Vastu Tips : ಈ ದಿಕ್ಕಿನಲ್ಲಿ ಗಡಿಯಾರ ಇದ್ರೆ ಮನೆಯಲ್ಲಿ ದೊಡ್ಡ ಆಪತ್ತು...! ಕೂಡಲೇ ಬದಲಿಸಿ
ಮನೆ ನಿರ್ಮಾಣ ಮಾಡುವಾಗ ವಾಸ್ತುಶಾಸ್ತ್ರದ ಅನ್ವಯ ಮಾಡಲಾಗುತ್ತದೆ. ಆದರೆ ಸಣ್ಣಪುಟ್ಟ ತಪ್ಪುಗಳು ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
By Arun Gundmi | ಅರುಣ್ ಗುಂಡ್ಮಿ · Editor-in-Chief
1 min read
ಮನೆಯಲ್ಲಿ ನೆಮ್ಮದಿ, ಆರ್ಥಿಕವಾಗಿ ಸದೃಢರಾಗಬೇಕು ಅಂದ್ರೆ ಜೀವನದಲ್ಲಿ ವಾಸ್ತುಶಾಸ್ತ್ರವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಮನೆಯ ವಾತಾವರಣ ನಿಮ್ಮ ಮನಸಿಗೆ ಸಂತಸ ಕೊಡಬೇಕಾದ್ರೆ ವಾಸ್ತು ಪ್ರಮುಖ ಪಾತ್ರವಹಿಸಲಿದೆ. ಮನೆಯಲ್ಲಿನ ಕೆಲವೊಂದು ವಸ್ತುಗಳು ಧನಾತ್ಮಕ ಹಾಗೂ ನಕರಾತ್ಮಕ ಶಕ್ತಿಯನ್ನು ನೀಡುತ್ತದೆ.
ಮನೆ ನಿರ್ಮಾಣ ಮಾಡುವಾಗ ವಾಸ್ತುಶಾಸ್ತ್ರದ ಅನ್ವಯ ಮಾಡಲಾಗುತ್ತದೆ. ಆದರೆ ಸಣ್ಣಪುಟ್ಟ ತಪ್ಪುಗಳು ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆ, ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮನೆಯಲ್ಲಿ ಅಳವಡಿಸಿರುವ ಗೋಡೆ ಗಡಿಗಾರ ಮನೆಯ ಅದೃಷ್ಟವನ್ನೇ ಬದಲಾಯಿಸಿ ಬಿಡುತ್ತೆ ಅಂದ್ರೆ ನೀವು ನಂಬ್ತೀರಾ.
ಮನೆಯಲ್ಲಿ ಗಡಿಯಾರವನ್ನು ಸರಿಯಾದ ಸ್ಥಾನದಲ್ಲಿ ಹಾಕಿದ್ರೆ ಧನಾತ್ಮಕ ಶಕ್ತಿ ಸಿಗಲಿದೆ. ಆದರೆ ತಪ್ಪಾದ ದಿಕ್ಕಿನಲ್ಲಿ ಗಡಿಯಾರ ಅಳವಡಿಸಿದ್ರೆ ಮನೆಯಲ್ಲಿ ದೊಡ್ಡ ಮಟ್ಟದ ಅಪಾಯ, ಆಪತ್ತು ಎದುರಿಸುತ್ತೀರಿ. ನಕಾರಾತ್ಮಕ ಶಕ್ತಿಗಳ ಆಕರ್ಷಣೆಯಿಂದ ನೆಮ್ಮದಿಯೇ ಮರೆಯಾಗುವ ಸಾಧ್ಯತೆಯೂ ಇದೆ.
ಮನೆಯಲ್ಲಿ ಗಡಿಯಾರ ಹಾಕಲು ಸರಿಯಾದ ದಿಕ್ಕು ಯಾವುದು ?
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಬ್ಬರೂ ಕೂಡ ದಕ್ಷಿಣ ದಿಕ್ಕಿನಲ್ಲಿ (South Direction) ಯಾವುದೇ ಗೋಡೆಗೆ ಗಡಿಯಾರವನ್ನು ಹಾಕಲೇ ಬಾರದು. ದಕ್ಷಿಣ ದಿಕ್ಕನ್ನು ಯಮ ಮತ್ತು ಸ್ಥಿರತೆಯಿಲ್ಲದ ದಿಕ್ಕು ಎಂದು ಪರಿಗಣಿಸಲಾಗಿದೆ. ಈ ದಿಕ್ಕಿನಲ್ಲಿ ಗಡಿಯಾರವನ್ನು ಅಳವಡಿಸಿದ್ದರೆ, ಇಲ್ಲಾ ಟಿಕ್-ಟಿಕ್ ಶಬ್ದ ಬರುವ ಗಡಿಯಾರವನ್ನು ಅಳವಡಿಸಿದ್ದರೆ, ಅದು ನಿಮ್ಮ ಪ್ರಗತಿಯ ಮೇಲೆ ಗಂಭೀರವಾಗಿರುವ ಪರಿಣಾಮವನ್ನು ಬೀರುತ್ತದೆ.
ದಕ್ಷಿಣ ದಿಕ್ಕಿಗೆ ಮುಖಮಾಡಿ ಗಡಿಯಾರವನ್ನು ಅಳವಡಿಸಿದ್ರೆ ವ್ಯವಹಾರಿಕವಾಗಿ ಬಾರೀ ನಷ್ಟವನ್ನು ತಂದುಕೊಡಲಿದೆ. ಮನೆಯ ಮುಖ್ಯಸ್ಥರಿಗೆ ಅಥವಾ ಕುಟುಂಬದ ಸದಸ್ಯರಿಗೆ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವುದಕ್ಕೆ ಪ್ರಮುಖ ಕಾರಣವಾಗಲಿದೆ.
ಯಾವ ದಿಕ್ಕಿನಲ್ಲಿ ಗಡಿಯಾರ ಹಾಕುವುದು ಉತ್ತಮ ?
ಮನೆಯಲ್ಲಿ ಸದಾ ಧನಾತ್ಮಕ ಶಕ್ತಿಯ ಜೊತೆಗೆ ಸಮೃದ್ದಿ ನೆಲಸಬೇಕಾದ್ರೆ ಗಡಿಯಾರವನ್ನು ಈ ಕೆಳಗಿನ ದಿಕ್ಕಿನಲ್ಲಿ ಅಳವಡಿಸುವುದು ಅತ್ಯಂತ ಮಂಗಳಕರ.
ಉತ್ತರ ದಿಕ್ಕು (North Direction): ಉತ್ತರ ದಿಕ್ಕನ್ನು ಕುಬೇರನ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಗಡಿಯಾರ ಆರ್ಥಿಕವಾದ ಅಭಿವೃದ್ದಿ, ಹೊಸ ಅವಕಾಶಗಳು ಮನೆಯನ್ನು ಆಕರ್ಷಿಸುತ್ತದೆ.
ಪೂರ್ವ ದಿಕ್ಕು (East Direction): ದೇವತೆಗಳು ನೆಲೆಸಿರುವ ದಿಕ್ಕನ್ನು ಪೂರ್ವ ದಿಕ್ಕು ಎಂದು ಕರೆಯಲಾಗುತ್ತದೆ. ಈ ದಿಕ್ಕಿನಲ್ಲಿ ಗಡಿಯಾರ ಹಾಕುವುದರಿಂದ ಮನೆಯಲ್ಲಿ ಸದಾ ಶಾಂತಿ, ನೆಮ್ಮದಿ, ಸಮೃದ್ದಿ ನೆಲೆಸುತ್ತದೆ ಅಂತೆ.
ಪಶ್ಚಿಮ ದಿಕ್ಕು (West Direction): ಪಶ್ಚಿಮ ದಿಕ್ಕನ್ನು ಕೂಡ ಶುಭ ದಿಕ್ಕು ಎಂದು ಪರಿಗಣಿಸಲಾಗಿದೆ. ಹೀಗಾಗಿ ಗಡಿಯಾರವನ್ನು ಪಶ್ಚಿಮ ದಿಕ್ಕಿಗೆ ಬೇಕಾದ್ರೂ ಅಳವಡಿಸಬಹುದು. ಇದರಿಂದ ಶುಭದಾಯಕವಾಗಲಿದೆ.
ನಿಮ್ಮ ಮನೆಯ ವಾಸ್ತುದೋಷ ಪರಿಹಾರಕ್ಕೆ ಸಲಹೆಗಳು
ಮನೆಯಲ್ಲಿ ವಾಸ್ತು ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಲು ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ಮನೆಯ ಹಾಲ್ ಅಥವಾ ಲಿವಿಂಗ್ ರೂಮ್ (Living Room) ಗಡಿಯಾರವನ್ನು ಎಂದಿಗೂ ಸ್ವಚ್ಚವಾಗಿ, ಸರಿಯಾದ ಸಮಯ ತೋರಿಸುವ ಸ್ಥಳದಲ್ಲಿ ಮಾತ್ರವೇ ಅಳವಡಿಸಿ.
ಯಾವುದೇ ಕಾರಣಕ್ಕೂ ಒಡೆದು ಹೋಗಿರುವ, ಕೆಟ್ಟು ನಿಂತಿರುವ ಗಡಿಯಾರವನ್ನು ಮನೆಯಲ್ಲಿ ಇಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ಜೀವನದಲ್ಲಿ ಆರ್ಥಿಕ ಮುಗ್ಗಟ್ಟು, ಮಾನಸಿಕವಾದ ಅಸ್ಥಿತರತೆ ಉಂಟಾದ್ರೆ ತಜ್ಞರ ಸಲಹೆಯನ್ನು ಪಡೆಯಿರಿ. ಮನೆಯ ಗಡಿಯಾರದ ದಿಕ್ಕು ಬದಲಿಸಿ ಶುಭ ಫಲಗಳನ್ನು ಪಡೆದುಕೊಳ್ಳಿ.
Topics
ಸಂಬಂಧಿತ ಸುದ್ದಿಗಳು
religion
Money Vastu: ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಬೇಕಾ, ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇ ಬೇಡಿ
religion
ಪಿತೃ ಪಕ್ಷದಲ್ಲಿ ಬರುವ ಇಂದಿರಾ ಏಕಾದಶಿಗೆ ಏಕಿಷ್ಟು ಮಹತ್ವ ? ಉಪವಾಸ ವ್ರತಾಚರಣೆ ಮತ್ತು ಪಾರಣ ಸಮಯ
religion
ಗಯಾದಿಂದ ಬದರಿನಾಥದವರೆಗೆ : ಪೂರ್ವಜರ ಆತ್ಮಕ್ಕೆ ಶಾಂತಿ ನೀಡುವ ಭಾರತದ ಪವಿತ್ರ ಸ್ಥಳಗಳು !
religion

