Special Story

ನೀರಲ್ಲಿ ಉಷ್ಣದೇಹಿಯಾಗಿ ಕುಳಿತಿದ್ದಾನೆ ಗುಡ್ಡಟ್ಟು ವಿನಾಯಕ – ಜಲಾಭಿಷೇಕ ಮಾಡಿದ್ರೆ ಕಷ್ಟಗಳು ಪರಿಹಾರ

Published by
Vandana kommunje | ವಂದನಾ ಕೊಮ್ಮುಂಜೆ

Guddattu Vinayaka temple  : ಗಣೇಶನ ಲೀಲೆಗಳನ್ನು ನಾವು ಓದಿಯೋ ಕೇಳಿಯೋ ತಿಳಿದುಕೊಂಡಿರುತ್ತೇವೆ . ಆತ ವಿಘ್ನ ವಿನಾಶಕನೆಷ್ಟೋ ಅಷ್ಟೇ ವಿಘ್ನಕಾರಕ ಕೂಡ ಇದಕ್ಕೆ ಸಾಕ್ಷಿ ರಾವಣಾಸುರನ ಆತ್ಮಲಿಂಗ ಪ್ರಸಂಗ . ಇನ್ನು ವಿಘ್ನ ವಿನಾಷಕನನ್ನು ಮೊದಲು ಪೂಜಿಸದಿದ್ರೆ ಹಿಡಿದ ಕಾರ್ಯ ನೆರವೇರೋಲ್ಲ ಅನ್ನೋ ನಂಬಿಕೆಗೆ ಕೂಡಾ ಈ ದೇವಾಲಯ ಸಾಕ್ಷಿ . ಹೀಗೇ ತಾನು ಮಾಡಿದ ಲೀಲೆಯಿಂದಲೇ ಪೇಚಿಗೆ ಸಿಕ್ಕಿಹಾಕಿ ಕೊಂಡಿದ್ದಾನೆ ವಿಘ್ನೇಶ . ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಈ ಗುಡ್ಡಟ್ಟು ವಿನಾಯಕ ದೇವಾಲಯ.

Image Credit to Original Source

ಇಲ್ಲಿ ಗಣೇಶ ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡಿದ್ದಾನೆ. ಏಕೆಂದರೆ ಇಲ್ಲಿ ಗಣೇಶ ನೆಲೆ ನಿಂತಿರುವುದು ನೀರಿನ ನಡುವಿನಲ್ಲಿ. ದೇವರ ಕುತ್ತಿಯವರೆಗೆ ನೀರಿನಿಂದ ಆವೃತವಾಗಿದ್ದು ವರ್ಷದ 365  ದಿನವೂ ಕೂಡಾ ಭಕ್ತರಿಗೆ ಇದೇ ರೀತಿಯಲ್ಲಿ ದರ್ಶನವನ್ನು ಈಯುತ್ತಾನೆ. ಗರ್ಭಗುಡಿಯಲ್ಲಿ ಒಂದು ಚಿಕ್ಕ ಕುಂಡವಿದ್ದು ಅದರಲ್ಲಿ ಗಣೇಶನ ವಿಗ್ರಹವಿದೆ. ಅದರಲ್ಲಿ ನಿತ್ಯ ನೀರು ಇರಬೇಕು. ಇಲ್ಲವಾದ್ರೆ ಕಷ್ಟ ಕಟ್ಟಿಟ್ಟ ಬುತ್ತಿ ಅಂತಾರೆ ಅರ್ಚಕರು.

