ಭಾನುವಾರ, ಮೇ 11, 2025
Homekarnatakaವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ : ಬಿ.ಎಸ್.ಯಡಿಯೂರಪ್ಪ

ವರುಣಾ ಕ್ಷೇತ್ರದಿಂದ ವಿಜಯೇಂದ್ರ ಸ್ಪರ್ಧೆ ಇಲ್ಲ : ಬಿ.ಎಸ್.ಯಡಿಯೂರಪ್ಪ

- Advertisement -

ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ಈ ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ. ಸಿದ್ದರಾಮಯ್ಯ ವಿರುದ್ದವಾಗಿ ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ (Siddaramaiah – B.Y.Vijayendra) ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಆದರೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧೆಯ ಕುರಿತು ಎದ್ದಿರುವ ಎಲ್ಲಾ ಗೊಂದಲಗಳಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಖುದ್ದು ತೆರೆ ಎಳೆದಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿ.ವೈ.ವಿಜಯೇಂದ್ರ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ. ಬದಲಾಗಿ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂದಿದ್ದಾರೆ. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ನಿಲ್ಲಬೇಕು ಅಂತಾ ಬಹಳ ಒತ್ತಡ ಇದೆ. ವರುಣಾದಲ್ಲಿ ಒತ್ತಡ ಇದ್ದರೂ ಕೂಡ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಬೇಕು ಎಂದು ನಾನು ಬಹಳ ಹಿಂದೆಯೇ ಹೇಳಿದ್ದೇನೆ. ವರುಣಾದಲ್ಲಿ ವಿಜಯೇಂದ್ರ ಯಾವುದೇ ಕಾರಣಕ್ಕೂ ಸ್ಪರ್ಧೆ ಮಾಡುವುದಿಲ್ಲ. ಶಿಕಾರಿಪುರದಲ್ಲೇ ನಿಲ್ಲಬೇಕು ಎಂದು ನಾನು ಹೇಳಿದ್ದೇನೆ ಎಂದಿದ್ದಾರೆ ಯಡಿಯೂರಪ್ಪ.

ಇದನ್ನೂ ಓದಿ : ಕರ್ನಾಟಕ ಚುನಾವಣೆ 2023 : ಎಎಪಿ 60 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ

ಇದನ್ನೂ ಓದಿ : Sandalwood is producer K Manju: ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟ ಸ್ಯಾಂಡಲ್‌ ವುಡ್‌ ನಿರ್ಮಾಪಕ

ಬಿಜೆಪಿ ಹೈಕಮಾಂಡ್‌ ನಾಯಕರಿಗೂ ಶಿಕಾರಿಪುರದಲ್ಲೇ ನಿಲ್ಲಬೇಕು ಎಂದು ತಿಳಿಸಿದ್ದೇನೆ. ಮುಂದಿನ ನಾಲ್ಕೈದು ದಿನಗಳಲ್ಲಿ ಬಿಜೆಪಿ ಟಿಕೆಟ್‌ ಪ್ರಕಟ ವಾಗಲಿದೆ. ವಿಜಯೇಂದ್ರಗೆ ಕೂಡ ಶಿಕಾರಿಪುರದಿಂದಲೇ ಸ್ಪರ್ಧೆ ಮಾಡುವಂತೆ ಸೂಚನೆಯನ್ನು ನೀಡಿದ್ದೇನೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

Karnataka Election ticket Fight : ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ : ನಿರ್ಧಾರಕ್ಕೆ ಬಿಜೆಪಿಯಲ್ಲೇ ಶುರುವಾಯ್ತು ವಿರೋಧ

ಬೆಂಗಳೂರು : (Karnataka Election ticket Fight) ರಾಜ್ಯದಲ್ಲಿ ಚುನಾವಣೆಯಷ್ಟೇ ಚರ್ಚೆಗೊಳಗಾಗ್ತಿರೋ ಇನ್ನೊಂದು ವಿಚಾರ ಸಿದ್ಧರಾಮಯ್ಯನವರ ಚುನಾವಣಾ ಕ್ಷೇತ್ರ. ಈ ಮಧ್ಯೆ ಸಿದ್ಧು ವರುಣಾದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾದ ಬೆನ್ನಲ್ಲೇ ಬಿಜೆಪಿ ಸಿದ್ಧರಾಮಯ್ಯ ಸೋಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಈಗ ಬಿಜೆಪಿ ಪ್ಲ್ಯಾನ್ ಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದ್ದು, ಸಿದ್ಧು ವಿರುದ್ಧ ಬಿಜೆಪಿ ರಣತಂತ್ರ ಆರಂಭದಲ್ಲೇ ವಿಫಲವಾಗಿದೆ. ಸಿದ್ಧರಾಮಯ್ಯನವರು ಅಳೆದು ಸುರಿದು ತೂಗಿ ವರುಣಾದಿಂದಲೇ ತಮ್ಮ ಕೊನೆಯ ಚುನಾವಣೆ ಸ್ಪರ್ಧೆಯನ್ನು ಘೋಷಿಸಿದರು. ಈ ಘೋಷಣೆಯ ಬೆನ್ನಲ್ಲೇ ಬಿಜೆಪಿ ಸಿದ್ಧು ಸೋಲಿಸಲು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸೋದಾಗಿ ಘೋಷಿಸಿತ್ತು.

