Vastu Tips: ಮನೆಯ ಕಿಟಕಿ ಮುಚ್ಚಿಟ್ರೆ ಸಮಸ್ಯೆ ಆಗುತ್ತಾ ? ವಾಸ್ತು ನಿಯಮ ತಿಳಿಯಿರಿ
ಮನೆಯಲ್ಲಿನ ಕಿಟಕಿಗಳನ್ನು ಮುಚ್ಚಿ ಇಟ್ಟರೆ, ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ವಾಸ್ತು ನಿಯಮದ ಪ್ರಕಾರ ಬೆಳಗಿನ ಅವಧಿಯಲ್ಲಿ ಕಿಟಕಿಗಳನ್ನು ತೆರೆದು ಇಡುವುದು ಶುಭದಾಯಕ ಎಂದು ನಂಬಲಾಗಿದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
Vastu Tips: ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಇರುವ ಕಿಟಕಿಗಳು ಕೇವಲ ಗಾಳಿ, ಬೆಳಕನ್ನು ಮಾತ್ರವೇ ನೀಡೋದಿಲ್ಲ. ಬದಲಾಗಿ ಧನಾತ್ಮಕ ಶಕ್ತಿಗಳ ಪ್ರವೇಶಕ್ಕೂ ದಾರಿ ಮಾಡಿಕೊಡಲಿದೆ. ಮನೆಯ ಕಿಟಕಿಗಳನ್ನು ಸದಾ ಕಾಲವೂ ಮುಚ್ಚಿ ಇಡುವುದರಿಂದ ಮನೆಯ ವಾತಾವರಣದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನಂಬಲಾಗಿದೆ. ಹಾಗಾದ್ರೆ ವಾಸ್ತುಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣಾ.
ಮನೆಯಲ್ಲಿನ ಕಿಟಕಿಗಳನ್ನು ಮುಚ್ಚಿ ಇಟ್ಟರೆ, ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ವಾಸ್ತು ನಿಯಮದ ಪ್ರಕಾರ ಬೆಳಗಿನ ಅವಧಿಯಲ್ಲಿ ಕಿಟಕಿಗಳನ್ನು ತೆರೆದು ಇಡುವುದು ಶುಭದಾಯಕ ಎಂದು ನಂಬಲಾಗಿದೆ.
ಮನೆಯ ವಿನ್ಯಾಸ, ಅಲಂಕಾರ ಸೇರಿದಂತೆ ಕೆಲವೊಂದು ಸೂಕ್ಷ್ಮ ವಿಚಾರಗಳಿಗೆ ಕಿಟಕಿಗಳು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತವೆ. ಕಿಟಕಿಗಳು ಮನೆಯ ಒಳಗಿನ ಗಾಳಿ, ಬೆಳಕು ಹಾಗೂ ಶಕ್ತಿಯ ಸಂಚಾರಕ್ಕಾಗಿ ಒಂದು ಮಾಧ್ಯಮವಾಗಿ ಕಾರ್ಯನಿರ್ವಹಿಸಲಿದೆ.
ಇದೇ ಕಾರಣದಿಂದಲೇ ಕಿಟಕಿಗಳನ್ನು ಮುಚ್ಚಿ ಇಡುವುದರಿಂದ ಅಶುಭ ಎಂದು ಪರಿಗಣಿಸಲಾಗಿದೆ. ಮನೆಯ ನೈಸರ್ಗಿಕ ಬೆಳಕು, ಪರಿಶುದ್ದವಾದ ಗಾಳಿ ಬರುವಂತೆ ಮಾಡುವುದು ಉತ್ತಮ. ಅದ್ರಲ್ಲೂ ಹಗಲಿನ ವೇಳೆಯಲ್ಲಿ ಇದು ಅತ್ಯಗತ್ಯ ಎಂದೇ ಪರಿಗಣಿಸಬೇಕು.
ಕಿಟಕಿಗಳನ್ನು ಸದಾ ಕಾಲವು ಮುಚ್ಚಿಟ್ಟರೆ ಏನಾಗುತ್ತೆ ?
ನಕಾರಾತ್ಮಕ ಶಕ್ತಿ ಹೆಚ್ಚಳ
ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ ಸಕಾರಾತ್ಮಕ ವಾತಾವರಣಕ್ಕೆ ಶಕ್ತಿಯ ಸಮತೋಲನ ಅತೀ ಅಗತ್ಯ. ಬಾಗಿಲು, ಕಿಟಕಿಗಳನ್ನು ದೀರ್ಘ ಕಾಲದ ವರೆಗೆ ಮುಚ್ಚಿ ಇಡಬಾರದು. ಮನೆಯ ಒಳಗೆ ಯಾವುದೇ ಕಾರಣಕ್ಕೂ ಗಾಳಿ, ಬೆಳಕಿನ ಹರಿವಿಗೆ ಯಾವುದೇ ಅಡಚಣೆ ಆಗಬಾರದು. ಸದಾ ಕಾಲ ಮುಚ್ಚಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಮನೆಯ ಮೇಲಷ್ಟೇ ಅಲ್ಲಾ, ಆರ್ಥಿಕ ಸ್ಥಿತಿ, ಮಾನಸಿಕ ಶಾಂತಿಯ ಮೇಲೂ ಬಾರೀ ಹೊಡೆತ ಕೊಡಲಿದೆ.