ಈ ವಿಗ್ರಹ ಹೀಗೆ ಇರೋದಕ್ಕೆ ಸ್ಥಳ ಪುರಾಣದಲ್ಲಿ ಕಥೆಯೊಂದಿದೆ . ಸಾಮಾನ್ಯವಾಗಿ ಯಾವುದೇ ಕೆಲಕ್ಕೆ ಹೋಗೋ ಮುನ್ನ ಗಣೇಶನ ಪೂಜೆ ಮಾಡೋದು ಸಾಮಾನ್ಯ , ಇದಕ್ಕೆ ಶಿವನೂ ಹೊರತಾಗಿಲ್ಲ. ಆದ್ರೆ ಒಂದು ಬಾರಿ ಶಿವ ತರಿಪುರಾಸುರ ವಧೆಗಾಗಿ ಹೊರಟಾಗ ಗಣೇಶನ ಪೂಜೆಯನ್ನು ಮಾಡಿರಲಿಲ್ಲ. ಹೀಗಾಗಿ ಶಿವನಿಗೆ ಯುದ್ಧದಲ್ಲಿ ಸೋಲಾಯಿತು. ಇದರಿಂದ ಕೋಪಗೊಂಡ ಶಿವ ಆಗ್ನೇಯಾಸ್ತ್ರವನ್ನು ಗಣೇಶನ ಮೇಲೆ ಪ್ರಯೋಗಿಸಿದ.

Image Credit to Original Source

ಆದ್ರೆ ಇದರಿಂದ ಗಣೇಶನಿಗೆ ಯಾವುದೇ ಕೆಡುಕಾಗಲಿಲ್ಲ . ಆ ಆಸ್ತ್ರ ಮಧು ಸಾಗರಕ್ಕೆ ಹೋಗಿ ಬಿತ್ತು. ಆಗ ಅಲ್ಲಿ ಮಧು ( ಜೇನು) ಉಕ್ಕಿ ಬಂದಾಗ ಅದನ್ನು ಗಣೇಶ ಕುಡಿದಾಗ ಆತನ ದೇಹ ಉಷ್ಣ ಮಯ ವಾಗಿತು. ಅದರ ಉರಿಯಿಂದ ತಪ್ಪಿಸಿಕೊಳ್ಳಲು ಶಿವನ ಸಲಹೆಯಂತೆ ನರಸಿಂಹ ತೀರ್ಥ ಹೊಮ್ಮುವ ಈ ನೀರಿನಲ್ಲಿ ಬಂದು ಕುಳಿತ ಎಂಬ ನಂಬಿಕೆ ಇದೆ.

ಇದನ್ನೂ ಓದಿ : ಅಯೋಧ್ಯೆಯಲ್ಲಿ ಬಾಲರಾಮ ಪ್ರತಿಷ್ಠಾಪನೆ: ರಾಮ ನಡೆದ ಹಾದಿ ಇಂದಿಗೂ ಜೀವಂತ, ದೇಶದ ಹಲವೆಡೆ ಇದೆ ರಾಮನ ಕುರುಹು

ಅದಕ್ಕೆ ಇದೊಂದು ಸ್ವಯಂಭು ಗಣೇಶ ವಿಗ್ರಹ ಅಂತ ಹೇಳಲಾಗುತ್ತೆ. ಆದ್ರೆ ಸಾಮಾನ್ಯವಾಗಿ ಉದ್ಬವಾದ ಗಣೇಶನಿಗೆ ಯಾವುದೇ ರೂಪವಿರೋದಿಲ್ಲ. ಆದರೆ ಇಲ್ಲಿ ಮಾತ್ರ ಕುಳಿತಂತ ಭಂಗಿಯಲ್ಲಿ ವಿಗ್ರಹವನ್ನು ಕಾಣಬಹುದಾಗಿದೆ. ಇಲ್ಲಿನ ಮತ್ತೊಂದು ವಿಸ್ಮಯ ಅಂದ್ರೆ ಗಣೇಶನಿರುವ ಕುಂಡದ ನೀರು ಗಂಟೆಗಳೂ ಕಳೆದಂತೆ ಬಿಸಿಯಾಗುತ್ತಂತೆ. ಹೀಗಾಗಿ ಇಲ್ಲಿ ಶಿವನಿಗೆ ಮಾತ್ರ ಮಾಡಲಾಗುವ ರುದ್ರಾಭಿಷೇಕವನ್ನು ಇಲ್ಲಿ ಗಣೇಶನಿಗೂ ಮಾಡಲಾಗುತ್ತೆ. ಮೊದಲಿಗೆ ಹಳೇ ನೀರನ್ನು ಸಂಫೂರ್ಣವಾಗಿ ತೆಗೆದು ನಂತರ ಹೊಸ ನೀರನ್ನು ಅಲ್ಲಿ ತುಂಬಲಾಗುತ್ತೆ. ಈ ಸೇವೆಯನ್ನು “ಆಯಿರ ಕೊಡ “ಸೇವೆ ಎನ್ನುತ್ತಾರೆ.

