ಶನಿವಾರ, ಮೇ 10, 2025
HomeBreakingಮಧುಮೇಹ ಇದ್ದವರು ಮಾವಿನಹಣ್ಣು ತಿನ್ನಬಹುದೇ? ಇಲ್ಲಿದೆ ಮಾಹಿತಿ

ಮಧುಮೇಹ ಇದ್ದವರು ಮಾವಿನಹಣ್ಣು ತಿನ್ನಬಹುದೇ? ಇಲ್ಲಿದೆ ಮಾಹಿತಿ

- Advertisement -

ಭಾರತದಲ್ಲಿ ಲಕ್ಷಾಂತರ ಜನರು ದೀರ್ಘಕಾಲದ ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಲ್ಲಿ ಟೈಪ್‌ 1 ಮಧುಮೇಹವು ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಉಂಟಾಗುತ್ತದೆ. ಟೈಪ್ 2 ಮಧುಮೇಹವು ವಿವಿಧ ಜೀವನಶೈಲಿ ಹಾಗೂ ಕೆಟ್ಟ ಆಹಾರ ಪದ್ಧತಿಯಿಂದ ಉಂಟಾಗುತ್ತದೆ. ಹೀಗಾಗಿ ಒಮ್ಮೆ ಸಕ್ಕರೆ ಕಾಯಿಲೆ ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ನಾವು ತಿನ್ನುವ ಆಹಾರದ ಮೇಲೆ ಗಮನಹರಿಸಬೇಕಾಗುತ್ತದೆ. ಈಗಾಗಲೇ ಮಾವಿನಹಣ್ಣು (Mangoes Benefits for Diabetes) ಹಾಗೂ ಹಲಸಿನ ಹಣ್ಣಿನ ಸೀಸನ್‌ ಆರಂಭವಾಗಿರುವುದರಿಂದ ಬಾಯಿ ಚಪಲ ಕೇಳದೇ ತಿನ್ನುತ್ತೇವೆ. ಆದರೆ ಸಕ್ಕರೆ ಕಾಯಿಲೆ ಇದ್ದವರು ಈ ಹಣ್ಣುಗಳನ್ನು ತಿನ್ನುವಾಗ ಹೆಚ್ಚಿನ ಎಚ್ಚರವಹಿಸಬೇಕು.

ನಮ್ಮ ದೇಹದಲ್ಲಿ ಇರುವ ಮೇದೋಜ್ಜೀರಕ ಗ್ರಂಥಿಯು ಅಗತ್ಯಕ್ಕಿಂತ ಹೆಚ್ಚಿನ ಇನ್ಸುಲಿನ್‌ನ್ನು ಉತ್ಪಾದಿಸುವುದರಿಂದ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸದೆ ಇರುವುದರಿಂದ ಈ ರೋಗವು ರಕ್ತದಲ್ಲಿ ಹೆಚ್ಚಿನ ಸಕ್ಕರೆಯ ಉತ್ಪತ್ತಿ ಮಾಡುವ ಪರಿಣಾಮವಾಗಿ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಉಂಟಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮಧುಮೇಹಿಗಳು ತಮ್ಮ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಬೇಕು. ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಆಹಾರವನ್ನು ಸೇವಿಸಬೇಕು. ಅಂದರೆ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಆಹಾರಗಳು, ಹಣ್ಣುಗಳನ್ನು ಸೇವಿಸುವುದನ್ನು ವಿರೋಧಿಸಲಾಗುತ್ತದೆ.

