ಅಹಮದಾಬಾದ್ : ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ( ICC ODI Cricket World Cup 2023) ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ (New Zealand vs England) ವಿರುದ್ದ ಸೇಡು ತೀರಿಸಿಕೊಂಡಿದೆ. ಅದ್ರಲ್ಲೂ ಇದೀಗ ನ್ಯೂಜಿಲೆಂಡ್ ಗೆಲುವನ್ನು ಕನ್ನಡಿಗರು ಸಂಭ್ರಮಿಸುತ್ತಿದ್ದಾರೆ. ಇದಕ್ಕೆ ಕಾರಣವಾಗಿರೋದು ನ್ಯೂಜಿಲೆಂಡ್ ಪರ ಬೆಂಗಳೂರಿನ ರಾಚಿನ್ ರವೀಂದ್ರ (Rachin Ravindra Century) ಶತಕ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಇಂಗ್ಲೆಂಡ್ ತಂಡ ಸವಾಲಿನ ಮೊತ್ತವನ್ನು ನೀಡಿತ್ತು. ಆರಂಭದಲ್ಲಿಯೇ ನ್ಯೂಜಿಲೆಂಡ್ ಆಘಾತವನ್ನು ಅನುಭವಿಸಿತ್ತು. ನಂತರದಲ್ಲಿ ಡೆವೋನ್ ಕಾನ್ವೆಗೆ ಸಾಥ್ ಕೊಟ್ಟಿದ್ದು, ರಾಚಿನ್ ರವೀಂದ್ರ.

ಚೊಚ್ಚಲ ವಿಶ್ವಕಪ್ ಪಂದ್ಯದಲ್ಲಿಯೇ ರಾಚಿನ್ ರವೀಂದ್ರ ಭರ್ಜರಿ ಶತಕ ಬಾರಿಸಿದ್ದಾರೆ. ಒಂದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ರಾಚಿನ್ ರವೀಂದ್ರ ಕೇವಲ 96 ಎಸೆತಗಳಲ್ಲಿ ಭರ್ಜರಿ 123 ಸಿಡಿಸಿದ್ದಾರೆ. ಇದರಲ್ಲಿ 5 ಸಿಕ್ಸರ್ ಹಾಗೂ 11 ಬೌಂಡರಿ ಒಳಗೊಂಡಿದೆ. ಇನ್ನೊಂದೆಡೆಯಲ್ಲಿ ಡೆವೋನ್ ಕಾನ್ವೆ 121 ಎಸೆತಗಳನ್ನು ಎದುರಿಸಿ ಬರೋಬ್ಬರಿ 152 ರನ್ ಸಿಡಿಸಿದ್ದಾರೆ. 3 ಸಿಕ್ಸರ್ ಹಾಗೂ 19 ಬೌಂಡರಿ ಒಳಗೊಂಡಿದೆ.
ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡ ನ್ಯೂಜಿಲೆಂಡ್ ತಂಡವನ್ನು ಸೋಲಿನ ಚೊಚ್ಚಲ ಬಾರಿಗೆ ವಿಶ್ವಕಪ್ ಜಯಿಸಿತ್ತು. ಕಳೆದ ಬಾರಿಯ ಸೋಲಿಗೆ ಇದೀಗ ನ್ಯೂಜಿಲೆಂಡ್ ತಂಡ ಸೇಡು ತೀರಿಸಿಕೊಂಡಿದೆ. ಆದರೆ ನ್ಯೂಜಿಲೆಂಡ್ ಗೆಲುವನ್ನು ಬೆಂಗಳೂರಿಗರು ಹೆಚ್ಚು ಸಂಭ್ರಮಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರೋದು ನ್ಯೂಜಿಲೆಂಡ್ ಆಟಗಾರ ರಾಚಿನ್ ರವೀಂದ್ರ.
ಇದನ್ನೂ ಓದಿ : ವಿಶ್ವಕಪ್ 2023 ತಂಡದಲ್ಲಿ ಸಿಗದ ಸ್ಥಾನ : ನಿವೃತ್ತಿ ಘೋಷಿಸಲು ಮುಂದಾದ ಭಾರತದ ಖ್ಯಾತ ಆಟಗಾರರು
ರಾಚಿನ್ ರವೀಂದ್ರ ಬೆಂಗಳೂರು ಮೂಲದ ರವಿಕೃಷ್ಣಮೂರ್ತಿ ಹಾಗೂ ದೀಪಾ ಕೃಷ್ಣಮೂರ್ತಿ ಅವರ ಮಗ. 2021 ರಲ್ಲಿಯೇ ಭಾರತದಲ್ಲಿಯೇ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು. ಟೆಸ್ಟ್, ಏಕದಿನ ಹಾಗೂ ಟಿ20 ತಂಡದಲ್ಲಿಯೂ ಸ್ಥಾನ ಪಡೆದಿರುವ ರಾಚಿನ್ ರವೀಂದ್ರ ಇದೀಗ ಭಾರತದಲ್ಲಿಯೇ ಚೊಚ್ಚಲ ಶತಕ ಬಾರಿಸಿದ್ದಾರೆ.

