- Advertisement -
ನವದೆಹಲಿ : ಕಾಂಗ್ರೆಸ್ ಯುವನಾಯಕಿ ಪ್ರಿಯಾಂಕ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಚೀನಾ ವಿರುದ್ದ ನಿಲ್ಲುವ ಧೈರ್ಯ ತೋರಿ ಎಂದಿದ್ದಾರೆ.

ಭಾರತ – ಚೀನಾ ಸೈನಿಕರ ನಡುವಿನ ಸಂಘರ್ಷದಲ್ಲಿ ನಮ್ಮ ಯೋಧರು ಹುತಾತ್ಮರಾಗಿದ್ದಾರೆ. ನಮ್ಮ ಭೂಮಿ ಸಾರ್ವಭೌಮತ್ವಕ್ಕೆ ಚೀನಾ ಬೆದರಿಕೆಯೊಡ್ಡಿದೆ. ಇಷ್ಟಾದರು ನಾವು ಸುಮ್ಮನಿರಬೇಕೆ ಎಂದು ಪ್ರಶ್ನಿಸಿರುವ ಅವರು ಸತ್ಯ ಏನೆಂಬುವುದನ್ನು ತಿಳಿಯಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.