ಸ್ಯಾಂಡಲ್‌ವುಡ್ ಹಿರಿಯ ನಟ, ನವರಸ ನಾಯಕ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಘವೇಂದ್ರ ಸ್ಟೋರ್ಸ್ (Santhosh Anand Ram – Actor Jaggesh) ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಖತ್ ವೀವ್ಸ್ ಕಂಡಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ನಟ ಜಗ್ಗೇಶ್ ಅವರ ಸಿನಿಮಾವೆಂದರೆ ಯಾವಗಲೂ ನವರಸದಿಂದಲೇ ಕೂಡಿರುತ್ತದೆ. ಹಾಗಾಗಿ ಈ ಸಿನಿಮಾ ಕೂಡ ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದು ಖಂಡಿತ. ಇನ್ನು ನಟ ರಿಷಬ್ ಶೆಟ್ಟಿ ಈ ಸಿನಿಮಾದ ಟ್ರೈಲರನ್ನು ರಿಲೀಸ್ ಮಾಡಿದ್ದು, ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಸಿನಿಮಾದ ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ ಯಾವಾಗ ಎನ್ನುವುದರ ಬಗ್ಗೆ ಮಾಹಿತಿ ಸಿಕ್ಕಿದೆ.
ನಿರ್ದೇಶಕ ಸಂತೋಷ್ ಆನಂದ ರಾಮ್ ತಮ್ಮ ಟ್ವೀಟ್‌ನಲ್ಲಿ, “ನಿಮ್ಮ ದಾರಿಯಲ್ಲಿ ಬರುವ ರುಚಿಕರವಾದ ಊಟಕ್ಕೆ ಸಿದ್ಧರಾಗಿ ಈ ಏಪ್ರಿಲ್ 28 ರಂದು ಚಿತ್ರಮಂದಿರಗಳಲ್ಲಿ ರಾಘವೇಂದ್ರ ಸ್ಟೋರ್ಸ್! ಬುಕಿಂಗ್‌ಗಳು ಇಂದಿನಿಂದ @ ಸಂಜೆ 5 ಗಂಟೆಗೆ ತೆರೆದಿರುತ್ತದೆ. ಬುಕ್‌ಮೈಶೋ & Paytm ಟಿಕೆಟ್‌ಗಳು ಲಭ್ಯವಾಗಿರುತ್ತದೆ.” ಎಂದು ಮಾಹಿತಿ ನೀಡಿದ್ದಾರೆ.
Get ready for a delicious meal coming your way ❤️#RaghavendraStores in cinemas this April 28th!
— Santhosh Ananddram (@SanthoshAnand15) April 26, 2023
Bookings Open From Today @ 5 PM on @bookmyshow & @PaytmTickets.@Jaggesh2 #VijayKiragandur @hombalefilms #HombaleMusic @HombaleGroup @RgvndraStores #RaghavendraStoresOnApr28 pic.twitter.com/O5Rwrqtxn5
ಇನ್ನು ಟ್ರೈಲರ್ ಉದ್ದಕ್ಕೂ ಅಡುಗೆ ಭಟ್ಟರಾಗಿರುವ ಹಿರಿಯ ನಟ ಜಗ್ಗೇಶ್‌ಗೆ ಹುಡುಗಿ ಹುಡುಕುತ್ತಿದ್ದು, ಕ್ಯಾಟರಿಂಗ್ ಸರ್ವಿಸ್ ನಡೆಸುವ ಹುಡುಗನಿಗೆ ಯಾರು ಹುಡುಗಿ ನೀಡುತ್ತಾರೆ. ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹುಡುಗರಿಗೆ ಮದುವೆ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಹಳ ಹಾಸ್ಯಮಯವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೇ ಅಡುಗೆ ಭಟ್ಟನ್ನು ಮೆಚ್ಚಿ ಮದುವೆ ಆಗುವ ಹುಡುಗಿಯರ ಮನಸ್ಥಿತಿ ಬಗ್ಗೆ ಕೂಡ ಬಹಳ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಇನ್ನು ಟ್ರೈಲರ್ ನೋಡಿದ ಸಿನಿಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾದಿದ್ದಾರೆ.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ : ನುಡಿದಂತೆ ನಡೆದ ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್
ಇದನ್ನೂ ಓದಿ : ಪುನೀತ್ ರಾಜ್‌ಕುಮಾರ್, ರಮ್ಯಾ ಅಭಿನಯದ ಅಭಿ ಸಿನಿಮಾಕ್ಕೆ 20 ವರ್ಷ ಸಂಭ್ರಮ
ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ. ನಟ ಜಗ್ಗೇಶ್ ಈ ಹಿಂದೆ ಟೀಸರ್ ಬಿಡುಗಡೆ ವೇಳೆ ಸಿನಿಮಾದ ಕುರಿತು ಮಾತನಾಡಿದ್ದರು. ಅದರಂತೆ “ಈ ಸಿನಿಮಾದಲ್ಲಿ ಉತ್ತಮ ಸಾಮಾಜಿಕ ಸಂದೇಶ ಇದೆ. ಹಾಗಾಗಿ ಸದ್ಯ ಟೀಸರ್‌ನಲ್ಲಿ ಇರುವುದನ್ನು ಬಿಟ್ಟು ಸಿನಿಮಾದಲ್ಲಿ ಇನ್ನೇನೋ ಇದೆ ಎನ್ನುವುದು ಗೊತ್ತಾಗುತ್ತದೆ” ಎಂದು ಹೇಳಿದ್ದರು.
Santhosh Anand Ram – Actor Jaggesh : “Raghavendra Stores” starring Navrasa hero Jaggesh is open for booking.