Image Credit to Original Source

ಇಲ್ಲಿ ಆಯಿರ್ ಕೊಡ‌ ಸೇವೆ ಅಂದ್ರೆ ಸಹಸ್ರ ಕೊಡ ನೀರನ್ನು ದೇವರಿಗೆ ಅಭಿಷೇಕದಂತೆ ಸಲ್ಲಿಸೋದು ಎಂದು ಅರ್ಥ . ದಿನಕ್ಕೆ ಇಲ್ಲಿ ಸಾವಿರ ಕೊಡದಷ್ಟು ನೀರನ್ನು ಅಭಿಷೇಕಕ್ಕೆ ಬಳಸಲಾಗುತ್ತೆ. ಈ ಸೇವೆಯನ್ನು ಯಾರಾದ್ರೂ ಹರಕೆಯಾಗಿ ಮಾಡಿದ್ರೆ ದೇವರು ತನ್ನನ್ನು ತಂಪು ಮಾಡಿದ ಭಕ್ತನನ್ನು ಕಾಯುತ್ತಾನೆ ಎಂಬ ನಂಬಿಕೆ ಇದೆ .

ಇದನ್ನೂ ಓದಿ :  ಭಕ್ತರಿಗಾಗಿ ಕಣ್ಣೀರು ಸುರಿಸ್ತಾನೆ ಆಂಜನೇಯ – ಇಲ್ಲಿ ಬಂದ್ರೆ ಕಷ್ಟವೆಲ್ಲಾ ಆಗುತ್ತೆ ನಿವಾರಣೆ

ಅಂದಹಾಗೆ ಈ ವಿಶೇಷ ಕ್ಷೇತ್ರ ವಿರೋದು ಎಲ್ಲಿ ಅಂದ್ರೆ ನಮ್ಮ ಕರಾವಳಿಯ ಜಿಲ್ಲೆ ಉಡುಪಿಯಲ್ಲಿ. ಉಡುಪಿ ಮತ್ತು ಕುಂದಾಪುರ ತಾಲೂಕಿನ ಗಡಿ ಭಾಗದ ಗುಡ್ಡಟ್ಟು ಎಂಬಲ್ಲಿ ವಿನಾಯಕ ಸ್ವಾಮಿ ಈ ದೇವಾಲಯವಿದೆ. ಈ ದೇವಾಲಯವನ್ನು ಜಲಾಧಿವಾಸ ವಿನಾಯಕ ಅಂತಾನು ಕರೆಯುತ್ತಾರೆ. ಈ ದೇವಾಲಯ ಉಡುಪಿ ಹಾಗೂ ಕುಂದಾಪುರದ ನಡುವೆ ಇರೋದ್ರಿಂದ ಉಡುಪಿ ಹಾಗೂ ಕುಂದಾಪುರದಿಂದ ಬಸ್ ಸೌಲಭ್ಯವಿದೆ. ಇನ್ನು ಮುಂದೆ ಉಡುಪಿಗೆ ಭೇಟಿ ನೀಡಿದ್ರೆ ಇಲ್ಲಿಗೂ ಒಂದು ಬಾರಿ ಭೇಟಿ ನೀಡಿ.

Guddattu Vinayaka temple special Pooja Aayira Koda Seva

Share

Recent Posts