ಸದ್ಯ ರಾಚಿನ್ ರವೀಂದ್ರ ಅವರ ತಂದೆ ತಾಯಿ ವೆಲ್ಲಿಂಗ್ಟನ್‌ನಲ್ಲಿ ನೆಲೆಸಿದ್ದಾರೆ. ರಾಚಿನ್ ರವೀಂದ್ರ ಅವರ ತಂದೆ ರವಿಕಷ್ಣಮೂರ್ತಿ ಅವರು ರಾಹುಲ್ ದ್ರಾವಿಡ್ (Rahul Dravid) ಹಾಗೂ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಅಭಿಮಾನಿ. ಇದೇ ಕಾರಣಕ್ಕೆ ತಮ್ಮ ಮಗನಿಗೆ ರಾಹುಲ್ ದ್ರಾವಿಡ್ ಅವರ ಮೊದಲ ಅಕ್ಷರ RA ಹಾಗೂ ಸಚಿನ್ ಹೆಸರಿನ ಕೊನೆಯ ಎರಡು ಅಕ್ಷರವನ್ನು Chin ಸೇರಿಸಿಕೊಂಡು ರಾಚಿನ್ ರವೀಂದ್ರ ಎಂದು ಹೆಸರಿಟ್ಟಿದ್ದಾರೆ.
Rachin Ravindra talking the story about his name.
Ra from "Ra"hul Dravid.
chin from Sa"chin" Tendulkar pic.twitter.com/weHi5GKkg9
— Johns. (@CricCrazyJohns) October 5, 2023
ನ್ಯೂಜಿಲೆಂಡ್ ತಂಡದ ಯುವ ಭರವಸೆಯ ಆಟಗಾರ ಎನಿಸಿಕೊಂಡಿರುವ 23 ವರ್ಷದ ರಾಚಿನ್ ರವೀಂದ್ರ ಆಟಕ್ಕೆ ಭಾರತೀಯರು ಫಿದಾ ಆಗಿದ್ದಾರೆ. ರಾಚಿನ್ ರವೀಂದ್ರ ಕೇವಲ ಬ್ಯಾಟ್ಸಮನ್ ಮಾತ್ರವಲ್ಲ, ಆಲ್‌ರೌಂಡರ್ ಕೂಡ. ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ರಾಚಿನ್ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.
ಇದನ್ನೂ ಓದಿ : ವಿರುಷ್ಕಾ ಅಭಿಮಾನಿಗಳಿಗೆ ಗುಡ್‌ನ್ಯೂಸ್ : 2 ನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ
ಇಂಗ್ಲೆಂಡ್ ವಿರುದ್ದದ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿದೆ. ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ನ್ಯೂಜಿಲೆಂಡ್ ಕೂಡ ಒಂದಾಗಿದೆ. ಈ ನಿಟ್ಟಿನಲ್ಲಿ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಭರ್ಜರಿ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿಯೂ ಉತ್ತಮ ರನ್ ಧಾರಣೆಯನ್ನು ಕಾಯ್ದುಕೊಂಡಿದೆ.
ಇಂಗ್ಲೆಂಡ್ ತಂಡ :
ಜೋಸ್ ಬಟ್ಲರ್ (ನಾಯಕ ), ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್, ಹ್ಯಾರಿ ಬ್ರೂಕ್, ಗಸ್ ಅಟ್ಕಿನ್ಸನ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ
ನ್ಯೂಜಿಲ್ಯಾಂಡ್ :
ಟಾಮ್ ಲ್ಯಾಥಮ್ (ನಾಯಕ ), ಡೆವೊನ್ ಕಾನ್ವೇ, ವಿಲ್ ಯಂಗ್, ಡೇರಿಲ್ ಮಿಚೆಲ್, ಮಾರ್ಕ್ ಚಾಪ್ಮನ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಇಶ್ ಸೋಧಿ, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್, ಲಾಕಿ ಫರ್ಗುಸನ್, ಟಿಮ್ ಸೌಥಿ, ಮಿಚೆಲ್ ಸ್ಯಾಂಟ್ನರ್, ಜೇಮ್ಸ್ ನೀಶಮ್
ICC Cricket World cup 2023 Rachin Ravindra century New zealand vs England Bangalore boy rachin