ಮಂಗಳವಾರ, ಏಪ್ರಿಲ್ 29, 2025
HomeCinemaಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಸಂಪತ್‌ ಜಯರಾಮ್‌ ಇನ್ನಿಲ್ಲ

ಅಗ್ನಿಸಾಕ್ಷಿ ಸೀರಿಯಲ್‌ ಖ್ಯಾತಿಯ ಸಂಪತ್‌ ಜಯರಾಮ್‌ ಇನ್ನಿಲ್ಲ

- Advertisement -

ಈ ಹಿಂದೆ ಕಲರ್ಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಅಗ್ನಿಸಾಕ್ಷಿ” ಸೀರಿಯಲ್‌ ಖ್ಯಾತಿಯ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆಗೆ (Sampath Jayaram committed suicide) ಶರಣಾಗಿದ್ದಾರೆ. ನಟ ಸಂಪತ್‌ ಜಯರಾಮ್‌ ಕಿರುತೆರೆ ಮಾತ್ರವಲ್ಲದೇ ಒಂದಷ್ಟು ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ದಿನಗಳಲ್ಲಿ ಅವಕಾಶ ಕೊರತೆಯಿಂದಾಗಿ ಸಂಪತ್‌ ಜಯರಾಮ್‌ಗೆ ಕಾಡುತ್ತಿತ್ತು. ಸದ್ಯ ನಟನ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು, ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.

ಶನಿವಾರ (ಏಪ್ರಿಲ್​ 22) ನೆಲಮಂಗಲದಲ್ಲಿ ನಟ ಸಂಪತ್‌ ಜಯರಾಮ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಟ ಸಂಪತ್​ ಅವರಿಗೆ 35 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಒಂದು ವರ್ಷದ ಹಿಂದೆ ಮದುವೆ ಆಗಿದ್ದ ಅವರು ಈಗ ಇಹಲೋಕ ತ್ಯಜಿಸಿರುವುದು ಅವರ ಆಪ್ತರಿಗೆ ತೀವ್ರ ನೋವು ಉಂಟು ಮಾಡಿದೆ. ನೆಲಮಂಗಲದ ಆಸ್ಪತ್ರೆಯಿಂದ ಎನ್​ಆರ್​ ಪುರಕ್ಕೆ ಅವರ ಮೃತದೇಹವನ್ನು ಸಾಗಿಸಲಾಗಿದೆ.

ಇದನ್ನೂ ಓದಿ : ದೊಡ್ಮನೆ ಕುಡಿ ಯುವರಾಜ್‌ಕುಮಾರ್‌ಗೆ ಹುಟ್ಟು ಹಬ್ಬದ ಸಂಭ್ರಮ

ಇದನ್ನೂ ಓದಿ : ಕಿರುತೆರೆಗೆ ಮತ್ತೆ ಮೋಡಿ ಮಾಡಲಿದೆ ಛೋಟಾ ಚಾಂಪಿಯನ್‌

ಅಗ್ನಿಸಾಕ್ಷಿ ಸೀರಿಯಲ್‌ನಿಂದ ಸಂಪತ್‌ ಜಯರಾಮ್‌ಗೆ ಅತೀ ಹೆಚ್ಚು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು. ಯಾಕೆಂದರೆ ಈ ಸೀರಿಯಲ್‌ನಲ್ಲಿ ನಾಯಕಿಯ ಅಣ್ಣನ ಖಡಕ್ ಪಾತ್ರದಲ್ಲಿ ನಟಿಸಿದ್ದಾರೆ. ಸೀರಿಯಲ್‌ನಲ್ಲಿ ಮನೆಗೆ ಹಿರಿಯ ಮಗನಾಗಿ ಅಪ್ಪ, ಅಮ್ಮ, ಇಬ್ಬರೂ ತಂಗಿ ಹಾಗೂ ಹೆಂಡತಿ ಮಗುವನ್ನು ನೋಡಿಕೊಳ್ಳುವ ಪರಿಪೂರ್ಣ ಪಾತ್ರವಾಗಿತ್ತು. ಅಷ್ಟೇ ಅಲ್ಲದೇ ತನ್ನ ತಂಗಿ ಸನ್ನಿಧಿಗೆ ಹೆಂಡತಿ ಮಾಡುವ ಕುತಂತ್ರಕ್ಕೆ ಆಗಾಗ್ಗ ಕಡಿವಾಣ ಹಾಕುವಂತಹ ಪಾತ್ರದ ಮೂಲಕ ಜನಮನ್ನಣೆಯನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಟ ಸಂಪತ್‌ ಕರ್ನಾಟಕದ ಮನೆ ಮಗನಾಗಿ ಗುರುತಿಸಿಕೊಂಡಿದ್ದು, ಇವರ ಸಾವಿನ ಸುದ್ದಿ ಜನರಿಗೆ ಬೇಸರ ತಂದಿದೆ.

ನಟ ಸಂಪತ್‌ ಜಯರಾಮ್‌ ಸಾವಿನ ಸುದ್ದಿ ತಿಳಿದ ಅಗ್ನಿಸಾಕ್ಷಿ ಸೀರಿಯಲ್‌ ಇನ್ನೊರ್ವ ನಟ ರಾಜೇಶ್‌ ಧ್ರುವ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ,”ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ. ಅದೆಷ್ಟೋ ಸಿನಿಮಾ ಮಾಡೋದಿದೆ. ಅದೆಷ್ಟೋ ಜಗಳ ಬಾಕಿ ಇದೆ. ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ. ಇನ್ನೂ ನಿನ್ನ ದೊಡ್ಡ ದೊಡ್ಡ ಸ್ಟೇಜ್​ನಲ್ಲಿ ನೋಡೋದು ಇದೆ ಕಣೋ. ವಾಪಾಸ್ ಬಾರೋ ಪ್ಲೀಸ್” ಎಂದು ಸಂತಾಪವನ್ನು ಸೂಚಿಸಿದ್ದಾರೆ.

Sampath Jayaram committed suicide : Fire witness serial fame Sampath Jayaram is no more

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular