ಭಾನುವಾರ, ಏಪ್ರಿಲ್ 27, 2025
Homekarnatakaರಾಜ್ಯದ ಹಲವೆಡೆ ವರುಣನ ಆರ್ಭಟ : ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ

ರಾಜ್ಯದ ಹಲವೆಡೆ ವರುಣನ ಆರ್ಭಟ : ಮುಂದಿನ ಎರಡು ದಿನ ಭಾರೀ ಮಳೆ ಸಾಧ್ಯತೆ

- Advertisement -

ಬೆಂಗಳೂರು : ರಾಜ್ಯದಾದ್ಯಂತ ನಿನ್ನೆ ವರುಣನ ಆಗಮನದಿಂದ ಭೂಮಿಗೆ ತಂಪು ಎರೆದಂತೆ ಆಗಿದೆ. ಕಳೆದ ಒಂದು ವಾರದದಿಂದ ಕೆಲವೆಡೆ ಬಿಸಿಲಿನ ತಾಪಮಾನ ಏರಿಕೆ ಕಂಡಿದ್ದರೆ, ಇನ್ನು ಕೆಲವೆಡೆ ವರುಣನ ಆರ್ಭಟ (Heavy Rainfall in Karnataka)‌ ಜೋರಾಗಿಯೇ ಇತ್ತು. ಅದರಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಹಾಗೆಯೇ ಮಳೆಯಿಂದಾಗಿ ಸಾವುಗಳು ಸಂಭವಿಸಿರುತ್ತದೆ. ಇನ್ನು ಕರಾವಳಿ ಭಾಗಕ್ಕೆ ಬಂದರೆ ತಡರಾತ್ರಿ ಬಂದ ಮಳೆಯಿಂದಾಗಿ ಜನರು ಸಂತಸಗೊಂಡಿದ್ದಾರೆ. ಇನ್ನೂ ಎರಡು ದಿನ ವರುಣಾರ್ಭಟ ಉಂಟಾಗಲಿದೆ ಎನ್ನುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದಲ್ಲಿ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಮಳೆಯಿಂದಾದ ಅವಘಡದಲ್ಲಿ ಐವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ, ನಾರಾಣಿ, ಮುಂಡಾಜೆ, ಕಡಬ ತಾಲೂಕಿನ ಕೆಂಬಾರು, ಕೊಡಗು ಜಿಲ್ಲೆಯ ಮಡಿಕೇರಿ, ಭಾಗಮಂಡಲ, ತಲಕಾವೇರಿ, ಕುಶಾಲನಗರದಲ್ಲಿ ಉತ್ತಮ ಮಳೆ ಆಗಿದೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾವಿ ಸೇರಿದಂತೆ ವಿವಿಧ ತಾಲೂಕಿನಲ್ಲಿ ನಿನ್ನ ಭಾರೀ ಮಳೆಯಾಗಿದ್ದರೇ, ಚಾಮರಾಜನಗರ ಜಿಲ್ಲೆಯ ಹನೂರು ವ್ಯಾಪ್ತಿಯಲ್ಲೂ ಗುಡುಗು ಸಹಿತ ಒಂದು ಗಂಟೆಗೂ ಹೆಚ್ಚು ಕಾಲ ಜೋರು ಮಳೆಯಾಗಿದೆ.

ಸದ್ಯದಲ್ಲೇ ಮುಂಗಾರು ಮಳೆ ಆಗುವ ಸಮಯ ಸಮೀಪ ಇರುವುದರಿಂದ ರೈತರು ವ್ಯವಸಾಯದ ಕಡೆಗೆ ಮುಖ ಮಾಡಿದ್ದಾರೆ. ಹಾಗೆಯೇ ಗೆದ್ದೆ ಕೆಲಸ ಆರಂಭವಾಗುದ್ದರಿಂದ ಮಳೆರಾಯನಿಗಾಗಿ ಕಾಯುತ್ತಿದ್ದಾರೆ. ಮಳೆರಾಯನ ಆಗಮನಕ್ಕಾಗಿ ಕಾಯುತ್ತಿರುವ ರೈತರಿಗೆ ಮಳೆ ಬಂದಾಗ ಗೆದ್ದೆ ಕೆಲಸ ಕಾರ್ಯಗಳನ್ನು ಒಂದೊಂದಾಗಿ ಮಾಡುತ್ತಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ 5 ದಿನಗಳ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನಲ್ಲಿ ಇಂದು ನಾಳೆ ಮಳೇಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಇದನ್ನೂ ಓದಿ : ರಾಜ್ಯದ ರಾಜಧಾನಿಯಲ್ಲಿ ವರುಣನ ಆರ್ಭಟ : ಕಾರು ಮುಳುಗಿ ಯುವತಿ ಸಾವು, ನಾಲ್ವರ ರಕ್ಷಣೆ

ಇದನ್ನೂ ಓದಿ : ಹಿರಿಯ ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಯು.ಆರ್.ಸಭಾಪತಿ ನಿಧನ

ಇದನ್ನೂ ಓದಿ : ಅಕ್ರಮ ಮರಳು ಗಣಿಗಾರಿಕೆ ವಿರುದ್ದ ತುರ್ತು ಕ್ರಮ : ಉಡುಪಿ ತಹಶೀಲ್ದಾರ್ ರವಿ ಎಸ್ ಅಂಗಡಿ ಸೂಚನೆ

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮುಕೂರು, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ಕೊಡುಗು ಜಿಲ್ಲೆಗಳಲ್ಲಿ ಮೊದಲ ಮೂರು ದಿನ ಸಾಧಾರಣ ಮಳೆ ಆರಂಭವಾಗಲಿದೆ. ಮುಂದಿನ ಐದು ದಿನಗಳ ಪೈಕಿ ಕೊನೆಯ ಎರಡು ದಿನ ಈ ಒಳನಾಡಿನ ಜಿಲ್ಲೆಗಳಿಗೆ ಕೊನೆಯ ಎರಡು ದಿನ ವ್ಯಾಪಕ ಮಳೆ ಬರುವ ಸಾಧ್ಯತೆ ಇದೆ. ಇದೇ ವೇಳೆ ಕರಾವಳಿ ಮತ್ತು ಉತ್ತರ ಒಳನಾಡಿನ ಭಾಗದ ಜಿಲ್ಲೆಗಳಲ್ಲಿ ಮಳೆ ಸುರಿಯುವ ಮಾರುತಗಳು ಸಕ್ರಿಯವಾಗಲಿದೆ.

ಇದನ್ನೂ ಓದಿ : ಬೆಳ್ತಂಗಡಿ : ಬೆಂಕಿ ಕೆನ್ನಾಲಗೆಗೆ ತುತ್ತಾದ ಸೂಪರ್‌ ಮಾರ್ಕೆಟ್‌ : ಲಕ್ಷಾಂತರ ರೂ ನಷ್ಟ

ಇದನ್ನೂ ಓದಿ : ಬೆಳ್ತಂಗಡಿ : ಬೆಂಕಿ ಕೆನ್ನಾಲಗೆಗೆ ತುತ್ತಾದ ಸೂಪರ್‌ ಮಾರ್ಕೆಟ್‌ : ಲಕ್ಷಾಂತರ ರೂ ನಷ್ಟ

Heavy Rainfall in Karnataka : Rainfall in many parts of the state: Heavy rainfall is likely for the next two days

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular