ಸ್ಯಾಂಡಲ್ವುಡ್ನಲ್ಲಿ ನವರಸ ನಾಯಕ ಎಂದೇ ಪ್ರಖ್ಯಾತಿ ಪಡೆದಿರುವ ಹಿರಿಯ ನಟ ಜಗ್ಗೇಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಘವೇಂದ್ರ ಸ್ಟೋರ್ಸ್ (Raghavendra Stores – Pawan Wodeyar) ಇಂದು (ಏಪ್ರಿಲ್ 28) ರಾಜ್ಯದಾದ್ಯಂತ ಭರ್ಜರಿಯಾಗಿ ತೆರೆ ಕಂಡಿದೆ. ಈಗಾಗಲೇ ಈ ಸಿನಿಮಾ ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಖತ್ ವೀವ್ಸ್ ಕಂಡಿದ್ದು, ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ಸೂಚಿಸಿದ್ದಾರೆ.
ನಟ ಜಗ್ಗೇಶ್ ಅವರ ಸಿನಿಮಾವೆಂದರೆ ನಕ್ಕು ನಕ್ಕು ಹೊಟ್ಟೆ ಹುಣ್ಣಾಗಿಸುವ ಹಾಗೂ ಅದ್ಭುತ ಸಂದೇಶವಿರುವ ಸಿನಿಮಾ ಆಗಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುತ್ತದೆ. ಹಾಗಾಗಿ ಈ ಸಿನಿಮಾ ಕೂಡ ಸಿನಿಪ್ರೇಕ್ಷಕರಿಗೆ ಉತ್ತಮ ಮನರಂಜನೆಯನ್ನು ನೀಡುವುದು ಖಂಡಿತ. ಸಿನಿಮಾ ಬಿಡುಗಡೆಗೂ ಮುನ್ನ ಸೆಲೆಬ್ರಿಟಿ ಶೋ ದಲ್ಲಿ ಕನ್ನಡ ಸಿನಿರಂಗದ ಹೆಚ್ಚಿನ ಸಿನಿತಾರೆಯರು ನೋಡಿ ಮೆಚ್ಚಿಕೊಂಡಿದ್ದಾರೆ. ಸದ್ಯ ಈ ಸಿನಿಮಾಕ್ಕೆ ಭಾರತದ ಹೆಸರಾಂತ ನಿರ್ದೇಶಕ ಪವನ್ ಒಡೆಯರ್ ಶುಭ ಹಾರೈಸಿದ್ದಾರೆ.
ನಿರ್ದೇಶಕ ಪವನ್ ಒಡೆಯರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “”ರಾಘವೇಂದ್ರ ಸ್ಟೋರ್ಸ್ ” ಚಿತ್ರಕ್ಕೆ ಶುಭಾಶಯಗಳು. ಈಗಾಗಲೇ ಬಹಳಷ್ಟು ಮೆಚ್ಚುಗೆ ಪಡೆದಿರುವ ಚಿತ್ರತಂಡಕ್ಕೆ ಅಭಿನಂದನೆಗಳು. ಸಂತೋಷ್ ರ ಬರವಣಿಗೆ. ಜಗ್ಗೇಶಣ್ಣನವರ ಅಭಿನಯಕ್ಕೆ ಹಲವಾರು ಮೆಚ್ಚುಗೆ ಪ್ರತಿಕ್ರಿಯೆಗಳು ಬಂದಿರುವುದು ಸಂತಸದ ವಿಷಯ. ಕುಟುಂಬದೊಡನೆ ನೋಡಿ “ರಾಘವೇಂದ್ರ ಸ್ಟೋರ್ಸ್” ಎಂದು ಪೋಸ್ಟ್ ಮಾಡಿ ಸಿನಿತಂಡಕ್ಕೆ ಶೂಭ ಹಾರೈಸಿದ್ದಾರೆ.
