RCB vs CSk IPL 2024 : ಆರ್‌ಸಿಬಿ vs ಸಿಎಸ್‌ಕೆ ಪಂದ್ಯಕ್ಕೆ ಮಳೆಯ ಭೀತಿ , ಆರೆಂಜ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

RCB vs CSK IPL 2024 Orange Alert :  ಬೆಂಗಳೂರಿನಲ್ಲಿ ನಡೆಯಲಿರೋ ಐಪಿಎಲ್ ಆವೃತ್ತಿಯ ಆರ್ಸಿಬಿ ಮತ್ತು ಸಿ.ಎಸ್ ಕೆ ನಡುವಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಆಗಾಗ ಮಳೆಯಾಗುತ್ತಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಬೆಂಗಳೂರಿಗೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿದೆ.

RCB vs CSK IPL 2024 :  ಬೆಂಗಳೂರಿನಲ್ಲಿ ನಡೆಯಲಿರೋ ಐಪಿಎಲ್ ಆವೃತ್ತಿಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ (RCB Vs CSK) ನಡುವಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈಗಾಗಲೇ ಆಗಾಗ ಮಳೆ ಆಗುತ್ತಿರುವ ಬೆನ್ನಲ್ಲೇ ಹವಾಮಾನ ಇಲಾಖೆ ಬೆಂಗಳೂರಿಗೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿದೆ. ಮಾತ್ರವಲ್ಲ ಆರ್‌ಸಿಬಿ ಮತ್ತು ಸಿಎಸ್ ಕೆ ನಡುವಿನ ಪಂದ್ಯಕ್ಕೆ ಆರೆಂಜ್ ಅಲರ್ಟ್ (Orange Alert) ಘೋಷಿಸಿದೆ.

RCB vs CSK IPL 2024 IMD Declared orange alert for RCB vs CSK match
Image Credit to Original Source

ರಾಜ್ಯ ಹವಾಮಾನ ಇಲಾಖೆ ಬೆಂಗಳೂರಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಹೀಗಾಗಿ ರಾಜ್ಯ ಹವಾಮಾನ ತಜ್ಞರು ಬೆಂಗಳೂರಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಾವಾಮಾನ ಇಲಾಖೆ ಮೇ 18 ರಿಂದ 20ರ ವರೆಗೆ ಬೆಂಗಳೂರಲ್ಲಿ ಭಾರೀ ಮಳೆ ಸಾಧ್ಯತೆ ಎಂದಿದೆ.

ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ದಕ್ಷಿಣ ಒಳನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆ ಸಂಭವ ಎಂದಿದೆ. ಅಲ್ಲದೇ
ಬೆಂಗಳೂರು ಜೊತೆಗೆ ಮೈಸೂರು, ಮಂಡ್ಯ, ಕೋಲಾರದಲ್ಲೂ ಭಾರೀ ಮಳೆ ಎಚ್ಚರಿಕೆ ನೀಡಿದೆ. ಮೇ 18 ರಿಂದ 20ರ ವರೆಗೆ ದಕ್ಷಿಣದ ಎಲ್ಲಾ ಜಿಲ್ಲೆಗಳಿಗೂ ಆರೆಂಜ್ ಅಲರ್ಟ್ ಘೋಷಿಸಿದೆ.

ಹೀಗಾಗಿ ಮೇ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಆರ್ ಸಿಬಿ ಸಿಎಸ್ ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗೋ ಸಾಧ್ಯತೆ ಇದೆ. ಮೇ 18ರಂದು ಬೆಂಗಳೂರಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿರೋದರಿಂದ ಆರ್.ಸಿ.ಬಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Virat Kohli’s Daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ !

ಶನಿವಾರ ಮಳೆಯಿಂದಾಗಿ ಪಂದ್ಯ ರದ್ದಾದರೆ ಆರ್​ಸಿಬಿ ಮತ್ತು ಸಿಎಸ್​ಕೆ ತಲಾ ಒಂದೊಂದು ಪಾಯಿಂಟ್ ಹಂಚಿಕೊಳ್ಳಲಿದೆ. ಇದರಿಂದ ಸಿಎಸ್​ಕೆ ತಂಡದ ಒಟ್ಟು ಪಾಯಿಂಟ್ಸ್ 15 ಆಗಲಿದ್ದು, ಇದೇ ವೇಳೆ ಆರ್​ಸಿಬಿ ತಂಡದ ಅಂಕ 13 ರಲ್ಲೇ ಉಳಿಯಲಿದೆ. ಅತ್ತ 15 ಅಂಕಗಳನ್ನು ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ 3ನೇ ಅಥವಾ 4ನೇ ಸ್ಥಾನದೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ.

RCB vs CSK IPL 2024 IMD Declared orange alert for RCB vs CSK match
Image Credit to Original Source

ಮೇ 18 ರಂದು ಮಳೆ ಬಂದು ಪಂದ್ಯ ರದ್ದಾದರೆ ಆರ್​ಸಿಬಿ ತಂಡದ ಐಪಿಎಲ್​ನಿಂದ ಹೊರಬೀಳಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು 15 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವುದು ಖಚಿತ. ಹೀಗಾಗಿ ಬೆಂಗಳೂರಿನಲ್ಲಿ ಶನಿವಾರ ನಡೆಯಲಿರುವ ಪಂದ್ಯವು ಮಳೆಗೆ ಅಹುತಿಯಾಗದಿರಲಿ ಎಂಬುದೇ ಆರ್​ಸಿಬಿ ಅಭಿಮಾನಿಗಳ ಅಂಬೋಣ.

ಇದನ್ನೂ ಓದಿ : Last Match For Rahul & Rohit: ಲಕ್ನೋ ಪರ ರಾಹುಲ್’ಗೆ ಇಂದೇ ಲಾಸ್ಟ್ ಮ್ಯಾಚ್, ಮುಂಬೈ ಪರ ಕೊನೆಯ ಪಂದ್ಯವಾಡಲಿದ್ದಾರೆ ರೋಹಿತ್ !

ಆದರೆ ವೆದರ್ ಎಕ್ಸಪರ್ಟ್ ಗಳು ಈಗಾಗಲೇ ಆರೆಂಜ್ ಅಲರ್ಟ್ ಘೋಷಿಸಿರೋದರಿಂದ ಮೇ18 ರಂದು ಭಾರಿ ಮಳೆ ಸುರಿಯೋ ಆತಂಕ ಎದುರಾಗಿದೆ. ಒಂದು ಕನಿಷ್ಠ 10 ಓವರ್ ಗಳ ಮ್ಯಾಚ್ ನಡೆದರೂ ಕೂಡ ಆರ್.ಸಿ.ಬಿ ಹಣೆಬರಹ ಬದಲಾಗಬಹುದು. ಹೀಗಾಗಿ ಆರಂಭದಲ್ಲೇ ಮಳೆ ಸುರಿಯದಿರಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿರೋ ಮ್ಯಾಚ್ ಗೆ ಈಗ ವೆದರ್ ಎಕ್ಸಪರ್ಟ್ ಆರೇಂಜ್ ಅಲರ್ಟ್ ತೂಗುಕತ್ತಿಯಂತಾಗಿದೆ.

ಇದನ್ನೂ ಓದಿ : Hardik Pandya: ರೋಹಿತ್, ಅಗರ್ಕರ್ ಬೇಡ ಎಂದರೂ ಹಾರ್ದಿಕ್ ಪಾಂಡ್ಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ? ಇಲ್ಲಿದೆ ಅಸಲಿ ಕಾರಣ !

RCB vs CSK IPL 2024: IMD Declared orange alert for RCB vs CSK match

Comments are closed.