ಭಾನುವಾರ, ಏಪ್ರಿಲ್ 27, 2025
Homebusinessಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

ಆಭರಣ ಪ್ರಿಯರೇ : ಮತ್ತೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಂಡ ಚಿನ್ನಾಭರಣ

- Advertisement -

ನವದೆಹಲಿ : ಕಳೆದ ಮೂರು ನಾಲ್ಕು ದಿನದಿಂದ ಚಿನ್ನ ಹಾಗೂ ಬೆಲೆಯಲ್ಲಿ ಇಳಿಕೆ ಕಂಡಿತ್ತು. ಮಾರುಕಟ್ಟೆಯಲ್ಲಿ ನಿನ್ನೆಗಿಂತ ಚಿನ್ನದ ಬೆಲೆಯಲ್ಲಿ ಸ್ವಲ್ಪ (Gold price rise) ಏರಿಕೆ ಕಂಡು ಬಂದಿದೆ. ಆದರೆ ಬೆಳ್ಳಿಯ ಬೆಲೆ ಭಾನುವಾರವೂ ಬದಲಾಗದೆ ಉಳಿದಿದೆ. ಮದುವೆ ಮಾಸ ಆರಂಭವಾಗುತ್ತಿದ್ದಂತೆ ಚಿನ್ನಾಭರಣಗಳ ಬೆಲೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಆದರೂ ಮದುವೆ, ಇತರೆ ಶುಭ ಕಾರ್ಯಕ್ರಮಗಳಿಗೆ ಚಿನ್ನ ಹಾಗೂ ಬೆಳ್ಳಿ ಬೇಕಾಗುತ್ತದೆ. ಹೀಗಾಗಿ ಗ್ರಾಹಕರು ಬೆಲೆ ಇಳಿಕೆಯಾಗಿ ಕಾಯುತ್ತಿರುತ್ತಾರೆ. ಇನ್ನುಳಿದಂತೆ ಕೆಲವು ವರ್ಗದ ಗ್ರಾಹಕರು ತಮ್ಮ ಮುಂದಿನ ಭದ್ರ ಭವಿಷ್ಯಕ್ಕಾಗಿ ತಮ್ಮ ತಮ್ಮ ಸಣ್ಣ ಉಳಿತಾಯವನ್ನು ಚಿನ್ನದಲ್ಲಿ ಹೂಡಿಕೆ ಮಾಡಲು ಇಚ್ಛಿಸುತ್ತಾರೆ. ಆದರೆ ಇಂದಿನ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.

ಗುಡ್ ರಿಟರ್ನ್ಸ್ ಪ್ರಕಾರ, ಚಿನಿವಾರ ಪೇಟೆಯಲ್ಲಿ 1 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ. 5,585, 8 ಗ್ರಾಂಗೆ ರೂ.44,680, 10 ಗ್ರಾಂ ರೂ. 55,850 ಮತ್ತು ಅದೇ ರೀತಿ 100 ಗ್ರಾಂ 22ಕ್ಯಾರೆಟ್ ಚಿನ್ನದ ಬೆಲೆ ರೂ. 5,58,500 ಆಗಿರುತ್ತದೆ. ಅದೇ ರೀತಿ, 1 ಗ್ರಾಂ, 8 ಗ್ರಾಂ, 10 ಗ್ರಾಂ ಮತ್ತು 100 ಗ್ರಾಂ 24 ಕೆ ಚಿನ್ನದ ಬೆಲೆ ಕ್ರಮವಾಗಿ ರೂ. 6,093, ರೂ. 48,744, ರೂ. 60,930 ಮತ್ತು ರೂ. 6,09,300 ಆಗಿದೆ. ಇನ್ನು ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಹಾಗೂ ಬೆಳ್ಳಿ ದರವನ್ನು ಈ ಕೆಳಗೆ ತಿಳಿಸಲಾಗಿದೆ.

ನಗರದ ಹೆಸರು 22ಕ್ಯಾರೆಟ್ ಚಿನ್ನ (ಪ್ರತಿ 10 ಗ್ರಾಂ) ‌ 24ಕ್ಯಾರೆಟ್ ಚಿನ್ನ (ಪ್ರತಿ 10 ಗ್ರಾಂ)

  • ದೆಹಲಿ ರೂ. 56,000 ರೂ.61,080
  • ಜೈಪುರ ರೂ. 56,000 ರೂ.61,080
  • ಚಂಡೀಗಢ ರೂ. 56,000 ರೂ.61,080
  • ಮುಂಬೈ ರೂ. 55,850 ರೂ. 60,930
  • ಕೋಲ್ಕತ್ತಾ ರೂ. 55,850 ರೂ. 60,930
  • ಕೇರಳ ರೂ. 55,850 ರೂ. 60,930
  • ಬೆಂಗಳೂರು ರೂ. 55,900 ರೂ. 60,980
  • ವಡೋದರಾ ರೂ. 55,900 ರೂ. 60,980
  • ದಾವಣಗೆರೆ ರೂ. 55,900 ರೂ. 60,980

ಆದರೆ, ಮೇಲೆ ತಿಳಿಸಲಾದ ದರಗಳು ಜಿಎಸ್‌ಟಿ, ಟಿಸಿಎಸ್ ಮತ್ತು ಸ್ಥಳೀಯ ತೆರಿಗೆಗಳನ್ನು ಒಳಗೊಂಡಿರುವುದುಲ್ಲ ಎನ್ನುವುದನ್ನು ಗಮನಿಸಬೇಕು. ನಿಜವಾದ ದರಗಳನ್ನು ಕಂಡುಹಿಡಿಯಲು ಗ್ರಾಹಕರು ತಮ್ಮ ಸ್ಥಳೀಯ ಆಭರಣಗಳನ್ನು ಸಂಪರ್ಕಿಸಬೇಕು. ಬೆಳ್ಳಿಯ ಬೆಲೆ ನಿನ್ನೆಯಿಂದ ಸ್ಥಿರವಾಗಿದೆ. ಅಲ್ಲಿ 1 ಗ್ರಾಂ ರೂ. 76.20, 8 ಗ್ರಾಂ ರೂ. 609.60, 10 ಗ್ರಾಂ ರೂ. 762, 100 ಗ್ರಾಂ ರೂ. 7,620 ಮತ್ತು 1 ಕೆಜಿ ರೂ. 76,200 ರಷ್ಟಿದೆ. ದೆಹಲಿ, ಕೋಲ್ಕತ್ತಾ ಮತ್ತು ಲಕ್ನೋದಲ್ಲಿ 10 ಗ್ರಾಂ ಬೆಳ್ಳಿ ರೂ. 764 ಮತ್ತು ಹೈದರಾಬಾದ್, ಕೇರಳ, ಚೆನ್ನೈ, ಭುವನೇಶ್ವರದಲ್ಲಿ ರೂ. 804 ಇದೆ.

ಇದನ್ನೂ ಓದಿ : ಸರಕಾರಿ ನೌಕರರಿಗೆ ಸಿಹಿ ಸುದ್ದಿ : ಡಿಎ ಹೆಚ್ಚಿಸಿರುವ ರಾಜ್ಯಗಳ ಸಂಪೂರ್ಣ ಪಟ್ಟಿ ಇಲ್ಲಿದೆ

Gold price rise: Jewelry lovers: Gold prices have increased again in the market

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular