Hardik Pandya: ರೋಹಿತ್, ಅಗರ್ಕರ್ ಬೇಡ ಎಂದರೂ ಹಾರ್ದಿಕ್ ಪಾಂಡ್ಯ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ ? ಇಲ್ಲಿದೆ ಅಸಲಿ ಕಾರಣ !

ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC Men’s T20 World Cup 2024) ಆಡಲಿರುವ ಭಾರತ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ನನ್ನು ಆಯ್ಕೆ ಮಾಡಿದ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್’ನಲ್ಲಿ (ICC Men’s T20 World Cup 2024) ಆಡಲಿರುವ ಭಾರತ ತಂಡಕ್ಕೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ನನ್ನು ಆಯ್ಕೆ ಮಾಡಿದ ವಿಚಾರ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್ ಅಗರ್ಕರ್ (Ajit Agarkar) ಹೀಗೆ ಇಬ್ಬರಿಗೂ ಹಾರ್ದಿಕ್ ಪಾಂಡ್ಯನನ್ನು ಆಯ್ಕೆ ಮಾಡಲು ಇಷ್ಟವಿರಲಿಲ್ಲ.

Hardik Pandya How Pandya was selected for the World Cup team despite Rohit and Agarkar Here is the real reason!
Image Credit to Original Source

ಆದರೆ “ಹೊರಗಿನ ಒತ್ತಡ”ದಿಂದ ಪಾಂಡ್ಯನನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಸೃಷ್ಠಿಯಾದ ಕಾರಣ, ಪಾಂಡ್ಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ. ಹಾಗಾದರೆ ಆ ಹೊರಗಿನ ಒತ್ತಡ ಯಾವುದು ? ಅನುಮಾನವೇ ಬೇಡ. ಅದು ಬಿಸಿಸಿಐ ಕಾರ್ಯದರ್ಶಿ ಜೈ ಶಾ (BCCI Secretary Jay Shah). ಗುಜರಾತ್’ನವರಾದ ಜೈ ಶಾ, ಮತ್ತೊಬ್ಬ ಗುಜರಾತಿ ಹಾರ್ದಿಕ್ ಪಾಂಡ್ಯ ಬೆನ್ನಿಗೆ ನಿಂತದ್ದರಿಂದ, ಪಾಂಡ್ಯ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾನೆ.

ಐಪಿಎಲ್’ನಲ್ಲಿ ದಯನೀಯ ವೈಫಲ್ಯ ಎದುರಿಸಿರುವ ಪಾಂಡ್ಯ 13 ಪಂದ್ಯಗಳಿಂದ 200 ರನ್ ಮತ್ತು 11 ವಿಕೆಟ್ ಕಬಳಿಸಿದ್ದಾನೆ. ಬೌಲಿಂಗ್’ನಲ್ಲಿ ಕೇವಲ 34 ಓವರ್ ಮಾತ್ರ ಎಸೆದಿರುವ ಪಾಂಡ್ಯ, ನಾಯಕತ್ವದಲ್ಲೂ ವಿಫಲವಾಗಿದ್ದಾನೆ. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 13 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳಲ್ಲಿ ಗೆದ್ದು 9ರಲ್ಲಿ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ : 

ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್’ನಲ್ಲಿ ಜೂನ್ 5ರಂದು ತನ್ನ ಅಭಿಯಾನ ಆರಂಭಿಸಲಿದ್ದು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಎದುರಿಸಲಿದೆ. ಜೂನ್ 9ರಂದು ನ್ಯೂಯಾರ್ಕ್’ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನ, ಕೆನಡಾ, ಅಮೆರಿಕ ಮತ್ತು ಐರ್ಲೆಂಡ್ ತಂಡಗಳ ಜೊತೆ ಗ್ರೂಪ್ ’ಎ’ನಲ್ಲಿ ಸ್ಥಾನ ಪಡೆದಿದೆ.

