Priya Prakash Varrier : ಕಣ್ಣು ಹೊಡೆಯುವ ಮೂಲಕವೇ ಪಡ್ಡೆ ಹೈಕಳ ಎದೆ ಬಡಿತ ಹೆಚ್ಚಿಸಿ ರಾತ್ರಿ ಬೆಳಗಾಗುವುದರಲ್ಲೇ ಶೈನಿಂಗ್ ಸ್ಟಾರಾಗಿದ್ದ ಕಣ್ಸನ್ನೆಯ ಬೆಡಗಿ ಪ್ರಿಯಾ ವಾರಿಯರ್ ಸಿನಿಮಾ ರಂಗಕ್ಕೆ ಬಂದಷ್ಟೇ ವೇಗದಲ್ಲಿ ಹಿಂದುಳಿದು ಹೋದರು. ಆದರೆ ಸಿನಿಮಾದಲ್ಲಿ ಸಿಗದಿರೋ ಜನಪ್ರಿಯತೆ ಪ್ರಿಯಾಗೆ ಸೋಷಿಯಲ್ ಮೀಡಿಯಾದಲ್ಲಿದ್ದು, ಪ್ರಿಯಾ ಮತ್ತೇರಿಸುವ ಪೋಟೋ ನೋಡಿದ ಅಭಿಮಾನಿಗಳು ಮನಸೋತಿದ್ದಾರೆ.
ಒರು ಅಡಾರ್ ಸಿನಿಮಾದಲ್ಲಿ ಸ್ಕೂಲ್ ಯೂನಿಫಾರ್ಮ್ ನಲ್ಲೇ ಕಣ್ಣು ಹೊಡೆಯುವ ಮೂಲಕ ಹದಿಹರೆಯದ ಮನಸ್ಸುಗಳಿಗೆ ಕಚಗುಳಿ ಇಟ್ಟ ಬೆಡಗಿ ಪ್ರಿಯಾ ವಾರಿಯರ್.ಕಣ್ಣು ಹೊಡೆಯುವಾಗ ಪುಟ್ಟ ಹುಡುಗಿಯಂತಿದ್ದ ಪ್ರಿಯಾ ವಾರಿಯರ್ (Priya Prakash Varrier) , ಈಗ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದ್ದಾರೆ. ಮಾತ್ರವಲ್ಲ ಗ್ಲ್ಯಾಮರಸ್ ಪೋಟೋಗಳ ಮೂಲಕ ಅಭಿಮಾನಿಗಳಿಗೆ ಕಿಕ್ಕೇರಿಸುತ್ತಿದ್ದಾರೆ.
ಮಲೆಯಾಳಿ ಸಿನಿಮಾಗಳಲ್ಲಿ ನಟಿಸುತ್ತಿರುವ ಪ್ರಿಯಾ ವಾರಿಯರ್ ಅದರೊಂದಿಗೆ ತಮ್ಮ ಮೂಲ ಹವ್ಯಾಸ ಮಾಡೆಲಿಂಗ್ ನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಮೊನ್ನೆ ಮೊನ್ನೆ ಪ್ರಿಯಾ ಒಂದಿಷ್ಟು ಹಾಟ್ ಹಾಟ್ ಪೋಟೋಗಳಿಗೆ ಪೋಸ್ ನೀಡಿದ್ದು, ಪೋಸ್ಟ್ ಸಖತ್ ವೈರಲ್ ಆಗಿದೆ.
ಲ್ಯಾವೆಂಡರ್ ಕಲರ್ ಫುಲ್ ಶೋಲ್ಡರ್ ಡ್ರೆಸ್ ನಲ್ಲಿ ಪ್ರಿಯಾ ವಾರಿಯರ್ ಪೋಸ್ ನೀಡಿದ್ದು, ಹಾಟ್ ಹಾಟ್ ಅವತಾರದಲ್ಲಿ ಕಣ್ಸನ್ನೆ ಬೆಡಗಿ ಕಂಡ ಹುಡುಗರು ಫಿದಾ ಆಗಿದ್ದಾರೆ. ಕನ್ನಡದ ವಿಷ್ಣುಪ್ರಿಯ ಸಿನಿಮಾ ಸೇರಿದಂತೆ ತಮಿಳು ಹಾಗೂ ತೆಲುಗು ಸಿನಿಮಾದಲ್ಲೂ ನಟಿಸಿರುವ ಪ್ರಿಯಾ ಬಹುಭಾಷಾ ನಟಿಯಾಗಿ ಭಡ್ತಿ ಪಡೆದಿದ್ದಾರೆ. ಹಿಂದಿಯಲ್ಲೂ ನಟಿಸಿರುವ ಪ್ರಿಯಾ ವಾರಿಯರ್ 7 ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದೆ. ಒಟ್ಟಿನಲ್ಲಿ ಒಂದೇ ಒಂದು ಸಿನಿಮಾದ ಕಣ್ಸನ್ನೆ ದೃಶ್ಯದಿಂದಲೇ ಪಡ್ಡೆಹೈಕಳ ಫೆವರಿಟ್ ಆಗಿರೋ ಪ್ರಿಯಾ ಈಗ ಮೈಮಾಟದ ಸೌಂದರ್ಯ ಅನಾವರಣಗೊಳಿಸೋ ಪೋಟೋಗಳ ಮೂಲಕ ಮತ್ತಷ್ಟು ಅಭಿಮಾನಿಗಳ ಮನಗೆದ್ದಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಪ್ರಿಯಾ ವಾರಿಯರ್ ಪೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿವೆ.
ಇದನ್ನೂ ಓದಿ : Oscars Awards 2023 : ಆಸ್ಕರ್ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ನಿರೂಪಕರು ಯಾರಾರು ಇದ್ದಾರೆ ಗೊತ್ತಾ ?
ಇದನ್ನೂ ಓದಿ : ನಟ ಯುವರಾಜ್ಕುಮಾರ್ ಚೊಚ್ಚಲ ಸಿನಿಮಾದ ಟೈಟಲ್ ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್
ಇದನ್ನೂ ಓದಿ : ನಟ ಕಿಚ್ಚ ಸುದೀಪ್ ಮುಂದಿನ ಸಿನಿಮಾ ಯಾವುದು ? ಇಲ್ಲಿದೆ Exclusive Details