ಭಾನುವಾರ, ಏಪ್ರಿಲ್ 27, 2025
HomeCrimeGang rape- 2 arrested :12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : 2...

Gang rape- 2 arrested :12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ : 2 ಮಂದಿ ಅರೆಸ್ಟ್‌

- Advertisement -

ಗಾಜಿಯಾಬಾದ್: (Gang rape- 2 arrested) 12 ವರ್ಷದ ಬಾಲಕಿಯ ಮೇಲೆ ಓರ್ವ ಹೋಂಗಾರ್ಡ್ ಸೇರಿದಂತೆ ಇಬ್ಬರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಗಾಜಿಯಾಬಾದ್‌ ನಲ್ಲಿ ನಡೆದಿದೆ. ಇದೀಗ ಇಬ್ಬರು ಆರೋಪಿಗಳನ್ನು ಅತ್ಯಾಚಾರ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ತನ್ನ ಸಹೋದರನ ಮೊಬೈಲ್ ಒಡೆದಿದ್ದಕ್ಕೆ ತಾಯಿ ಆಕೆಯನ್ನು ನಿಂದಿಸಿದ್ದು, ಇದರಿಂದ ಕೋಪಗೊಂಡ ಬಾಲಕಿ ಮನೆ ಬಿಟ್ಟು ಹೋಗಿದ್ದಳು. ನಂತರ ಆಕೆ ಅಂಗಡಿಯೊಂದರಲ್ಲಿ ಮೊಬೈಲ್ ರಿಪೇರಿ ಮಾಡಿಸಿ ಇ-ರಿಕ್ಷಾವನ್ನು ಹತ್ತಿದ್ದಳು. ಅದೇ ರಿಕ್ಷಾದಲ್ಲಿ ಆರೋಪಿಯೋರ್ವ ಕೂಡ ಪ್ರಯಾಣಿಸುತ್ತಿದ್ದ. ಈ ವೇಳೆ ಆರೋಪಿಯು ಬಾಲಕಿಯನ್ನು ಹೋಮ್‌ ಗಾರ್ಡ್‌ ನ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಹೋಮ್‌ ಗಾರ್ಡ್ ಹಾಗೂ ಇನ್ನೋರ್ವ ಆರೋಪಿ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಅಲ್ಲದೇ ಅತ್ಯಾಚಾರದ ವಿಚಾರವನ್ನು ಯಾರಿಗಾದರು ಬಹಿತಂಗಪಡಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಕೂಡ ಹಾಕಿದ್ದಾರೆ. ಘಟನೆಯ ಬಳಿಕ ಮನೆಗೆ ತೆರಳಿದ ಬಾಲಕಿ ತನ್ನ ತಂದೆಗೆ ಘಟನೆಯ ಬಗ್ಗೆ ವಿವರಿಸಿದ್ದು, ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ (ಗ್ಯಾಂಗ್ ಅತ್ಯಾಚಾರ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : Rice mill collapse : 3 ಅಂತಸ್ತಿನ ಅಕ್ಕಿ ಗಿರಣಿ ಕುಸಿತ : 4 ಕಾರ್ಮಿಕರು ಸಾವು

ಇದನ್ನೂ ಓದಿ : Former MLA Neeraja Reddy : ಭೀಕರ ಕಾರು ಅಪಘಾತ ; ಮಾಜಿ ಶಾಸಕಿ, ಬಿಜೆಪಿ ನಾಯಕಿ ನೀರಜಾ ರೆಡ್ಡಿ ಸಾವು

ಇದನ್ನೂ ಓದಿ : Couple cutoff their heads : ಅಪಾರ ದೈವ ಭಕ್ತಿ : ತಲೆಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಿದ ದಂಪತಿ

Gang rape- 2 arrested: Gang rape of 12-year-old girl: 2 arrested

RELATED ARTICLES

Most Popular