ಭಕ್ತರಿಗಾಗಿ ಕಣ್ಣೀರು ಸುರಿಸ್ತಾನೆ ಆಂಜನೇಯ – ಇಲ್ಲಿ ಬಂದ್ರೆ ಕಷ್ಟವೆಲ್ಲಾ ಆಗುತ್ತೆ ನಿವಾರಣೆ

Dodda Banaswadi Anjaneya temple : ಹನುಮ ಈತ ರಾಮ ಭಕ್ತ, ಚಿರಂಜೀವಿ, ಅಂಜನಾ ಪುತ್ರ ಹೀಗೆ ಬಣ್ಣಿಸುತ್ತಾ ಹೋದ್ರೆ ಭಕ್ತರಿಗೆ ಪದಗಳೇ ಸಾಕಾಗೋದಿಲ್ಲ

Dodda Banaswadi Anjaneya temple : ಹನುಮ ಈತ ರಾಮ ಭಕ್ತ, ಚಿರಂಜೀವಿ, ಅಂಜನಾ ಪುತ್ರ ಹೀಗೆ ಬಣ್ಣಿಸುತ್ತಾ ಹೋದ್ರೆ ಭಕ್ತರಿಗೆ ಪದಗಳೇ ಸಾಕಾಗೋದಿಲ್ಲ .ಇವನ ಭಕ್ತಿಗೆ ಇವನೇ ಸಾಟಿ. ಸ್ವತಃ ತಾನೇ ಭಕ್ತನಾಗಿರೋವಾಗ ತನ್ನ ಭಕ್ತರನ್ನು ಪೊರೆಯದೇ ಇರುತ್ತಾನಾ ?. ತನ್ನ ಭಕ್ತರ ಪಾಲಿಗಂತು ನಿಜಕ್ಕೂ ಆಪತ್ಬಾಂಧವ ಈ ಮಾರುತಿ. ಇದಕ್ಕೆ ಉದಾಹರಣೆ ಈ  ದೇವಾಲಯ.

ಈ ದೇವಾಲಯದಲ್ಲಿ ಅಂದು ಕೊಂಡದ್ದು ಆಗದಿರೋದೇ ಇಲ್ಲ. ಇಲ್ಲಿ ಹರಕೆ ಮಾಡಿ ಹನುಮಾನ್ ಧ್ಯಾನ ಮಾಡಿದ್ರೆ ಕ್ಷಣ ಮಾತ್ರದಲ್ಲಿ ಕೆಲಸ ಈಡೇರುತ್ತೋ ಇಲ್ಲವೋ ಅಂತ ಗೊತ್ತಾಗಿಯೇ ಬಿಡುತ್ತೆ . ಅದರಲ್ಲೂ ಪೂಜೆ ಧ್ಯಾನ ಮಾಡಿದ್ರೆ ಇಷ್ಟಾರ್ಥ ಈಡೇರುತ್ತೆ ಅನ್ನೋದು ಭಕ್ತರ ನಂಬಿಕೆ . ಇದಕ್ಕೆ ಕಾರಣ ಇಲ್ಲಿ ನಡೆಯುವ ಒಂದು ವಿಸ್ಮಯ.

Dodda Banaswadi Anjaneya temple Anjaneya sheds tears for devotees - stopping here will remove all hardships
Image Credit to Original Source

ಇಲ್ಲಿ ಸಾಮಾನ್ಯವಾಗಿ ಬೇಡಿಕೊಂಡು ಬರುವ ಭಕ್ತರಿಗೆ ದೇವರಿಗೆ ಮೂರು ಸುತ್ತು ಪ್ರದಕ್ಷಿಣೆ ಬಂದು ಧ್ಯಾನ ಮಾಡುವಂತೆ ಹೇಳಲಾಗುತ್ತೆ. ಧ್ಯಾನ ಮಾಡುವ ವೇಳೆ ತೆಂಗಿನ ಕಾಯಿ ಒಡೆಯು ಶಬ್ಧ ಭಾಸವಾದರೆ ಕೆಲಸ ಆದಷ್ಟು ಬೇಗ ನೆರವೇರುತ್ತೆ ಎಂದು ಅರ್ಥ ಇಲ್ಲವಾದರೆ ಕೆಲಸ ನಿಧಾನವಾಗಿ ಆಗುತ್ತೆ ಅನ್ನೋದು ಇಲ್ಲಿಯ ನಂಬಿಕೆ . ಹೀಗಾಗಿ ಇದನ್ನು ತೆಂಗಿನ ಕಾಯಿ ಆಂಜನೇಯ ಅಂತಾನು ಕರೆಯಲಾಗುತ್ತೆ.

ಇದನ್ನೂ ಓದಿ : ರಾಮನ ದರ್ಶನಕ್ಕಾಗಿ ಕಾಯುತ್ತವೆ ಪ್ರೇತಾತ್ಮಗಳು : ರಾಮನಿಗೂ ಲಕ್ಷ್ಮಣ ನಿಗೂ ಇಲ್ಲಿ ಭಿನ್ನ ಪೂಜೆ

