ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Divine Star Rishabh Shetty) ಮಗಳು ರಾದ್ಯಾಳಿಗೆ (Rishabh Shetty’s daughter) ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮ. ಕಾಂತಾರ ಸಿನಿಮಾ ಸೂಪರ್ ಹಿಟ್ ಬಳಿಕ ನಟ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಹದಿನಾರು ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ದೇಶದಾದ್ಯಂತ ಸಖತ್ ಸದ್ದು ಮಾಡಿದೆ. ಹಾಗೆಯೇ ಹಾಗೂ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್‌ನ್ನೇ ಕೊಳ್ಳೆ ಹೊಡೆದಿದೆ. ಇದೀಗ ನಟ ರಿಷಬ್ ಶೆಟ್ಟಿ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಬಹಳ ವಿಶೇಷವಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಖುಷಿಯನ್ನು ಹಂಚಿಕೊಂಡಿದ್ದಾರೆ.
ನಟ ರಿಷಬ್ ತಮ್ಮ ಪೋಸ್ಟ್‌ನಲ್ಲಿ, “ನಮ್ಮ ಪುಟ್ಟ ರಾಜಕುಮಾರಿ ಬೆಳೆಯುವುದನ್ನು ನೋಡುವುದು ನಮ್ಮ ಜೀವನದ ಅತ್ಯುತ್ತಮ ದೃಶ್ಯವಾಗಿದೆ! ಜನ್ಮದಿನದ ಶುಭಾಶಯಗಳು, ನಮ್ಮ ಹೆಣ್ಣು ಮಗು ರಾಧ್ಯಾ ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾಧ್ಯಾಳ ಮೇಲೆ ಸದಾ ಇರಲಿ” ಬರೆದು ಹಂಚಿಕೊಂಡಿದ್ದಾರೆ. ಪುಟ್ಟ ರಾದ್ಯಾ ಕ್ರೀಮ್, ಬಿಳಿ ಹಾಗೂ ಕಪ್ಪು ಬಣ್ಣದ ಬಟ್ಟೆಯಲ್ಲಿ ರಾಜಕುಮಾರಿಯಂತೆ ಕಾಣಿಸುತ್ತಿದ್ದು, ತುಂಬಾ ಮುದ್ದಾಗಿ ನೀರಿನ ಟಬ್‌ನಲ್ಲಿ ಆಟವಾಡುತ್ತಿದ್ದಳು. ಅವಳೊಂದಿಗೆ ರಿಷಬ್ ಶೆಟ್ಟಿ ಮಗ ಕೂಡ ಬಿಳಿ ಬಣ್ಣದ ಉಡುಗೆಯಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಿದ್ದಾನೆ.
Watching our little princess grow has been the best sight of our lives!
— Rishab Shetty (@shetty_rishab) March 4, 2023
Happy birthday, our baby girl Raadya ♥️
ನಿಮ್ಮೆಲ್ಲರ ಪ್ರೀತಿ, ಆಶೀರ್ವಾದ ರಾದ್ಯಾಳ ಮೇಲೆ ಸದಾ ಇರಲಿ. pic.twitter.com/7j9o8o4AE1
ನಟ ರಿಷಬ್ ಶೆಟ್ಟಿಯ ಈ ಫೋಸ್ಟ್‌ಗೆ ಅಭಿಮಾನಿಗಳು, “ದೇವರು ನಿಮ್ಮ ಕುಟುಂಬವನ್ನು ಆಶೀರ್ವದಿಸಲಿ! ದಯವಿಟ್ಟು ನಮ್ಮ ಸಂಸ್ಕೃತಿಗೆ ಸಂಪರ್ಕವಿರುವ ಅರ್ಥಪೂರ್ಣ ಸಿನಿಮಾಗಳನ್ನು ಮಾಡುವುದನ್ನು ಮುಂದುವರಿಸಿ. ನಿಮಗೆ ಯಶಸ್ಸು ಮತ್ತು ನಿಮ್ಮ ಪ್ರೀತಿಯ ಮಗಳಿಗೆ ಜನ್ಮದಿನದ ಶುಭಾಶಯಗಳು” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು, “ರಾಜಕುಮಾರಿಯ ಹೆಸರಿನ ಅರ್ಥವೇನು? ರಾದ್ಯಾ ಅವರಿಗೆ ಶುಭ ಹಾರೈಕೆಗಳು.” ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಇದನ್ನೂ ಓದಿ : “ಕಬ್ಜ” ಸಿನಿಮಾ ಟ್ರೈಲರ್ : ಡಬ್ಬಲ್ ಶೇಡ್‌ನಲ್ಲಿ ಕಾಣಿಸಿಕೊಂಡ ರಿಯಲ್ ಸ್ಟಾರ್
ಇದನ್ನೂ ಓದಿ : ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋದ್ಯಾರು ? ಕುತೂಹಲ ಹುಟ್ಟಿಸಿದ ಚಿತ್ರತಂಡ
ಇದನ್ನೂ ಓದಿ : ಸ್ಯಾಂಡಲ್‌ವುಡ್ ಅದ್ದೂರಿ ಎಂಟ್ರಿ ಕೊಟ್ಟ ಯುವರಾಜ್ ಕುಮಾರ್ : ದಾಖಲೆ ಸೃಷ್ಟಿಸಿದ “ಯುವ” ಟೈಟಲ್ ಟೀಸರ್
ಸದ್ಯ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಕಥೆಯನ್ನು ರಚಿಸುವಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಷ್ಟೇ ಅಲ್ಲದೇ “ಕಾಂತಾರ 2” “ಕಾಂತಾರ” ಸಿನಿಮಾದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.
Divine Star Rishabh Shetty : Actor Rishabh Shetty’s daughter Raadya celebrates her first birthday