ಮಂಗಳವಾರ, ಜೂನ್ 17, 2025
HomeCinemaಹೈದ್ರಾಬಾದ್ ಗೆ ಹಾರಲಿದೆ 'ಫ್ಯಾಂಟಂ' ಚಿತ್ರತಂಡ : ಕೊರೊನಾ ಆತಂಕದಲ್ಲೇ ಶೂಟಿಂಗ್ ಗೆ ರೆಡಿಯೆಂದ 'ಕಿಚ್ಚ'

ಹೈದ್ರಾಬಾದ್ ಗೆ ಹಾರಲಿದೆ ‘ಫ್ಯಾಂಟಂ’ ಚಿತ್ರತಂಡ : ಕೊರೊನಾ ಆತಂಕದಲ್ಲೇ ಶೂಟಿಂಗ್ ಗೆ ರೆಡಿಯೆಂದ ‘ಕಿಚ್ಚ’

- Advertisement -

ಕೊರೊನಾ ವೈರಸ್ ಸೋಂಕಿನ ಆರ್ಭಟದಿಂದಾಗಿ ಚಿತ್ರೋದ್ಯಮ ಸಂಪೂರ್ಣವಾಗಿ ಸ್ತಬ್ದವಾಗಿತ್ತು. ರಾಜ್ಯದಲ್ಲಿ ಸಿನಿಮಾ ಶೂಟಿಂಗ್ ನಡೆಸುವುದಕ್ಕೆ ಸದ್ಯಕ್ಕೆ ಅನುಮತಿ ಸಿಗೋದು ಅನುಮಾನ. ಹೀಗಾಗಿಯೇ ಅಭಿನಯ ಚಿಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಫ್ಯಾಂಟಂ ಸಿನಿಮಾ ತಂಡ ಹೈದ್ರಾಬಾದ್ ಗೆ ಹಾರಲು ರೆಡಿಯಾಗಿದೆ.

Phantom Movie 7

ಕೊರೊನಾ ಭೀತಿಯ ನಡುವಲ್ಲೇ ನಟ ಸುದೀಪ್ ಶೂಟಿಂಗ್ ಗೆ ರಡಿ ಎಂದಿದ್ದಾರೆ. ಹೀಗಾಗಿ ಜುಲೈ 1ರಿಂದಲೇ ಶೂಟಿಂಗ್ ನಡೆಸುವುದಕ್ಕೆ ಸಿದ್ದತೆ ಮಾಡಿಕೊಂಡಿದೆ ಚಿತ್ರತಂಡ.

Phantom Movie

ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ ಭಂಡಾರಿ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಫ್ಯಾಂಟಮ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಮಾತ್ರವಲ್ಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ‘ಕೋಟಿಗೊಬ್ಬ-3’ ನಂತರದಲ್ಲಿ ಫ್ಯಾಂಟಂ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ಆದ್ರೆ ಕೊರೊನಾ ಹೊಡೆತದಿಂದಾಗಿ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಲಾಯ್ತು.

Phantom Movie 9 E1592026519963

ಫ್ಯಾಂಟಂ ಸಿನಿಮಾಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದು, ಹೈದ್ರಬಾದ್ ನ ಅನ್ನಪೂರ್ಣ ಸ್ಟೂಡಿಯೋದಲ್ಲಿ ಅದ್ದೂರಿ ಸೆಟ್ ಹಾಕಲಾಗಿತ್ತು. ದಿನವೊಂದಕ್ಕೆ 1 ರಿಂದ 2ಲಕ್ಷ ರೂಪಾಯಿ ಬಾಡಿಗೆ ಪಾವತಿಸಬೇಕಾಗಿತ್ತು. ಇದರಿಂದಾಗಿ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗುತ್ತಿತ್ತು. ಇದನ್ನ ಮನಗಂಡ ಕಿಚ್ಚ ಕೊರೊನಾ ಸೋಂಕಿನ ಭೀತಿಯ ನಡುವಲ್ಲೇ ಶೂಟಿಂಗ್ ಮಾಡೋದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Phantom Movie 1

ತೆಲಂಗಾಣ ಸರಕಾರ ಮಾರ್ಗಸೂಚಿಯನ್ವಯ ಸಿನಿಮಾ ಶೂಟಿಂಗ್ ನಡೆಸುವುದಕ್ಕೆ ಅನುಮತಿಯನ್ನು ನೀಡಿದ್ದು ಕೇವಲ 45 ಜನರನ್ನು ಬಳಕೆ ಮಾಡಿಕೊಂಡು ಸಿನಿಮಾ ಶೂಟಿಂಗ್ ನಡೆಸಬಹುದಾಗಿದೆ. ಇದಕ್ಕಾಗಿ ಕಿಚ್ಚ ಈಗಾಗಲೇ ಭರ್ಜರಿ ಫ್ಲ್ಯಾನ್ ಮಾಡಿಕೊಂಡಿದ್ದಾರೆ.

Alvas1

ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಿರ್ಮಾಪಕ ಜಾಕ್ ಮಂಜು ಸೇರಿದಂತೆ ತಂತ್ರಜ್ಞರ ಜೊತೆಗೆ ಸಭೆ ನಡೆಸಿ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಶೂಟಿಂಗ್ ಅವಧಿಯಲ್ಲಿ ಕೇವಲ 45 ಜನರನ್ನು ಇಟ್ಟುಕೊಂಡು ಸಿನಿಮಾ ಶೂಟ್ ಮಾಡಿಕೊಳ್ಳುವುದಕ್ಕೆ ಚಿತ್ರತಂಡ ರೆಡಿಯಾಗಿದೆ.

