Sports

ಏಷ್ಯನ್‌ ಗೇಮ್ಸ್‌ ಫೈನಲ್‌ಗೆ ಲಗ್ಗೆ ಇಟ್ಟ ಭಾರತ : ಸಾಯಿ ಕಿಶೋರ್‌ ದಾಳಿಗೆ ಬಾಂಗ್ಲಾ ಉಡೀಸ್‌

Published by
Kannada News Next Desk

ಹ್ಯಾಂಗ್‌ಝೌ : ಭಾರತದ ಸಾಯಿಕಿಶೋರ್‌ (Sai Kishore) ದಾಳಿಗೆ ಬಾಂಗ್ಲಾದೇಶ ತಂಡ (Bangladesh) ನಲುಗಿದೆ. ಏಷ್ಯನ್‌ ಗೇಮ್ಸ್‌ನಲ್ಲಿ(Asian Games 2023) ಬಾಂಗ್ಲಾದೇಶ ತಂಡವನ್ನು(India vs Bangladesh)  ಏಷ್ಯನ್‌ ಗೇಮ್ಸ್‌ ಕ್ರಿಕೆಟ್  ಸೆಮಿಫೈನಲ್‌ (Asian Games Semi final 2023) ಪಂದ್ಯದಲ್ಲಿ ಭರ್ಜರಿ 9 ವಿಕೆಟ್‌ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ.

Image Credit to Original Source

ಚೀನಾದ ಹ್ಯಾಂಗ್‌ಝೌ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೊದಲು ಬ್ಯಾಟಿಂಗ್‌ ನಡೆಸಿದೆ. ಆದರೆ ಬಾಂಗ್ಲಾದೇಶ ತಂಡಕ್ಕೆ ಭಾರತದ ಬೌಲರ್‌ ಸಾಯಿ ಕಿಶೋರ್‌ ಆರಂಭಿಕ ಆಘಾತ ನೀಡಿದ್ದಾರೆ.

ಮಹದುಲ್ಲಾ ಹಸಜ್‌ ಜಾಯ್‌ ಅವರನ್ನು ಸಾಯಿ ಕಿಶೋರ್‌ ಬಲಿ ಪಡೆದ ಬೆನ್ನಲ್ಲೇ ನಾಯಕ ಸಾಯಿಫ್‌ ಹಸನ್‌ ನನ್ನು ವಾಷಿಂಗ್ಟನ್‌ ಸುಂದರ್‌ ಬಲೆ ಬೀಳಿಸಿದ್ರು. ನಂತರ ಬಂದ ಜಾಕಿರ್‌ ಹುಸೇನ್‌ ಅವರನ್ನು ಸುಂದರ್‌ ಶೂನ್ಯಕ್ಕೆ ಔಟ್‌ ಮಾಡಿದ್ದಾರೆ.

ಇದನ್ನೂ ಓದಿ : ವಿಶ್ವಕಪ್ 2023 ತಂಡದಲ್ಲಿ ಸಿಗದ ಸ್ಥಾನ : ನಿವೃತ್ತಿ ಘೋಷಿಸಲು ಮುಂದಾದ ಭಾರತದ ಖ್ಯಾತ ಆಟಗಾರರು

ಆದರೆ ನಂತರ ಬಂದ ಆಫಿಪ್‌ ಹುಸೇಲ್‌, ಶಹದಾತ್‌ ಹುಸೇನ್‌ ನಿರಾಸೆ ಮೂಡಿಸಿದ್ರು. ಒಂದೆಡೆ ಪರ್ವಿಜ್‌ ಹುಸೇನ್‌ ಉತ್ತಮವಾಗಿ ಬ್ಯಾಟಿಂಗ್‌ ಮಾಡುತ್ತಿದ್ರೆ ಇನ್ನೊಂದೆಡೆಯಲ್ಲಿ ಬಾಂಗ್ಲಾ ತಂಡ ಸಾಲು ಸಾಲು ವಿಕೆಟ್‌ ಕಳೆದುಕೊಂಡಿದೆ. ನಂತರ ಜಾಕೆರ್‌ ಆಲಿ ಒಂದಿಷ್ಟು ಹೊತ್ತು ಬ್ಯಾಟಿಂಗ್‌ ನಡೆಸಿದ್ದಾರೆ.

ಪರ್ವೇಜ್‌ ಹುಸೈನ್‌ 32 ಎಸೆತಗಳಲ್ಲಿ 23 ರನ್‌ ಹಾಗೂ ಜಾಕೇರ್‌ ಆಲಿ 29 ಎಸೆತಗಳಲ್ಲಿ 24 ರನ್‌ ಬಾರಿಸಿದ್ದಾರೆ. ಆದರೆ ಭಾರತೀಯ ಬೌಲರ್‌ಗಳು ಬಾಂಗ್ಲಾದೇಶ ತಂಡದ ಯಾವೊಬ್ಬ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿದುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ.

Image Credit to Original Source

ಟೀಂ ಇಂಡಿಯಾದ ಆಟಗಾರ ಸಾಯಿ ಕಿಶೋರ್‌ 12 ರನ್‌ ಗೆ 3 ವಿಕೆಟ್‌ ಪಡೆದುಕೊಂಡ್ರೆ, ವಾಷಿಂಗ್ಟನ್‌ ಸುಂದರ್‌ 15 ರನ್‌ ನೀಡಿ 2 ವಿಕೆಟ್‌ ಕಬಳಿಸಿದ್ದಾರೆ. ಉಳಿದಂತೆ ತಿಲಕ್‌ ವರ್ಮಾ, ರವಿ ಬಿಶ್ನೋಯಿ ಹಾಗೂ ಶಹಬಾಜ್‌ ಅಹಮದ್‌ ತಲಾ ಒಂದೊಂದು ವಿಕೆಟ್‌ ಪಡೆದುಕೊಂಡಿದ್ದಾರೆ. ಅಂತಿಮವಾಗಿ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 96 ರನ್‌ ಗಳಿಸಿದೆ.