ಮೂಲಗಳ ಮಾಹಿತಿ ಪ್ರಕಾರ ಸಿದ್ಧರಾಮಯ್ಯನವರ ವಿರುದ್ಧ ಮಾಜಿಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೆಂದ್ರ ಅವರನ್ನು ಕಣಕ್ಕಿಳಿಸಲು ಪ್ಲ್ಯಾನ್ ಸಿದ್ಧವಾಗಿತ್ತು. ಆದರೆ ಈಗ ಬಿಜೆಪಿಯ ಈ ಪ್ಲ್ಯಾನ್ ಗೆ ಬಿಜೆಪಿಯ ಇನ್ನೊಂದು ಬಣವೇ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಕೇವಲ ಆಕ್ಷೇಪ ಮಾತ್ರವಲ್ಲ ಬಿಜೆಪಿಯ ಈ ಪ್ಲ್ಯಾನ್ ನಿಂದ ಬಿಜೆಪಿಗೆ ಆಗಬಹುದಾದ ನಷ್ಟದ ಬಗ್ಗೆಯೂ ವಿವರಿಸಿದೆ.

ಸಿದ್ದರಾಮಯ್ಯ ಸೋಲಿಸುವ ತಂತ್ರದಿಂದ ಮತ ದೂರ ಆಗುವ ಆತಂಕವಿದೆ. ಅಹಿಂದ ಮತಗಳು ದೂರವಾಗೋದರಿಂದ ಬಿಜೆಪಿಗೆ ಹಿನ್ನಡೆ ಆತಂಕ ಎದುರಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನ ಶಕ್ತಿ ಜಾಸ್ತಿ ಇದೆ.ಸಿದ್ದರಾಮಯ್ಯ ತಮ್ಮದೇ ಆದ ಜನಬೆಂಬಲ ಇಟ್ಟಿಕೊಂಡಿದ್ಸಾರೆ.ಅಪಾರ ಅಭಿಮಾನಿಗಳು, ಬೆಂಬಲಿಗರ ಬಳಗ ಹೊಂದಿದ್ದಾರೆ. ಯಡಿಯೂರಪ್ಪ ಹೇಗೋ ಹಾಗೇ ಮಾಜಿ ಸಿಎಂ ಕೂಡ ಕರ್ನಾಟಕದಲ್ಲಿ ಒಬ್ಬ ಮಹಾನ್ ನಾಯಕ.ಇಂತಹ ನಾಯಕನನ್ನು ಬೇಕು ಬೇಕು ಅಂತಾ ಸೋಲಿಸಲು ಹೋದ್ರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎಂದು ಬಿಜೆಪಿಯ ಕೆಲ ಹಿರಿಯ ನಾಯಕರು ರಾಜ್ಯ ನಾಯಕರಿಗೆ ಹಾಗೂ ಹೈಕಮಾಂಡ್ ಗೆ ಮನವರಿಕೆ ಮಾಡಿಸಿದ್ದಾರಂತೆ. ಈ ಹಿನ್ನೆಲೆ ಇದರ‌ ಬಗ್ಗೆ ಎಚ್ಚರದ ತೀರ್ಮಾನಕ್ಕೆ ಮುಂದಾದ ರಾಜ್ಯ ನಾಯಕರು ಸದ್ಯ ಸಿದ್ಧರಾಮಯ್ಯನವರ ವಿರುದ್ಧ ವಿಜಯೇಂದ್ರ ಸ್ಪರ್ಧೆಯ ವಿಚಾರವನ್ನು ಕೈಬಿಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ‌ನಂತ ಅಭ್ಯರ್ಥಿ ಹಾಕಿದ್ರೆ, ಪಕ್ಷಕ್ಕೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಮುಂದಾಗಿರುವ ರಾಜ್ಯ ನಾಯಕರು ನಾಳೆ ನಾಡಿದ್ದಿನಲ್ಲಿ ಪಕ್ಷದ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರಂತೆ. ಸಧ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ ಈ ಬಗ್ಗೆ ವರಿಷ್ಠರಿಗೆ ತಿಳಿಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಧೃಡಪಟ್ಟಿದೆ.

Siddaramaiah – B.Y.Vijayendra : Vijayendra no contest from Varuna Constituency : B.S.Yediyurappa

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular