ನವರಾತ್ರಿ 4ನೇ ದಿನ : ಬ್ರಹ್ಮಾಂಡದ ಆದಿಶಕ್ತಿ ಮಾತೆ ಕೂಷ್ಮಾಂಡ ದೇವಿ
ನವರಾತ್ರಿಯ 4 ನೇ ದಿನವು (ಅಕ್ಟೋಬರ್ 14, 2026) ತನ್ನ ಮಂದಹಾಸದಿಂದಲೇ ಬ್ರಹ್ಮಾಂಡದ ಸೃಷ್ಟಿಗೆ ಕಾರಣಳಾದ ಕೂಷ್ಮಾಂಡ ದೇವಿಯನ್ನು ಪೂಜಿಸುವ ದಿನ.
By Archana V Bhat | ಅರ್ಚನಾ ವಿ ಭಟ್
1 min read
ಭಾರತದಲ್ಲಿ ಇದೀಗ ಶರನ್ನ ನವರಾತ್ರಿಯನ್ನುಅಪಾರ ಭಕ್ತಿ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತಿದೆ. ದೇವಾಲಯಗಳಲ್ಲಿ ದೇವಿಯ ಪುರಾಣ, ಪ್ರವಚನಗಳು ನಡೆಯುತ್ತಿವೆ. ಭಕ್ತರು ಅತ್ಯುತ್ಸಾಹದಿಂದ ದೇವಿಯ ಒಂಬತ್ತು ದಿನಗಳ ನವರಾತ್ರ್ಯೋತ್ಸವವನ್ನು ಆಚರಿಸುತ್ತಿದ್ದಾರೆ. ಇಂದು ಅಕ್ಟೋಬರ್ 14, 2026 ನವರಾತ್ರಿಯ ನಾಲ್ಕನೇ ದಿನ. ಶರನ್ನ ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಮತ್ತು ಸಮೃದ್ಧಿಗಾಗಿ ಕೂಷ್ಮಾಂಡ ದೇವಿಯನ್ನು ಭಕ್ತರು ಆರಾಧಿಸುತ್ತಾರೆ. ಈ ದೇವಿಯು ಅಷ್ಟಭುಜಗಳನ್ನು ಹೊಂದಿದ್ದು, ಮುಖದಲ್ಲಿ ಸೌಮ್ಯ ನಗುವನ್ನು ಹೊತ್ತು ಹುಲಿಯ ಮೇಲೆ ಆಸೀನಳಾಗಿದ್ದಾಳೆ.
ನವರಾತ್ರಿ 4ನೇ ದಿನ
ದಿನಾಂಕ : ಅಕ್ಟೋಬರ್ 14, 2026
ನವರಾತ್ರಿ ದಿನ : ನಾಲ್ಕನೇ ದಿನ
ಪೂಜಿಸುವ ದೇವಿ : ಕೂಷ್ಮಾಂಡ ದೇವಿ
ಮಹತ್ವ : ಸಂತೋಷ, ಸಮೃದ್ಧಿ ಮತ್ತು ಆರೋಗ್ಯ
ಬಣ್ಣ : ನೀಲಿ
ನೈವೇದ್ಯ : ಮಾಲ್ಪುರಿ
ಕೂಷ್ಮಾಂಡ ದೇವಿಯ ಪೌರಾಣಿಕ ಕಥೆ
ಪೌರಾಣಿಕ ಕಥೆಯ ಪ್ರಕಾರ ಆದಿಯಲ್ಲಿ ಬ್ರಹ್ಮಾಂಡದಲ್ಲಿ ಸುತ್ತಲೂ ಕತ್ತಲೆ ಆವರಿಸಿದ್ದಾಗ, ಕೂಷ್ಮಾಂಡ ದೇವಿಯು ತನ್ನ ದೈವಿಕ ಶಕ್ತಿ ಮತ್ತು ಮಂದಹಾಸದಿಂದ ಇಡೀ ವಿಶ್ವವನ್ನು ಸೃಷ್ಟಿಸಿದಳು. ಈ ಕಾರಣಕ್ಕಾಗಿಯೇ ಅವಳನ್ನು ಸೃಷ್ಟಿಯ ಆದಿಸ್ವರೂಪ ಅಥವಾ ಆದಿಶಕ್ತಿ ಎಂದು ಕರೆಯಲಾಗುತ್ತದೆ. ಅವಳ ವಾಸಸ್ಥಾನವು ಸೌರಮಂಡಲದ ಮಧ್ಯದಲ್ಲಿ ಎಂದು ನಂಬಲಾಗಿದೆ. ಇದು ದೇವಿಯ ಸಾಮರ್ಥ್ಯ ಮತ್ತು ಶಕ್ತಿಯನ್ನು ತೋರಿಸುತ್ತದೆ. ಅವಳ ತೇಜಸ್ಸು ಸೂರ್ಯನಷ್ಟೇ ಪ್ರಕಾಶಮಾನವಾಗಿದ್ದು, ಇಡೀ ವಿಶ್ವವನ್ನೇ ಬೆಳಗಿಸಬಲ್ಲಳು. ಕೂಷ್ಮಾಂಡ ದೇವಿಯನ್ನು ಪೂಜಿಸುವುದರಿಂದ ಎಲ್ಲಾ ಕಾಯಿಲೆಗಳು, ದುಃಖ, ನೋವುಗಳು ದೂರವಾಗುತ್ತವೆ. ಜೊತೆಗೆ ದೀರ್ಘಾಯುಷ್ಯ, ಖ್ಯಾತಿ ಮತ್ತು ಸುಖ ಸಂಪತ್ತು ಹೆಚ್ಚಾಗುತ್ತದೆ. ದೇವಿಯನ್ನು ಭಕ್ತಿಯಿಂದ ಪೂಜಿಸುವುದರಿಂದ ಜೀವನದಲ್ಲಿ ಸಕಾರಾತ್ಮಕ ಶಕ್ತಿ ತುಂಬಿರುತ್ತದೆ. ಮನೆ, ಕಚೇರಿ ಎಲ್ಲ ಕಡೆಗಳಲ್ಲಿಯೂ ಅವಳ ಆಶೀರ್ವಾದ ಲಭಿಸುತ್ತದೆ.
Topics
ಸಂಬಂಧಿತ ಸುದ್ದಿಗಳು
religion
ನವರಾತ್ರಿ 2026 ಮೂರನೇ ದಿನ : ಭಕ್ತರ ಕಷ್ಟ ದೂರ ಮಾಡುವ ಚಂದ್ರಘಂಟಾ ದೇವಿ
religion
ನವರಾತ್ರಿ 2026 ಎರಡನೇ ದಿನ : ತಪಸ್ಸು, ತಾಳ್ಮೆ ಮತ್ತು ಭಕ್ತಿಯ ಪ್ರತೀಕ ಮಾತೆ ಬ್ರಹ್ಮಚಾರಿಣಿ
religion
ಒಂಬತ್ತು ದಿನ, ಒಂಬತ್ತು ಬಣ್ಣ : ನವರಾತ್ರಿಯ ಪ್ರತಿದಿನದ ವೈಭವಕ್ಕೆ ಇಲ್ಲಿದೆ ನವ ವರ್ಣಗಳ ಪಟ್ಟಿ
religion

