಭಾವದಿಂದ ಪೂಜಿಸಲಾಗುತ್ತದೆ. ಹತ್ತು ದಿನಗಳ ಕಾಲ ನಡೆಯುವ ದಸರಾ ಪ್ರಾರಂಭವಾಗುವುದು ಮಹಾಲಯ ಅಮಾವಾಸ್ಯೆಯ ಮರುದಿನ ಅಂದರೆ ಆಶ್ವೀಜ ಮಾಸದ ಮೊದಲ ದಿನ, ಪಾಡ್ಯದ ತಿಥಿಯಂದು. ಈ ದಿನ ಘಟಸ್ಥಾಪನೆ (ಕಲಶ ಸ್ಥಾಪನೆ) ಮಾಡಲಾಗುತ್ತದೆ. ಅಖಂಡ ಜ್ಯೋತಿಯನ್ನು ಬೆಳಗಿಸಲಾಗುತ್ತದೆ. ನವರಾತ್ರಿಯ ಮೊದಲನೇ ದಿನವಾದ ಘಟ ಸ್ಥಾಪನೆಗೆ ವಿಶೇಷ ಮಹತ್ವವಿದೆ. ಈ ದಿನದಿಂದ ದುರ್ಗಾ ದೇವಿಯ ಪೂಜೆ ಪ್ರಾರಂಭವಾಗುತ್ತದೆ. ಮೊದಲನೇ ದಿನ ಭಕ್ತರು ತಮ್ಮ ಮನೆಗಳಲ್ಲಿ ಘಟಸ್ಥಾಪನೆ ಮಾಡಿ, ಶೈಲಪುತ್ರಿಯಾಗಿ ದೇವಿಯನ್ನು ಪೂಜಿಸುತ್ತಾರೆ. ಹಿಂದೂ ಕ್ಯಾಲೆಂಡರ್‌ನ ಪ್ರಕಾರ ಈ ವರ್ಷ ನವರಾತ್ರಿಯನ್ನು ಅಕ್ಟೋಬರ್ 11 ರಿಂದ ಆಚರಿಸಲಾಗುತ್ತಿದೆ. ಈ ದಿನ ಘಟಸ್ಥಾಪನೆಗೆ ಶುಭ ಮುಹೂರ್ತ ಯಾವುದು? ಮೊದಲನೇ ದಿನ ದೇವಿಯನ್ನು ಶೈಲಪುತ್ರಿಯಾಗಿ ಪೂಜಿಸುವುದೇಕೆ?
ನವರಾತ್ರಿ 2026 : ಘಟ ಸ್ಥಾಪನೆಗೆ ಶುಭ ಸಮಯ
ಪಂಚಾಂಗದ ಪ್ರಕಾರ ಆಶ್ವೀಜ ಮಾಸದ ಶುಕ್ಲ ಪಕ್ಷದ ಪಾಡ್ಯ ತಿಥಿ ಅಕ್ಟೋಬರ್ 11 ರಿಂದ ನವರಾತ್ರಿ ಪ್ರಾರಂಭವಾಗುತ್ತದೆ. ಉದಯ ತಿಥಿಯ ಆಧಾರದ ಮೇಲೆ ಶರನ್ ನವರಾತ್ರಿಯ ಘಟಸ್ಥಾಪನೆಯ ಶುಭ ಸಮಯ ಬೆಳಿಗ್ಗೆ 6:19 ರಿಂದ 10:12 ರವರೆಗೆ ಇರುತ್ತದೆ. ಅಂದರೆ ಘಟಸ್ಥಾಪನೆಗೆ ಸುಮಾರು 3 ಗಂಟೆ 52 ನಿಮಿಷಗಳು ಲಭ್ಯವಿರುತ್ತದೆ. ಇದಲ್ಲದೆ, ಅಭಿಜೀತ್ ಮುಹೂರ್ತ ಬೆಳಿಗ್ಗೆ 11:45 ರಿಂದ ಮಧ್ಯಾಹ್ನ 12:31 ರವರೆಗೆ ಇರುತ್ತದೆ.
ನವರಾತ್ರಿ ಮೊದಲ ದಿನ ಶೈಲಪುತ್ರಿ
ನವರಾತ್ರಿಯ ಮೊದಲ ದಿನದಂದು ದುರ್ಗಾ ದೇವಿಯ ಶೈಲಪುತ್ರಿಯ ರೂಪವನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ ಶೈಲಪುತ್ರಿಯು ಪರ್ವತ ರಾಜ ಹಿಮವಂತನ ಮಗಳು. ಅವಳು ಶಕ್ತಿ, ಸ್ಥಿರತೆ ಹಾಗೂ ದೃಢಸಂಕಲ್ಪದ ಸಂಕೇತವೆಂದು ಪರಿಗಣಿಸಲಾಗಿದೆ. ಬಿಳಿ ಬಣ್ಣವು ಶೈಲಪುತ್ರಿಗೆ ಪ್ರಿಯವಾದದ್ದು. ಹಾಗಾಗಿ ಈ ದಿನದಂದು ಬಿಳಿ ಹೂವು ಮತ್ತು ಬಿಳಿ ಸಿಹಿತಿಂಡಿಗಳನ್ನು ಅರ್ಪಿಸಲಾಗುತ್ತದೆ. ಆದರೆ ನಿಮ್ಮ ಕುಟುಂಬದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿಯಿದ್ದರೆ ಅದನ್ನೇ ಪಾಲಿಸಿ.
Topics
ಸಂಬಂಧಿತ ಸುದ್ದಿಗಳು
religion
ಮಹಾಲಯ ಅಮಾವಾಸ್ಯೆ 2026 ಯಾವಾಗ ? ದಿನಾಂಕ, ಸಮಯ ಮತ್ತು ಮಹತ್ವ !
religion
Vastu Tips: ಮನೆಯ ಕಿಟಕಿ ಮುಚ್ಚಿಟ್ರೆ ಸಮಸ್ಯೆ ಆಗುತ್ತಾ ? ವಾಸ್ತು ನಿಯಮ ತಿಳಿಯಿರಿ
religion
Vastu Tips : ಈ ದಿಕ್ಕಿನಲ್ಲಿ ಗಡಿಯಾರ ಇದ್ರೆ ಮನೆಯಲ್ಲಿ ದೊಡ್ಡ ಆಪತ್ತು...! ಕೂಡಲೇ ಬದಲಿಸಿ
religion

