ವಿಶ್ವಕಪ್ 2023 : ಟೀಂ ಇಂಡಿಯಾ ನಾಯಕತ್ವ ಕಳೆದುಕೊಂಡ ರೋಹಿತ್‌ ಶರ್ಮಾ !

ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ (Rohit Sharma) ವಿಶ್ವಕಪ್‌ನಲ್ಲಿ (ICC World Cup 2o23 ODI)  ಬ್ಯುಸಿಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ದ (India vs Austraila ) ಪಂದ್ಯಕ್ಕಾಗಿ ಭಾರತದ ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವಲ್ಲೇ ರೋಹಿತ್‌ ಶರ್ಮಾ ನಾಯಕತ್ವ ತೊರೆಯುವ ಸುದ್ದಿ ಹೊರಬಿದ್ದಿದೆ.

ಟೀಂ ಇಂಡಿಯಾದ ನಾಯಕ ರೋಹಿತ್‌ ಶರ್ಮಾ (Rohit Sharma) ಸದ್ಯ ಏಕದಿನ ವಿಶ್ವಕಪ್‌ನಲ್ಲಿ (ICC World Cup 2o23 ODI)  ಬ್ಯುಸಿಯಾಗಿದ್ದಾರೆ. ಎರಡು ಅಭ್ಯಾಸ ಪಂದ್ಯಗಳು ರದ್ದಾಗಿದ್ದರೂ ಕೂಡ ನೇರವಾಗಿ ವಿಶ್ವಕಪ್‌ ಪಂದ್ಯಾವಳಿಯನ್ನು ಭಾರತ ಕ್ರಿಕೆಟ್‌ ತಂಡ ( Indina Cricket team) ಆಡಲಿದೆ. ಆಸ್ಟ್ರೇಲಿಯಾ ವಿರುದ್ದ (India vs Austraila )ನಡೆಯಲಿರುವ ಮೊದಲ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಈ ನಡುವಲ್ಲೇ ರೋಹಿತ್‌ ಶರ್ಮಾ ನಾಯಕತ್ವ ತೊರೆಯುವ ಸುದ್ದಿ ಹೊರಬಿದ್ದಿದೆ.

World Cup 2023 Indian Cricket team Rohit Sharma Lost Captaincy
Image Credit to Original Source

ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ರೋಹಿತ್‌ ಶರ್ಮಾ ಟೀಂ ಇಂಡಿಯಾವನ್ನು ಮುನ್ನೆಡೆಸುತ್ತಿದ್ದಾರೆ. ಟೆಸ್ಟ್‌, ಏಕದಿನ ಹಾಗೂ ಟಿ20 ತಂಡಕ್ಕೂ ರೋಹಿತ್‌ ಶರ್ಮಾ ಅವರೇ ನಾಯಕರಾಗಿದ್ದಾರೆ. ಆದ್ರೆ ರೋಹಿತ್‌ ಶರ್ಮಾ ಇದೀಗ ಟೆಸ್ಟ್‌ ತಂಡದ ನಾಯಕತ್ವವನ್ನು ತೊರೆಯುವ ಸಾಧ್ಯತೆಯಿದೆ.

ಭಾರತ ಕ್ರಿಕೆಟ್‌ ತಂಡ ಇಂಗ್ಲೆಂಡ್‌ ವಿರುದ್ದ ಟೆಸ್ಟ್‌ ಸರಣಿಯನ್ನು ಆಡಲಿದೆ. ಈ ಪಂದ್ಯಾವಳಿಗೆ ಬಿಸಿಸಿಐ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಆದರೆ ಈ ಪಂದ್ಯಾವಳಿಯನ್ನು ಅನುಭವಿ ಆಟಗಾರ ಅಜಿಂಕ್ಯಾ ರಹಾನೆ (Ajinkya Rahane) ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : ICC Cricket Ranking : ಟೆಸ್ಟ್‌, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ವಿಶ್ವಕ್ಕೆ ಭಾರತವೇ ನಂ.1

ಮೂಲಗಳ ಪ್ರಕಾರ ಅಜಿಂಕ್ಯಾ ರಹಾನೆ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳುವುದು ಖಚಿತ. ಈಗಾಗಲೇ ನಾಯಕನಾಗಿ ಅಜಿಂಕ್ಯಾ ರಹಾನೆ ಹಲವು ಪಂದ್ಯಾವಳಿಗಳಲ್ಲಿ ಮುನ್ನೆಡೆಸಿದ್ದಾರೆ. ಆದರೆ ಖಾಯಂ ನಾಯಕನ ಸ್ಥಾನ ಧಕ್ಕಿಲ್ಲ. ಅಷ್ಟೇ ಯಾಕೆ ತಂಡದಲ್ಲೂ ಸ್ಥಿರವಾಗಿ ಸ್ಥಾನ ಕಾಯ್ದುಕೊಳ್ಳುವುದಕ್ಕೂ ರಹಾನೆಯಿಂದ ಸಾಧ್ಯವಾಗಿರಲಿಲ್ಲ.

ಆದರೆ ಕಳೆದ ಒಂದು ವರ್ಷಗಳಿಂದಲೂ ರಹಾನೆ ಅದ್ಬುತ ಫಾರ್ಮ್‌ನಲ್ಲಿದ್ದಾರೆ. ಐಪಿಎಲ್‌ (IPL 2023) ಪಂದ್ಯಾವಳಿಯಲ್ಲಿಯೂ ಅತ್ಯುತ್ತಮ ಪ್ರದರ್ಶನವನ್ನು ನೀಡಿದ್ದಾರೆ. ಇದೀಗ ವಿಶ್ವಕಪ್‌ ಬೆನ್ನಲ್ಲೇ ನಡೆಯಲಿರುವ ಇಂಗ್ಲೆಂಡ್‌ ವಿರುದ್ದದ ಸರಣಿಗೆ ಭಾರತ ತಂಡವನ್ನು ಮುನ್ನೆಡೆಸಲಿದ್ದಾರೆ.