"ರಾಘವೇಂದ್ರ ಸ್ಟೋರ್ಸ್ " ಚಿತ್ರಕ್ಕೆ ಶುಭಾಶಯಗಳು. ಈಗಾಗಲೇ ಬಹಳಷ್ಟು ಮೆಚ್ಚುಗೆ ಪಡೆದಿರುವ ಚಿತ್ರತಂಡಕ್ಕೆ ಅಭಿನಂದನೆಗಳು. ಸಂತೋಷ್ ರ ಬರವಣಿಗೆ. ಜಗ್ಗೇಶಣ್ಣನವರ ಅಭಿನಯಕ್ಕೆ ಹಲವಾರು ಮೆಚ್ಚುಗೆ ಪ್ರತಿಕ್ರಿಯೆಗಳು ಬಂದಿರುವುದು ಸಂತಸದ ವಿಷಯ. ಕುಟುಂಬದೊಡನೆ ನೋಡಿ "ರಾಘವೇಂದ್ರ ಸ್ಟೋರ್ಸ್" @SanthoshAnand15 @Jaggesh2 @hombalefilms pic.twitter.com/zUe7MmAMRU
— Pavan Kumar Wadeyar (@PavanWadeyar) April 28, 2023
ಈ ಸಿನಿಮಾದ ಮೊದಲ ಭಾಗವು ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸುತ್ತದೆ. ಇನ್ನು ಕೊನೆಯಲ್ಲಿ ಉತ್ತಮ ಮೆಸೇಜ್ನೊಂದಿಗೆ ಸಿನಿಮಾ ಕೊನೆಯಾಗುತ್ತದೆ ಎಂದು ಸೆಲೆಬ್ರಿಟಿ ಶೋ ನೋಡಿದ ಸಿನಿತಾರೆಯರು ಹೇಳಿಕೊಂಡಿದ್ದಾರೆ. ಇನ್ನು ನಟ ರಿಷಬ್ ಶೆಟ್ಟಿ ಈ ಸಿನಿಮಾದ ಟ್ರೈಲರನ್ನು ರಿಲೀಸ್ ಮಾಡಿದ್ದು, ಟ್ರೈಲರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಾತನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ರಾಜ್ಯದಾದ್ಯಂತ ಸಿನಿಮಂದಿರಗಳಲ್ಲಿ ಹೌಸ್ ಪುಲ್ ಬೋರ್ಡ್ ಹಾಕಲಾಗಿದೆ.
ಇನ್ನು ಟ್ರೈಲರ್ ಉದ್ದಕ್ಕೂ ಅಡುಗೆ ಭಟ್ಟರಾಗಿರುವ ಹಿರಿಯ ನಟ ಜಗ್ಗೇಶ್ಗೆ ಹುಡುಗಿ ಹುಡುಕುತ್ತಿದ್ದು, ಕ್ಯಾಟರಿಂಗ್ ಸರ್ವಿಸ್ ನಡೆಸುವ ಹುಡುಗನಿಗೆ ಯಾರು ಹುಡುಗಿ ನೀಡುತ್ತಾರೆ. ಈ ಕೆಲಸದಲ್ಲಿ ತೊಡಗಿಸಿಕೊಂಡಿರುವ ಹುಡುಗರಿಗೆ ಮದುವೆ ವಿಚಾರದಲ್ಲಿ ಎದುರಾಗುವ ಸಮಸ್ಯೆಗಳನ್ನು ಬಹಳ ಹಾಸ್ಯಮಯವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೇ ಅಡುಗೆ ಭಟ್ಟನ್ನು ಮೆಚ್ಚಿ ಮದುವೆ ಆಗುವ ಹುಡುಗಿಯರ ಮನಸ್ಥಿತಿ ಬಗ್ಗೆ ಕೂಡ ಬಹಳ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ. ಇನ್ನು ಟ್ರೈಲರ್ ನೋಡಿದ ಸಿನಿಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾದಿದ್ದಾರೆ.
ಇದನ್ನೂ ಓದಿ : ರಾಘವೇಂದ್ರ ಸ್ಟೋರ್ಸ್ ಸೆಲೆಬ್ರಿಟಿ ಶೋ : ನೋಡಿದ ಸಿನಿತಾರೆಯರು ಹೇಳಿದ್ದೇನು ಗೊತ್ತೆ ?
ಈ ಸಿನಿಮಾದಲ್ಲಿ ಹಿರಿಯ ನಟ ಜಗ್ಗೇಶ್ ಅಡುಗೆ ಭಟ್ಟನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, 40 ವರ್ಷ ದಾಟಿದರೂ ಮದುವೆಯಾಗದೇ ಅಡುಗೆ ಭಟ್ಟನ ಪಾತ್ರದಲ್ಲಿ ಸಿನಿಪ್ರೇಕ್ಷಕರಿಗೆ ಕಚಗುಳಿ ನೀಡಲು ಸಿದ್ದರಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್ ಅಭಿನಯಿಸಲಿದ್ದಾರೆ. ಹೀಗಾಗಿ ಈ ಸಿನಿಮಾದ ಮೇಲೆ ಸಿನಿಪ್ರೇಕ್ಷಕರಿಗೆ ನಿರೀಕ್ಷೆಗಳು ಹೆಚ್ಚಾಗಿದೆ. ಈ ಸಿನಿಮಾವನ್ನು ಹೆಸರಾಂತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್ ರವರು ನಿರ್ಮಿಸಿದ್ದಾರೆ. ನಿರ್ದೇಶಕ ಸಂತೋಷ್ ಆನಂದ ರಾಮ್ ಅವರು ಈ ಸಿನಿಮಾಕ್ಕೆ ಉತ್ತಮ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
Raghavendra Stores – Pawan Wodeyar : Raghavendra Stores showing great performance across the state : Pawan Wodeyar wishes