ಶಕ್ತಿಯ ಹರಿವಿನ ಸ್ಥಗಿತ
ಮನೆಯ ವಿವಿಧ ಭಾಗಗಳಲ್ಲಿ ಶಕ್ತಿಯ ಹರಿವು ಸದಾ ಇರಬೇಕು. ವಾಸ್ತುಶಾಸ್ತ್ರ ಇದಕ್ಕೆ ವಿಶೇಷ ಒತ್ತು ನೀಡುತ್ತದೆ. ಕಿಟಕಿಗಳನ್ನು ಮುಚ್ಚಿ ಇಡುವುದರಿಂದ ಕೋಣೆಯ ಒಳಗೆ ನೈಸರ್ಗಿಕ ಗಾಳಿ, ಬೆಳಕಿನ ಹರಿವು ನಿರ್ಬಂಧಕ್ಕೆ ಒಳಗಾಗಲಿದೆ. ಹಗಲಿನ ಹೊತ್ತಿನಲ್ಲಿ ಕಿಟಕಿಯನ್ನು ಸಾಧ್ಯವಾದಷ್ಟು ತೆರೆದು ಇಡುವು ಉತ್ತಮ.
ಕಿಟಕಿಯ ಸ್ವಚ್ಛತೆ
ಮನೆಯ ಕಿಟಕಿಯನ್ನು ತೆರೆದು ಇಟ್ಟರೆ ಮಾತ್ರವೇ ಸಾಲು, ಕಿಟಕಿಯ ಗಾಜು, ಕಿಟಕಿಯಯನ್ನು ಸಂಪೂರ್ಣವಾಗಿ ಸ್ವಚ್ಚವಾಗಿ ಇಡಬೇಖು. ಕಿಟಕಿಯಲ್ಲಿ ಸಂಗ್ರಹವಾಗುವ ಧೂಳು ಮತ್ತು ಕೊಳಕು ಇಡೀ ಕೋಣೆಯ ಒಳಗೆ ನೈಸರ್ಗಿಕ ಬೆಳಕು ಪ್ರವೇಶ ಮಾಡುವುದನ್ನು ತಡೆಯುತ್ತದೆ. ಕಿಟಕಿ ಸ್ವಚ್ಚವಾಗಿ ಗಾಳಿ ಆಡುವಂತೆ ಇರಬೇಕಾದುದು ಅತೀ ಅಗತ್ಯ.
ಸೂಕ್ತವಾದ ಪರದೆಗಳು
ಕಿಟಕಿಗಳಿಗೆ ಬಳಕೆ ಮಾಡುವ ಪರದೆಗಳು ಕೂಡ ಹೆಚ್ಚು ಪ್ರಭಾವವನ್ನು ಬೀರುತ್ತದೆ. ಅತೀಯಾಗಿರುವ ದಪ್ಪ ಅಥವಾ ಭಾರವಾದ ಪರದೆಗಳನ್ನು ಬಳಕೆ ಮಾಡುವುದರಿಂದ ಕೋಣೆಗೆ ಬರುವ ಸೂರ್ಯನ ಬೆಳಕು, ಗಾಳಿಯ ಹರಿವು ಕಡಿಮೆ ಆಗಲಿದೆ. ವಾಸ್ತು ತತ್ವಗಳ ಪ್ರಕಾರ, ನೈಸರ್ಗಿಕವಾಗಿ ಬೆಳಕು ಒಳಗೆ ಬರುವಂತೆ ಮಾಡುವ ಪರದೆಗಳು ಅತ್ಯುತ್ತಮ. ಹವಾಮಾನ ಮತ್ತು ಅಗತ್ಯಕ್ಕೆ ತಕ್ಕಂತೆ ಹಗಲಿನಲ್ಲಿ ಕಿಟಕಿಗಳನ್ನು ತೆರೆದು ಇಡುವುದು ಉತ್ತಮ.
ಮನೆಯಲ್ಲಿರುವ ಕಿಟಕಿ ನಮಗೆ ಆರ್ಥಿಕತೆ, ಮಾನಸಿಕತೆಯ ಮೇಲೆ ಇಷ್ಟೆಲ್ಲಾ ಪರಿಣಾಮ ಬೀರುತ್ತೆ ಅನ್ನೋದು ಬಹುತೇಕರಿಗೆ ಗೊತ್ತೇ ಇರೋದಿಲ್ಲ. ಕಿಟಕಿಗಳನ್ನು ಕೇವಲ ವಾಸ್ತು ವಿಚಾರಕ್ಕಾಗಿ ಮಾತ್ರವೇ ತೆರೆದಿಡೋದಲ್ಲ. ಮನೆಯ ಒಳಗೆ ವಾಸಿಸುವ ಜನರ ಆರೋಗ್ಯ ವೃದ್ದಿಗೂ ಕಿಟಕಿಗಳನ್ನು ತೆರೆದು ಇಡಿ. ಕೋಣೆಯಲ್ಲಿ ಗಾಳಿಯ ಸಂಚಾರ ಸದಾ ಆಗುವಂತೆ ಗಮನ ಹರಿಸುವುದು ಅತೀ ಅಗತ್ಯ.
Topics
ಸಂಬಂಧಿತ ಸುದ್ದಿಗಳು
religion
Vastu Tips : ಈ ದಿಕ್ಕಿನಲ್ಲಿ ಗಡಿಯಾರ ಇದ್ರೆ ಮನೆಯಲ್ಲಿ ದೊಡ್ಡ ಆಪತ್ತು...! ಕೂಡಲೇ ಬದಲಿಸಿ
religion
Money Vastu: ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಬೇಕಾ, ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ
religion
ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಗೆ ಏಕಿಷ್ಟು ಮಹತ್ವ ? ಉಪವಾಸ ವ್ರತಾಚರಣೆ ಮತ್ತು ಪಾರಣ ಸಮಯ
religion