ಇದನ್ನು ಖುದ್ದು ವ್ಯಾಸರಾಯರೇ ಸ್ಥಾಪಿದ್ರು ಅಂತ ಹೇಳಲಾಗುತ್ತೆ . ಸ್ಥಳ ಪುರಾಣದ ಪ್ರಕಾರ ರಾಮ ಲಕ್ಷಣ ಹಾಗು ಹನುಮಂತ ಇಲ್ಲಿಗೆ ಬಂದಿದ್ದರಂತೆ. ಇಲ್ಲಿ ಸ್ವಲ್ಪ ವಿಶ್ರಾಂತಿ ಪಡೆದು ಹೋಗುವಾಗ ಹನುಮಾನ್ ದೇವರ ಕೂದಲೊಂದು ಬಿದ್ದು ಅದು ಸಾಲಿಗ್ರಾಮ ರೂಪದ ಹನುಮನ ವಿಗ್ರಹವಾಯಿತು. ತದ ನಂತರ ಮಣ್ಣಿನ ಒಳಗೆ ಸೇರಿದ್ದ ವಿಗ್ರಹವನ್ನು ವ್ಯಾಸರಾಯರು ಹೊರತೆಗೆದು ಪ್ರತಿಷ್ಠಾಪಿಸಿದರು ಅನ್ನೋ ನಂಬಿಕೆ ಭಕ್ತರಲ್ಲಿದೆ.

ಇನ್ನು ಇಲ್ಲಿ ನಡೆಯುವ ಮತ್ತೊಂದು ವಿಶೇಷವೆಂದರೆ ದೇವರ ಕಣ್ಣಲ್ಲಿ ನೀರು ಸುರಿಯೋದು . ಪ್ರತಿ ವರ್ಷ ಹನುಮಾನ್ ಜಯಂತಿಯ ದಿನದಂದು ದೇವರ ಕಣ್ಣಿನಿಂದ ನೀರು ಸುರಿಯುತ್ತಂತೆ. ಮೊದಲನೇ ದಿನ ರಾತ್ರಿ 12 ರಿಂದ ಆರಂಭವಾಗುವ ಕಣ್ಣೀರು ನಂತರದ ದಿನ ರಾತ್ರಿ 12.೩30ರ ತನಕ ಇರುತ್ತೆ ಅನ್ನುತ್ತಾರೆ ಭಕ್ತರು . ಈ ಕುರಿತಂತೆ ವ್ಯಾಸರಾಜರು ಬರೆದ ಕಥಾಸರಣಿಯಲ್ಲಿ ಉಲ್ಲೇಖಿತವಾಗಿದೆಯಂತೆ. ಇನ್ನು ಈದೇವಾಲಯದ ಪವಾಡ ಕುರಿತಂತೆ ಅಮೆರಿಕಾದ ಪತ್ರಿಕೆಯೊಂದು ವರದಿಯನ್ನು ಮಾಡಿದೆ ಅನ್ನೋದು ವಿಶೇಷ.

ಇದನ್ನೂ ಓದಿ : ಕರ್ನಾಟಕದಲ್ಲಿದೆ ಮಾರೀಚನನ್ನು ಕೊಂದ ಜಾಗ ; ರಾಮ ಬಂದು ಹೋಗಿದಕ್ಕೆ ಈ ದೇವಾಲಯವೇ ಸಾಕ್ಷಿ

Dodda Banaswadi Anjaneya temple Anjaneya sheds tears for devotees - stopping here will remove all hardships
Image Credit to Original Source

ಅಂದ ಹಾಗೆ ಈ ಪವಾಡ ನಡೆಯೋ ದೇವಾಲಯ ಎಲ್ಲಿದೆ ಅಂತ ಹೇಳೋದಾದ್ರೆ, ಇದು ಇರೋದು ನಮ್ಮ ರಾಜ್ಯಧಾನಿ ಅನ್ನಿಸಿಕೊಂಡಿರೋ ಬೆಂಗಳೂರಿನಲ್ಲಿ . ಮೆಜೆಸ್ಟಿಕ್ ನಿಂದ 12 ಕಿಲೋ ಮೀಟರ್ ದೂರವಿರುವ ದೊಡ್ಡಬಾಣಸವಾಡಿಯ ಆಂಜನೇಯ ದೇವಸ್ಥಾನದಲ್ಲಿ  ದೇವರು ನೆಲೆನಿಂತಿದ್ದಾನೆ.

ಸುಲಭವಾಗಿ ಹೇಳೋದಾದ್ರೆ ಬಾಣಸವಾಡಿಯ ಬಿಬಿಎಂಪಿ ಕಚೇರಿಯ ಬಳಿಯೇ ಈ ದೇವಾಲಯವಿದೆ. ಬೆಂಗಳೂರಿನಿಂದ ಇಲ್ಲಿಗೆ ಸಾಕಷ್ಟು ಬಸ್ ಸೌಕರ್ಯ ವೂ ಇದೆ. ಈ ದೇವಾಲಯ ಬೆಳಗ್ಗೆ 7 ರಿಂದ ಮಧ್ಯಾಹ್ನ 12 ಗಂಟೆ ವರೆಗೆ ತೆರೆದಿರುತ್ತೆ. ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು , ವಿದೇಶಿ ಭಕ್ತರೂ ಕೂಡ ಇಲ್ಲಿಗೆ ಆಗಮಿಸುತ್ತಾರೆ.

ಇದನ್ನೂ ಓದಿ : ನಿಗೂಢಗಳ ಬೀಡು ಈ ದೇವಾಲಯ; ಇಲ್ಲಿ ಮಿಡಿಯುತ್ತೆ ಕೃಷ್ಣನ ಜೀವಂತ ಹೃದಯ

Dodda Banaswadi Anjaneya temple Anjaneya sheds tears for devotees – stopping here will remove all hardships

Comments are closed.