ಬೇಸಿಗೆಯ ಕಾಲದಲ್ಲಿ ಮಾವಿನಹಣ್ಣುಗಳು ಸಾಕಷ್ಟು ವ್ಯಾಪಕವಾಗಿ ಲಭ್ಯವಿವೆ. ಹೆಚ್ಚಿನ ಪ್ರಮಾಣದ ಸಕ್ಕರೆ ಅಂಶದಿಂದಾಗಿ ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಾರದೆಂದು ಹೆಚ್ಚಿನವರು ಭಾವಿಸುತ್ತಾರೆ. ಆದರೆ ವೈದ್ಯರು ಹೇಳಿರುವ ಪ್ರಕಾರ, ಮಾವಿನಹಣ್ಣುಗಳನ್ನು ಮಿತವಾಗಿ ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಮಾವಿನಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ಉತ್ತಮ ಸಕ್ಕರೆ ನಿಯಂತ್ರಣ ಹೊಂದಿರುವ ಮಧುಮೇಹಿಗಳು ಮಾವಿನ ಹಣ್ಣನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಮಾವಿನಹಣ್ಣಿನಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೂ ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಹೀಗಾಗಿ ಮಾವಿನಹಣ್ಣು ಗಮನಾರ್ಹ ಪ್ರಮಾಣದ ವಿಟಮಿನ್ ಇ, ಕೆ ಮತ್ತು ಬಿ ಕಾಂಪ್ಲೆಕ್ಸ್ ಅನ್ನು ಹೊಂದಿರುತ್ತದೆ ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ತಾಮ್ರವನ್ನು ಒಳಗೊಂಡಂತೆ ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತದೆ.

ಅಷ್ಟೇ ಅಲ್ಲದೇ ಮಾವಿನಹಣ್ಣು ಚಯಾಪಚಯ ಅಸ್ವಸ್ಥತೆಗಳ ಚಿಕಿತ್ಸೆಯಲ್ಲಿ ಮಾವು ಮಹತ್ವದ ಪಾತ್ರವನ್ನು ಹೊಂದಿದೆ ಎಂದು ಸಂಶೋಧನೆ ತೋರಿಸಿದೆ. ಪ್ರತಿದಿನ ಮಾವಿನ ಹಣ್ಣು ತಿನ್ನುವುದರಿಂದ ಅಧಿಕ ಕೊಲೆಸ್ಟ್ರಾಲ್ ಹಾಗೂ ಮಧುಮೇಹದಿಂದ ಜನರನ್ನು ರಕ್ಷಿಣೆ ಪಡೆಯಬಹುದು. ಆದರೆ ಅವುಗಳನ್ನು ಬಹಳಷ್ಟು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಅಸಮತೋಲನಗೊಳಿಸಬಹುದು.

ಇದನ್ನೂ ಓದಿ : Fruits On Empty Stomach : ಖಾಲಿ ಹೊಟ್ಟೆಯಲ್ಲಿ ತಪ್ಪಾಗಿಯೂ ಈ ಹಣ್ಣುಗಳನ್ನು ತಿನ್ನಲೇಬೇಡಿ

ಮಧುಮೇಹ ರೋಗಿಗಳು ಮಾವಿನ ಹಣ್ಣನ್ನು ಮಿತವಾಗಿ ತಿನ್ನಬೇಕು. ಅವರು ತಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಬೇಕು. ಆದರೆ ಮಧುಮೇಹಿಗಳು ಮಾವಿನಹಣ್ಣಿನ ಜ್ಯೂಸ್‌ನ್ನು ಸೇವಿಸಬಾರದು. ಅದರ ಬದಲು ಸಿಪ್ಪೆಯೊಂದಿಗೆ ಹಣ್ಣನ್ನು ತಿನ್ನಬೇಕು. ಹಸಿ ಮಾವಿನ ಹಣ್ಣನ್ನು ಮೊಸರು ಅಥವಾ ಅನ್ನದೊಂದಿಗೆ ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ನಿಯಮಿತವಾಗಿ ತಿನ್ನಬಹುದಾದ ಇತರ ಬೇಸಿಗೆಯ ಹಣ್ಣುಗಳೆಂದರೆ ಪೇರಲ, ಪಪ್ಪಾಯಿ, ಕಿವಿ, ಪೇರಳೆ ಮತ್ತು ಹಲಸಿನ ಹಣ್ಣುಗಳಾಗಿವೆ.

Mangoes Benefits for Diabetes : Can people with diabetes eat mangoes? Here is the information

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular