IPL 2024 Food poisoning for RCB fan: ಪಂದ್ಯ ವೀಕ್ಷಿಸಲು ಬಂದವರಿಗೆ ಹಳಸಿದ ಆಹಾರ ಕೊಟ್ಟ ಆರೋಪ, KSCA ವಿರುದ್ಧ ಎಫ್ಐಆರ್!

IPL 2024 Shocking Food poisoning for RCB fan:  ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವಾಡುವಾಗಲೆಲ್ಲಾ ಆರ್’ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿರುತ್ತಾರೆ.

IPL 2024 Shocking Food poisoning for RCB fan:  ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವಾಡುವಾಗಲೆಲ್ಲಾ ಆರ್’ಸಿಬಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿರುತ್ತಾರೆ. ಆರ್’ಸಿಬಿ ಪಂದ್ಯ ಸೋಲಲಿ, ಗೆಲ್ಲಲಿ.. ತಂಡದ ಮೇಲೆ ಅಭಿಮಾನಿಗಳ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

IPL 2024 rcb vs dc Food poisoning for RCB fan FIR against KSCA for giving stale food to those who came to watch the match
Image Credit to Original Source

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 17 ವರ್ಷಗಳಿಂದ ಕಪ್ ಗೆಲ್ಲದಿದ್ದರೂ ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಆರ್’ಸಿಬಿಯನ್ನು ನಿರಂತರವಾಗಿ ಬೆಂಬಲಿಸಿಕೊಂಡೇ ಬಂದಿದ್ದಾರೆ. ಆದರೆ ಅಂತಹ ಅಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಳಸಿದ ಆಹಾರ ನೀಡಲಾಗಿದ್ದು, ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (Karnataka State Cricket Association- KSCA) ವಿರುದ್ಧ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮೇ 12ರಂದು ಚಿನ್ವಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್’ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಅಭಿಮಾನಿ ಯೊಬ್ಬರು ಹಳಸಿದ ಆಹಾರ ತಿಂದು ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದರು. 23 ವರ್ಷದ ಚೈತನ್ಯ ಎಂಬ ಕ್ರಿಕೆಟ್ ಅಭಿಮಾನಿ ಕತಾರ್ ಏರ್’ವೇಸ್ ಫ್ಯಾನ್ಸ್ ಟೆರೆಸ್ ಸ್ಟ್ಯಾಂಡ್’ನಲ್ಲಿ ಘೀ ರೈಸ್, ಚನ್ನ ಮಸಾಲಾ, ಕಟ್ಲೆಟ್ ಮತ್ತು ಡ್ರೈ ಜಾಮೂನು ತಿಂದಿದ್ದರು. ಆಹಾರ ಸೇವಿಸಿದ ಕೆಲ ಸಮಯದ ನಂತರ ಅಸ್ವಸ್ಥಗೊಂಡಿದ್ದ ಚೈತನ್ಯ ಕುಸಿದು ಬಿದ್ದಿದ್ದರು. ಚೈತನ್ಯಗೆ ಫುಡ್ ಪಾಯ್ಸನಿಂಗ್ ಆಗಿರುವುದು ವೈದ್ಯಕೀಯ ಪರೀಕ್ಷೆಯಲ್ಲು ದೃಢಪಟ್ಟಿತ್ತು.

ಇದನ್ನೂ ಓದಿ : Last Match For Rahul & Rohit: ಲಕ್ನೋ ಪರ ರಾಹುಲ್’ಗೆ ಇಂದೇ ಲಾಸ್ಟ್ ಮ್ಯಾಚ್, ಮುಂಬೈ ಪರ ಕೊನೆಯ ಪಂದ್ಯವಾಡಲಿದ್ದಾರೆ ರೋಹಿತ್ !

ಈ ಬಗ್ಗೆ ಚೈತನ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಾಜ್ಯ ಕ್ರಿಕೆಟ್ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯವನ್ನು 47 ರನ್’ಗಳಿಂದ ಗೆದ್ದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇ ಆಫ್ ಕನಸನ್ನು ಜೀವಂತ ವಾಗಿಟ್ಟುಕೊಂಡಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್-2024 ಟೂರ್ನಿಯಲ್ಲಿ ಆಡಿರುವ 13 ಪಂದ್ಯಗಳಲ್ಲಿ ಆರು ಗೆಲುವು ಹಾಗೂ 7 ಸೋಲುಗಳೊಂದಿಗೆ 12 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪ್ಲೇ ಆಫ್ ಕನಸನ್ನು ಜೀವಂತವಾಗಿಡಬೇಕಾದರೆ ಶನಿವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯವನ್ನು ಆರ್’ಸಿಬಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಸಿಎಸ್’ಕೆ ವಿರುದ್ಧ ಆರ್’ಸಿಬಿ ಕನಿಷ್ಠ 18 ರನ್’ಗಳಿಂದ ಪಂದ್ಯ ಗೆಲ್ಲಬೇಕಿದೆ. ಒಂದು ವೇಳೆ ಚೇಸಿಂಗ್ ಮಾಡಿದರೆ ಸಿಎಸ್’ಕೆ ಒಡ್ಡುವ ಗುರಿಯನ್ನು 18.1 ಓವರ್’ಗಳ ಒಳಗೆ ತಲುಪಬೇಕಿದೆ. ಹಾಗಾದಲ್ಲಿ ಮಾತ್ರ ಆರ್’ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶವಿದೆ.

ಇದನ್ನೂ ಓದಿ : Virat Kohli’s Daughter: ಅಪ್ಪನಂತೆ ಮಗಳು, 3ನೇ ವಯಸ್ಸಲ್ಲೇ ಬ್ಯಾಟ್ ಬೀಸುತ್ತಿದ್ದಾಳಂತೆ ವಿರಾಟ್ ಕೊಹ್ಲಿ ಪುತ್ರಿ !

IPL 2024 rcb vs dc Food poisoning for RCB fan FIR against KSCA for giving stale food to those who came to watch the match
Image Credit to Original Source

ಚೆನ್ನೈ ಸೂಪರ್ ಕಿಂಗ್ಸ್ 13 ಪಂದ್ಯಗಳಿಂದ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಪಾಯಿಂಟ್ಸ್ ಗಳಿಸಿ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಆರ್’ಸಿಬಿ +0.387 ರನ್ ರೇಟ್ ಹೊಂದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ +0.528 ರನ್ ರೇಟ್ ಹೊಂದಿದೆ.

ಇದನ್ನೂ ಓದಿ : RCB Vs CSk IPL 2024 : ಆರ್‌ಸಿಬಿ Vs ಸಿಎಸ್‌ಕೆ ಪಂದ್ಯಕ್ಕೆ ಮಳೆಯ ಭೀತಿ , ಆರೆಂಜ್‌ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ

ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಹಂಚಿಕೆಯಾಗಲಿದೆ. ಆಗ RCB ತಂಡ 14 ಪಂದ್ಯಗಳಿಂದ ಕೇವಲ 13 ಅಂಕ ಗಳಿಸಿದಂತಾಗುತ್ತದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ 14 ಪಂದ್ಯಗಳಿಂದ 15 ಅಂಕ ಗಳಿಸಿ ಪ್ಲೇ ಆಫ್ ಹಂತಕ್ಕೇರಲಿದೆ.

IPL 2024 Shocking Food poisoning for RCB fan: FIR against KSCA for giving stale food to those who came to watch the match!

Comments are closed.