RCB vs CSK IPL 2024 Live : ಆರ್‌ಸಿಬಿಗೆ ಗುಡ್ ನ್ಯೂಸ್; ಬೆಂಗಳೂರಲ್ಲಿ ಬೆಳಗ್ಗೆಯಿಂದಲೇ ಬಿಸಿಲು, ರಾತ್ರಿ ಕರುಣೆ ತೋರುತ್ತಾನಾ ವರುಣ ದೇವ ?

RCB vs CSK IPL 2024 Live : ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024 ಟೂರ್ನಿಯ ಅತ್ಯಂತ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಸುರಿದರೂ ಕೂಡ ‌Sub Air system ಅನ್ನು Chinnaswamy Stadiumನಲ್ಲಿ ಅಳವಡಿಸಲಾಗಿರುವುದರಿಂದ ಅಭಿಮಾನಿಗಳಿಗೆ ಪಂದ್ಯ ರದ್ದಾಗುವ ಭೀತಿ ಇಲ್ಲ.

RCB vs CSK IPL 2024 Live : ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ 2024 ಟೂರ್ನಿಯ ಅತ್ಯಂತ ಹೈವೋಲ್ಟೇಜ್ ಪಂದ್ಯ. ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challenges Bengaluru) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ನಡುವಿನ ನಿರ್ಣಾಯಕ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯವನ್ನು ಆರ್’ಸಿಬಿ ಗೆದ್ದರೆ ಐಪಿಎಲ್-2024 ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ. ಒಂದು ವೇಳೆ ಚೆನ್ನೈ ಗೆದ್ದರೆ 16 ಅಂಕಗಳೊಂದಿಗೆ ಪ್ಲೇ ಆಫ್’ಗೆ ಲಗ್ಗೆ ಇಡಲಿದೆ.

Rcb vs csk ipl 2024 good news for rcb weather condition is good in bangalore and sub air system in chinnaswamy stadium
Image credit to original source

ಆರ್’ಸಿಬಿಯ ಪ್ಲೇ ಆಫ್ ಕನಸು ನನಸಾಗಬೇಕಾದರೆ ವರುಣದೇವ ಕೃಪೆ ತೋರಲೇಬೇಕು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್’ಗೆ ಗೆಲುವು ಅನಿವಾರ್ಯ ವಾಗಿದೆ. ಹೀಗಾಗಿ ಯಾವ ಕಾರಣಕ್ಕೂ ಪಂದ್ಯ ಮಳೆಯಿಂದ ರದ್ದಾಗಬಾರದು. ಕಳೆದ ಕೆಲ ದಿನಗಳಿಂದ ಬೆಂಗಳೂರಲ್ಲಿ ಮಳೆ ಸುರಿಯುತ್ತಿರುವುದು ಆರ್’ಸಿಬಿ ಹಾಗೂ ಆರ್’ಸಿಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಆದರೆ ಶನಿವಾರ ಬೆಳಗ್ಗೆಯಿಂದಲೇ ಬೆಂಗಳೂರಲ್ಲಿ ಬಿಸಿಲು ಕಾಣಿಸಿಕೊಂಡಿರುವುದು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಗುಡ್ ನ್ಯೂಸ್.

ಇದನ್ನೂ ಓದಿ : Hardik Pandya Ban : ಐಪಿಎಲ್’ನಲ್ಲಿ ಆಟ ಮುಗಿದ ಮೇಲೆ ಹಾರ್ದಿಕ್ ಪಾಂಡ್ಯಗೆ ಒಂದು ಮ್ಯಾಚ್ ಬ್ಯಾನ್ ಶಿಕ್ಷೆ! ಏನಿದು ಕಥೆ ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-2024 ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಆರು ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿಡಬೇಕಾದರೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಆರ್’ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸಿಎಸ್’ಕೆ ವಿರುದ್ಧ ಆರ್’ಸಿಬಿ ಕನಿಷ್ಠ 18 ರನ್’ಗಳಿಂದ ಪಂದ್ಯ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್ ಮಾಡಿದರೆ ಸಿಎಸ್’ಕೆ ಒಡ್ಡುವ ಗುರಿಯನ್ನು 18.1 ಓವರ್’ಗಳ ಒಳಗೆ ತಲುಪಬೇಕಿದೆ. ಹಾಗಾದಲ್ಲಿ ಮಾತ್ರ ಆರ್’ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

Rcb vs csk ipl 2024 good news for rcb weather condition is good in bangalore and sub air system in chinnaswamy stadium
Image credit to original source

ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಿಂದ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್’ಸಿಬಿ +0.387 ರನ್ ರೇಟ್ ಹೊಂದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ +0.528 ರನ್ ರೇಟ್ ಹೊಂದಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಲಿದೆ. ಆಗ RCB ತಂಡ 14 ಪಂದ್ಯಗಳಿಂದ ಕೇವಲ 13 ಅಂಕ ಗಳಿಸಿದಂತಾಗುತ್ತದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಿಂದ 15 ಅಂಕ ಗಳಿಸಿ ಪ್ಲೇ ಆಫ್ ಹಂತಕ್ಕೇರಲಿದೆ.

ಇದನ್ನೂ ಓದಿ : IPL 2024 Food Poisoning For RCB Fan: ಪಂದ್ಯ ವೀಕ್ಷಿಸಲು ಬಂದವರಿಗೆ ಹಳಸಿದ ಆಹಾರ ಕೊಟ್ಟ ಆರೋಪ, KSCA ವಿರುದ್ಧ ಎಫ್ಐಆರ್!

ಪಂದ್ಯ ನಿಗದಿಯಾಗಿರುವ ಅವಧಿಯಲ್ಲಿ ಸತತವಾಗಿ ಜಡಿ ಮಳೆ ಸುರಿದರೆ ಮಾತ್ರ ಪಂದ್ಯ ರದ್ದಾಗಬಹುದೇ ವಿನಃ, ದೊಡ್ಡ ಮಳೆ ಬಂದು ನಿಂತರೂ ಪಂದ್ಯ ನಡೆಯಲಿದೆ. ಎಷ್ಟೇ ಮಳೆಯಾದರೂ ಮಳೆ ನೀರನ್ನು ಕ್ಷಣ ಮಾತ್ರದಲ್ಲಿ ಕ್ರೀಡಾಂಗಣದಿಂದ ಹೊರ ಹಾಕಬಲ್ಲ ಸಬ್ ಏರ್ ಸಿಸ್ಟಮ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದೆ (Sub Air system in Chinnaswamy Stadium).

ಇದನ್ನೂ ಓದಿ :

RCB vs CSK Ipl 2024 Good news for RCB weather condition is good in Bangalore and Sub Air system in Chinnaswamy Stadium

 

Comments are closed.