Phantom Movie 10

ಲೈಟ್ ಬಾಯ್ಸ್, ಮೇಕಪ್ ಮ್ಯಾನ್ ಸೇರಿದಂತೆ ಹಲವು ತಂತ್ರಜ್ಞರು ಶೂಟಿಂಗ್ ಸೆಟ್ ನಿಂದ ದೂರವಿಟ್ಟು ಶೂಟ್ ಮಾಡಲು ಸಲಹೆ ಕೊಟ್ಟಿದ್ದಾರೆ ಕಿಚ್ಚ. ಅಲ್ಲದೇ ಇಡೀ ಚಿತ್ರ ತಂಡ ಶೂಟಿಂಗ್ ಮುಗಿಯುವವರೆಗೂ ತೆಲಂಗಾಣದಲ್ಲಿಯೇ ಉಳಿದುಕೊಳ್ಳಲಿದೆ.

Phantom Movie 6

ಜೂನ್ 27ರಂದು ತೆಲಂಗಾಣಕ್ಕೆ ತೆರಳಲಿರುವ ಚಿತ್ರತಂಡ ಒಂದಿಷ್ಟು ದಿನ ಕ್ವಾರಂಟೈನ್ ಗೆ ಒಳಪಡಲಿದೆ. ನಂತರ ಜುಲೈ 1ರಿಂದ ಸಿನಿಮಾ ಶೂಟಿಂಗ್ ನಡೆಸಲಾಗುವುದು ಎಂದು ಚಿತ್ರದ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದಾರೆ.

Phantom Movie 8

ಚಿತ್ರದ ನಿರ್ಮಾಪಕರಿಗೆ ನಷ್ಟವಾಗಬಾರದು ಅನ್ನೋ ಸಲುವಾಗಿ ಕಿಚ್ಚ ಸುದೀಪ್ ರಿಸ್ಕ್ ತೆಗೆದುಕೊಂಡು ಶೂಟಿಂಗ್ ನಡೆಸುವುದಕ್ಕೆ ಒಪ್ಪಿದ್ದಾರೆ. ಹೀಗಾಗಿ ಸುದೀಪ್ ಅವರಿಗೆ ಜಾಕ್ ಮಂಜು ಕೃತಜ್ಞೆತೆಯನ್ನು ಸಲ್ಲಿಸಿದ್ದಾರೆ.

Phantom Movie 4

ಫ್ಯಾಂಟಮ್ ಸಿನಿಮಾದ ಫೋಟೋ ಶೂಟ್ ಮತ್ತು ಪ್ರೋಮ್ ಶೂಟ್ ತುಂಬಾ ವಿಭಿನ್ನವಾಗಿರಲಿದೆ ಅಂತಾ ಈ ಹಿಂದೆಯೇ ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ. ಅಲ್ಲದೇ ತೆಲಂಗಾಣದಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ನಡೆಸಲಾಗುತ್ತಿದೆ. ಅಲ್ಲದೇ ಗನ್ ಹಿಡಿದು ಕಿಚ್ಚ ವಿಭಿನ್ನವಾಗಿ ಫೋಸ್ ಕೊಟ್ಟಿರುವ ಪೋಸ್ಟರ್ ಅನ್ನು ನಿರ್ದೇಶಕ ಅನೂಪ್ ಭಂಡಾರಿ ಈ ಹಿಂದೆಯೇ ರಿವೀಲ್ ಮಾಡಿದ್ದರು.

Sudeep Samantha

ಚಿತ್ರದ ನಾಯಕಿಯರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಹಿಂದೆ ಕಿಚ್ಚನಿಗೆ ಜೊತೆಯಾಗಿ ಸಮಂತಾ ಅಕ್ಕಿನೇನಿ ನಟಿಸುತ್ತಾರೆ ಅಂತಾ ಹೇಳಲಾಗಿತ್ತು. ಆದ್ರೀಗ ಸಮಂತಾ ನಟಿಸುವುದು ಬಹುತೇಕ ಫಿಕ್ಸ್ ಆಗಿದೆ.

Sudeep

ಇದೀಗ ಫ್ಯಾಂಟಂ ಚಿತ್ರತಂಡ ಸಿನಿಮಾ ಶೂಟಿಂಗ್ ಗೆ ರೆಡಿಯಾಗಿರೋದು ಅಭಿಮಾನಿಗಳಿಗೆ ಸಖತ್ ಖುಷಿಯನ್ನು ನೀಡಿದೆ. ಕೊರೊನಾ ನಡುವಲ್ಲೇ ಚಿತ್ರೀಕರಣ ಪೂರ್ಣಗೊಂಡ್ರೆ ಕೆಲವೇ ತಿಂಗಳುಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಫ್ಯಾಂಟಂ ಸಿನಿಮಾಕ್ಕಾಗಿ ಅದ್ದೂರಿ ಸೆಟ್ ಹಾಕಿರುವ ಅನ್ನಪೂರ್ಣ ಸ್ಟುಡಿಯೋ ಹೇಗಿದೆ ಗೊತ್ತಾ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular