Sunil Chhetri Announces Retirement: ವಿದಾಯ ಘೋಷಿಸಿದ ಫುಟ್ಬಾಲ್ ದಿಗ್ಗಜ, ಜೂನ್ 6ರಂದು ಭಾರತ ಪರ ಕಟ್ಟ ಕಡೆಯ ಪಂದ್ಯವಾಡಲಿರುವ ಸುನಿಲ್ ಛೆಟ್ರಿ!

Sunil Chhetri Announces Retirement:  ಬೆಂಗಳೂರು: ಭಾರತದ ಫುಟ್ಬಾಲ್ ತಂಡದ ನಾಯಕ, ಭಾರತೀಯ ಫುಟ್ಬಾಲ್’ (indian football Icon) ನ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ (Sunil Chhetri ) ಅಂತರಾಷ್ಟ್ರೀಯ ವಿದಾಯ ಘೋಷಿಸಿದ್ದಾರೆ.

Sunil Chhetri Announces Retirement:  ಬೆಂಗಳೂರು: ಭಾರತದ ಫುಟ್ಬಾಲ್ ತಂಡದ ನಾಯಕ, ಭಾರತೀಯ ಫುಟ್ಬಾಲ್’ (indian football Icon) ನ ದಿಗ್ಗಜ ಆಟಗಾರ ಸುನಿಲ್ ಛೆಟ್ರಿ (Sunil Chhetri ) ಅಂತರಾಷ್ಟ್ರೀಯ ವಿದಾಯ ಘೋಷಿಸಿದ್ದಾರೆ. ಜೂನ್ 6ರಂದು ಕೋಲ್ಕತಾದಲ್ಲಿ ನಡೆಯುವ ಕುವೈಟ್ ವಿರುದ್ಧದ ಫಿಫಾ ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯದ ನಂತರ ಸುನಿಲ್ ಛೆಟ್ರಿ ನಿವೃತ್ತಿಯಾಗಲಿದ್ದಾರೆ. ಇದರೊಂದಿಗೆ 39 ವರ್ಷ ವಯಸ್ಸಿನ ಸುನಿಲ್ ಛೆಟ್ರಿ ಅವರ ಎರಡು ದಶಕಗಳ ಮಹೋನ್ನತ ಅಂತರಾಷ್ಟ್ರೀಯ ಫುಟ್ಬಾಲ್ ವೃತ್ತಿಜೀವನಕ್ಕೆ ಜೂನ್ 6ರಂದು ತೆರೆ ಬೀಳಲಿದೆ. ವೀಡಿಯೊ ಸಂದೇಶ ಮೂಲಕ ಸುನಿಲ್ ಛೆಟ್ರಿ ವಿದಾಯ ಘೋಷಿಸಿದ್ದಾರೆ.

Indian football Player Sunil Chhetri Announces Retirement
Image Credit to Original Source

ತೆಲಂಗಾಣದ ಸಿಕಂದರಾಬಾದ್’ನಲ್ಲಿ 1984, ಆಗಸ್ಟ್ 3ರಂದು ಜನಿಸಿದ್ದ ಸುನಿಲ್ ಛೆಟ್ರಿ 2005ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಭಾರತ ಪರ 150 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸುನಿಲ್ ಛೆಟ್ರಿ 94 ಗೋಲುಗಳನ್ನ ಬಾರಿಸಿದ್ದಾರೆ. ಭಾರತ ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ದಾಖಲೆ ಸುನಿಲ್ ಛೆಟ್ರಿ ಅವರ ಹೆಸರಲ್ಲಿದೆ. ಅಷ್ಟೇ ಅಲ್ಲ, ಭಾರತ ಪರ ಅತೀ ಹೆಚ್ಚು ಗೋಲುಗಳನ್ನು ಬಾರಿಸಿದ ದಾಖಲೆಯೂ ಸುನಿಲ್ ಛೆಟ್ರಿ ಹೆಸರಲ್ಲೇ ಇದೆ.

https://x.com/chetrisunil11/status/1790953336901976541

19 ವರ್ಷಗಳ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಸುನಿಲ್ ಛೆಟ್ರಿ 4 ಬಾರಿ ಹ್ಯಾಟ್ರಿಕ್ ಗೋಲುಗಳನ್ನು ಬಾರಿಸಿದ ಸಾಧನೆ ಮಾಡಿದ್ದಾರೆ. ಅಂತರಾಷ್ಟ್ರೀಯ ಫುಟ್ಬಾಲ್’ನಲ್ಲಿ ಅತೀ ಹೆಚ್ಚು ಗೋಲುಗಳನ್ನು ಬಾರಿಸಿದವರ ಸಾಲಿನಲ್ಲಿ ಸುನಿಲ್ ಛೆಟ್ರಿ 4ನೇ ಸ್ಥಾನದಲ್ಲಿದ್ದಾರೆ.
1. ಕ್ರಿಸ್ಚಿಯಾನೊ ರೊನಾಲ್ಡೊ (ಪೋರ್ಚುಗಲ್): 206 ಪಂದ್ಯ, 128 ಗೋಲು
2. ಅಲಿ ದಾಯ್ (ಇರಾನ್) : 149 ಪಂದ್ಯ, 109 ಗೋಲು
3. ಲಯನಲ್ ಮೆಸ್ಸಿ (ಅರ್ಜೆಂಟೀನಾ) : 180 ಪಂದ್ಯ, 106 ಗೋಲು
4. ಸುನಿಲ್ ಛೆಟ್ರಿ (ಭಾರತ) : 150 ಪಂದ್ಯ, 94 ಗೋಲು