ರೋಹಿತ್‌ ಶರ್ಮಾ ನಾಯಕತ್ವವನ್ನು ತೊರೆದು ಇಂಗ್ಲೆಂಡ್‌ ಸರಣಿಗೆ ಅಜಿಂಕ್ಯಾ ರಹಾನೆ ನಾಯಕನಾಗಿ ಆಯ್ಕೆಯಾದ್ರೆ, ರುತುರಾಜ್‌ ಗಾಯಕ್ವಾಡ್‌ ಉಪನಾಯಕನಾಗುವ ಸಾಧ್ಯತೆಯಿದೆ. ಈಗಾಗಲೇ ಏಷ್ಯನ್‌ ಗೇಮ್ಸ್‌ನಲ್ಲಿ ರುತುರಾಜ್‌ ಗಾಯಕ್ವಾಡ್‌ ಟೀಂ ಇಂಡಿಯಾದ ನಾಯಕನಾಗಿ ತಂಡವನ್ನು ಮುನ್ನೆಡೆಸುತ್ತಿದ್ದಾರೆ.

World Cup 2023 Indian Cricket team Rohit Sharma Lost Captaincy
Image Credit to Original Source

ಇದನ್ನೂ ಓದಿ : ಏಕದಿನ ವಿಶ್ವಕಪ್2023 : ಟೀಂ ಇಂಡಿಯಾಕ್ಕೆ ಅಕ್ಷರ್‌ ಪಟೇಲ್‌ ಬದಲು ರವಿಚಂದ್ರನ್‌ ಅಶ್ವಿನ್‌

ಇನ್ನೊಂದೆಡೆಯಲ್ಲಿ ಹಾರ್ದಿಕ್ ಪಾಂಡ್ಯ, ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಹನುಮ ವಿಹಾರಿ ಸೇರಿದಂತೆ ಹಲವು ಆಟಗಾರರು ಭಾರತ ತಂಡವನ್ನು ಸೇರ್ಪಡೆಯಾಗುವ ಸಾಧ್ಯತೆಯಿದೆ. ಜೊತೆಗೆ ರಣಜಿ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಆರು ಮಂದಿ ಆಟಗಾರರು ಭಾರತ ತಂಡವನ್ನು ಸೇರುವುದು ಬಹುತೇಕ ಖಚಿತ.

ಕೇವಲ ರೋಹಿತ್‌ ಶರ್ಮಾ ಮಾತ್ರವಲ್ಲದೇ ವಿರಾಟ್‌ ಕೊಹ್ಲಿ, ಕೆ.ಎಲ್.ರಾಹುಲ್‌, ಶ್ರೇಯಸ್‌ ಅಯ್ಯರ್‌, ಶುಭಮನ್‌ ಗಿಲ್‌, ಮೊಹಮ್ಮದ್‌ ಸಿರಾಜ್‌, ಆರ್‌. ಅಶ್ವಿನ್‌, ಜಸ್ಪ್ರಿತ್‌ ಬೂಮ್ರಾ ಸೇರಿದಂತೆ ಹಲವು ಆಟಗಾರರಿಗೆ ಮುಂಬರುವ ಇಂಗ್ಲೆಂಡ್‌ ಸರಣಿಗೆ ವಿಶ್ರಾಂತಿ ನೀಡುವುದು ಖಚಿತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಶುಭಮನ್‌ ಗಿಲ್‌ ಆಕರ್ಷಕ ಅರ್ಧ ಶತಕ : ಕೊನೆಗೂ ಈಡೇರಿತು ಗಿಲ್‌ ಕನಸು

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಂಭಾವ್ಯ ಭಾರತೀಯ ತಂಡ:

ಅಜಿಂಕ್ಯ ರಹಾನೆ (ನಾಯಕ), ರುತುರಾಜ್ ಗಾಯಕ್ವಾಡ್ (ಉಪನಾಯಕ), ಹನುಮ ವಿಹಾರಿ, ಹಾರ್ದಿಕ್ ಪಾಂಡ್ಯ, ಸರ್ಫರಾಜ್ ಖಾನ್, ನಿತೀಶ್ ರಾಣಾ, ಇಶಾನ್ ಕಿಶನ್, ಪ್ರಿಯಾಂಕ್ ಪಾಂಚಾಲ್, ಅಭಿಮನ್ಯು ಈಶ್ವರ್, ಕುಲದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್.

World Cup 2023 Indian Cricket team Rohit Sharma Lost Captaincy
Image Credit to Original Source

ಸದ್ಯ ಭಾರತದಲ್ಲಿ ಏಕದಿನ ವಿಶ್ವಕಪ್‌ ಪಂದ್ಯಾವಳಿ ನಡೆಯುತ್ತಿದೆ. ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದಿದೆ. ಬಿಸಿಸಿಐ ಆಯೋಜಿಸಿರುವ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿವೆ. ಒಟ್ಟು 45 ದಿನಗಳ ಕಾಲ ಪಂದ್ಯಾವಳಿ ನಡೆಲಿದೆ.

ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ಹಾಗೂ ರನ್ನರ್ಸ್‌ ಅಪ್‌ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸಿವೆ. ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ ಪಂದ್ಯಾವಳಿಯ ಮೇಲೆ ಭಾರತೀಯರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

World Cup 2023 Indian Cricket team Rohit Sharma Lost Captaincy

 

Comments are closed.