Hardik Pandya How Pandya was selected for the World Cup team despite Rohit and Agarkar Here is the real reason!
Image Credit to Original Source

ಇದನ್ನೂ ಓದಿ : Siraj Visits Vyshak House: ವೈಶಾಖ್ ಮನೆಗೆ ಬಂದ ಮೊಹಮ್ಮದ್ ಸಿರಾಜ್.. ಗೆಳೆಯನ ಕರೆಗೆ ಓಗೊಟ್ಟ ಆರ್’ಸಿಬಿ ವೇಗಿ!

ಐಸಿಸಿ ಟಿ20 ವಿಶ್ವಕಪ್-2024 ಟೂರ್ನಿಗೆ ಆಯ್ಕೆಯಾಗಿರುವ ಭಾರತ ತಂಡ:

1. ರೋಹಿತ್ ಶರ್ಮಾ (ನಾಯಕ)
2. ಯಶಸ್ವಿ ಜೈಸ್ವಾಲ್
3. ವಿರಾಟ್ ಕೊಹ್ಲಿ
4. ಸೂರ್ಯಕುಮಾರ್ ಯಾದವ್
5. ರಿಷಭ್ ಪಂತ್ (ವಿಕೆಟ್ ಕೀಪರ್)
6. ಹಾರ್ದಿಕ್ ಪಾಂಡ್ಯ
7. ರವೀಂದ್ರ ಜಡೇಜ
8. ಕುಲ್ದೀಪ್ ಯಾದವ್
9. ಜಸ್ಪ್ರೀತ್ ಬುಮ್ರಾ
10. ಮೊಹಮ್ಮದ್ ಸಿರಾಜ್
11. ಅರ್ಷದೀಪ್ ಸಿಂಗ್
12. ಅಕ್ಷರ್ ಪಟೇಲ್
13. ಯುಜ್ವೇಂದ್ರ ಚಹಲ್
14. ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)
15. ಶಿವಂ ದುಬೆ

ಇದನ್ನೂ ಓದಿ : T20 World Cup 2024: ಟಿ20 ವಿಶ್ವಕಪ್’ನಲ್ಲಿ ಸ್ಕಾಟ್ಲೆಂಡ್ ತಂಡಕ್ಕೆ “ನಂದಿನಿ” ಪ್ರಾಯೋಜಕತ್ವ, ಜರ್ಸಿ ಬಿಡುಗಡೆಗೊಳಿಸಿದ ಸ್ಕಾಟ್ಲೆಂಡ್ ಕ್ರಿಕೆಟ್

ಐಸಿಸಿ ಟಿ20 ವಿಶ್ವಕಪ್ 2024: ಭಾರತದ ಲೀಗ್ ಪಂದ್ಯಗಳ ವೇಳಾಪಟ್ಟಿ (ICC Men’s T20 World Cup 2024)

ಜೂನ್ 05: ಭಾರತ Vs ಐರ್ಲೆಂಡ್ (ನ್ಯೂಯಾರ್ಕ್, ರಾತ್ರಿ 7.30ಕ್ಕೆ)
ಜೂನ್ 09: ಭಾರತ Vs ಪಾಕಿಸ್ತಾನ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 12: ಭಾರತ Vs ಅಮೆರಿಕ (ನ್ಯೂಯಾರ್ಕ್, ರಾತ್ರಿ 8ಕ್ಕೆ)
ಜೂನ್ 15: ಭಾರತ Vs ಕೆನಡಾ (ಲಾಡರ್’ಹಿಲ್, ರಾತ್ರಿ 8ಕ್ಕೆ)

ಇದನ್ನೂ ಓದಿ :  Dravid To Resign As India’s Coach: ಭಾರತ ತಂಡದ ಕೋಚ್ ಸ್ಥಾನಕ್ಕೆ ಗುಡ್ ಬೈ ಹೇಳಲಿದ್ದಾರೆ ರಾಹುಲ್ ದ್ರಾವಿಡ್, ಮುಹೂರ್ತ ಫಿಕ್ಸ್!

Hardik Pandya How Pandya was selected for the t20 World Cup team despite Rohit and Ajit Agarkar Here is the real reason!

Comments are closed.