ಇದನ್ನೂ ಓದಿ : ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ !

ಬಾಂಗ್ಲಾದೇಶ ನೀಡಿದ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಬಾಂಗ್ಲಾದೇಶದ ಬೌಲರ್‌ ರಿಪ್ಪರ್‌ ಮೊಂಡಲ್‌ ಆರಂಭಿಕ ಆಘಾತ ನೀಡಿದ್ರು. ಭರವಸೆಯ ಆಟಗಾರ ಯಶಸ್ವಿ ಜೈಸ್ವಾಲ್‌ ಅವರನ್ನು ಶೂನ್ಯಕ್ಕೆ ಬಲಿ ಪಡೆಯುವ ಮೂಲಕ ಶಾಕ್‌ ಕೊಟ್ರು. ಆದರೆ ನಂತರ ಕ್ರೀಸ್‌ಗೆ ಬಂದ ನಾಯಕ ರುತುರಾಜ್‌ ಗಾಯಕ್ವಾಡ್‌ ಹಾಗೂ ತಿಲಕ್‌ ವರ್ಮಾ ಭರ್ಜರಿ ಬ್ಯಾಟಿಂಗ್‌ ನಡೆಸಿದ್ದಾರೆ.

Image Credit to Original Source

ಇಬ್ಬರು ಆಟಗಾರರು ಬಾಂಗ್ಲಾದೇಶದ ಬೌಲರ್‌ಗಳನ್ನು ಇನ್ನಿಲ್ಲದಂತೆ ಬೆಂಡೆತ್ತಿದ್ದಾರೆ. ರುತುರಾಜ್‌ ಗಾಯಕ್ವಾಡ್‌ 26 ಎಸೆತಗಳಲ್ಲಿ 40 ರನ್‌ ಬಾರಿಸಿದ್ರೆ. ತಿಲಕ್‌ ವರ್ಮಾ 26 ಎಸೆತಗಳಲ್ಲಿ 55 ರನ್‌ ಸಿಡಿಸುವ ಮೂಲಕ ಭಾರತ ತಂಡಕ್ಕೆ ಭರ್ಜರಿ 9 ವಿಕೆಟ್‌ಗಳ ಗೆಲುವನ್ನು ತಂದುಕೊಟ್ಟಿದ್ದಾರೆ. ಭಾರತ ತಂಡ 9.2 ಓವರ್‌ಗಳಲ್ಲಿ ಕೇವಲ 1 ವಿಕೆಟ್‌ ಕಳೆದುಕೊಂಡು 97 ರನ್‌ ಬಾರಿಸುವ ಮೂಲಕ ಗೆಲುವನ್ನು ಕಂಡಿದೆ.

ಇದನ್ನೂ ಓದಿ : ವಿಶ್ವಕಪ್‌ ಕ್ರಿಕೆಟ್‌ : ಇಂಗ್ಲೆಂಡ್‌ ವಿರುದ್ದ ನ್ಯೂಜಿಲೆಂಡ್‌ಗೆ ಗೆಲುವು, ಕಿವೀಸ್ ಪರ ಬೆಂಗಳೂರಿನ ರಾಚಿನ್‌ ರವೀಂದ್ರ ಚೊಚ್ಚಲ ಶತಕ

ಏಷ್ಯನ್ ಗೇಮ್ಸ್ 2023 : ಭಾರತ ಕ್ರಿಕೆಟ್ ತಂಡ :

ರುತುರಾಜ್ ಗಾಯಕ್ವಾಡ್ (ಸಿ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (wk), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ದುಬೆ, ಪ್ರಭಾಸಿಮ್ರಾನ್ ಸಿಂಗ್ (ವಾಕ್), ಆಕಾಶ್ ದೀಪ್.

ಏಷ್ಯನ್ ಗೇಮ್ಸ್ 2023 : ಬಾಂಗ್ಲಾದೇಶ ಕ್ರಿಕೆಟ್ ತಂಡ :

ಜೇಕರ್ ಅಲಿ (wk), ಮಹ್ಮುದುಲ್ ಹಸನ್ ಜಾಯ್, ಮೊಸದ್ದೆಕ್ ಹೊಸೈನ್, ಪರ್ವೇಜ್ ಹೊಸೈನ್ ಎಮನ್, ಸೈಫ್ ಹಾಸನ್ (c), ಶಹದತ್ ಹೊಸೈನ್, ಯಾಸಿರ್ ಅಲಿ, ಜಾಕಿರ್ ಹಸನ್, ರಿಪಾನ್ ಮಂಡಲ್, ಮೃತ್ತುನ್‌ಜೋಯ್ ಹಸನ್, ರಾಕಿ ಚೌಧುರಿ , ಸುಮೋನ್ ಖಾನ್, ತನ್ವಿರ್ ಇಸ್ಲಾಂ, ತಂಜಿಮ್ ಹಸನ್ ಸಾಕಿಬ್, ಅಫೀಫ್ ಹೊಸೈನ್.

Asian Games 2023 India vs Bangladesh Semi final 1 live score India Win by 9 wickets enter final

Share

Recent Posts