ಇದನ್ನೂ ಓದಿ : T20 World Cup 2024: ಟಿ20 ವಿಶ್ವಕಪ್’ನಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ “ನಂದಿನಿ” ಪ್ರಾಯೋಜಕತ್ವ, ಜರ್ಸಿ ಬಿಡುಗಡೆಗೊಳಿಸಿದ ಸ್ಕಾಟ್ಲೆಂಡ್ ಕ್ರಿಕೆಟ್

Indian football Player Sunil Chhetri Announces Retirement
Image Credit to Original Source

ಇಂಡಿಯನ್ ಸೂಪರ್ ಲೀಗ್’ನಲ್ಲಿ 2013ರಿಂದ ಬೆಂಗಳೂರು ಎಫ್’ಸಿ ತಂಡವನ್ನು ಮುನ್ನಡೆಸುತ್ತಿರುವ ಸುನಿಲ್ ಛೆಟ್ರಿ ಒಂದೆರಡು ವರ್ಷಗಳ ಕಾಲ ISLನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ : Hardik Pandya: ರೋಹಿತ್, ಅಗರ್ಕರ್ ಬೇಡ ಎಂದರೂ ಹಾರ್ದಿಕ್ ಪಾಂಡ್ಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ? ಇಲ್ಲಿದೆ ಅಸಲಿ ಕಾರಣ !

ಸುನಿಲ್ ಛೆಟ್ರಿ ಅಂತರಾಷ್ಟ್ರೀಯ ದಾಖಲೆಗಳು:

• ಭಾರತ ಪರ ಅತೀ ಹೆಚ್ಚು ಪಂದ್ಯಗಳು (150)
• ಭಾರತ ಪರ ಅತೀ ಹೆಚ್ಚು ಗೋಲುಗಳು (94)
• ಭಾರತ ಪರ ಅತೀ ಹೆಚ್ಚು ಹ್ಯಾಟ್ರಿಕ್ಸ್ (4)
• ಎಎಫ್’ಸಿ ಚಾಂಪಿಯನ್’ಷಿಪ್’ಗಳಲ್ಲಿ ಭಾರತ ಪರ ಅತೀ ಹೆಚ್ಚುಗೋಲುಗಳು (19)
• SAFF ಚಾಂಪಿಯನ್’ಷಿಪ್’ಗಳಲ್ಲಿ ಸಾರ್ವಕಾಲಿಕ ಗರಿಷ್ಠ ಗೋಲುಗಳು (23)
• AFC ಕಪ್’ನಲ್ಲಿ ಅತೀ ಹೆಚ್ಚು ಪಂದ್ಯಗಳನ್ನಾಡಿದ ಭಾರತೀಯ (40)
• ದಾಖಲೆಯ ಏಳು ಬಾರಿ AIFF ವರ್ಷದ ಆಟಗಾರ ಪ್ರಶಸ್ಸಿ
• ಇಂಡಿಯನ್ ಸೂಪರ್ ಲೀಗ್’ನಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ಮೊದಲ ಭಾರತೀಯ
• ಸೂಪರ್ ಕಪ್’ನಲ್ಲಿ ಸಾರ್ವಕಾಲಿಕ ಗರಿಷ್ಠ ಗೋಲುಗಳು (9)
• ಬೆಂಗಳೂರು ಪರ ಅತೀ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ (276)
• ಬೆಂಗಳೂರು ಪರ ಅತೀ ಹೆಚ್ಚು ಗೋಲುಗಳನ್ನು ಬಾರಿಸಿದ ಆಟಗಾರ (122)

ಇದನ್ನೂ ಓದಿ : ಲಕ್ನೋ ಸೂಪರ್‌ ಜೈಂಟ್ಸ್‌ ತೊರೆಯಲು ಮುಂದಾದ ಕೆಎಲ್‌ ರಾಹುಲ್‌, ಮುಂದಿನ ಪಂದ್ಯಗಳಿಗೆ LSGಗೆ ಹೊಸ ನಾಯಕ

Indian football Player Sunil Chhetri Announces Retirement

Comments are closed.