CSK vs GT IPL 2023 : ಇಂಡಿಯನ್ ಪ್ರೀಮಿಯರ್ ಲೀಗ್ ( IPL 2023) ರ ಫೈನಲ್‌ನಲ್ಲಿ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸುವ ಮೂಲಕ 5ನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಅಂತಿಮ ಓವರ್‌ನಲ್ಲಿ ರವೀಂದ್ರ ಜಡೇಜಾ 2 ಎಸೆತಗಳಲ್ಲಿ 10 ರನ್ ಬಾರಿಸುವ ಮೂಲಕ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ಗುಜರಾತ್ ತಂಡದ ಆಟಗಾರ ಶುಭಮನ್ ಗಿಲ್ ಹಾಗೂ ವೃದ್ದಿಮಾನ್ ಸಾಹಾ ಉತ್ತಮ ಆರಂಭವೊದಗಿಸಿದ್ರು. ದೀಪಕ್ ಚಹರ್ ಗಿಲ್ ಕ್ಯಾಚ್ ಕೈ ಚೆಲ್ಲಿದ ನಂತರದಲ್ಲಿ ಗಿಲ್ ಹಾಗೂ ಸಾಹ ಸ್ಪೋಟಕ ಆಟಕ್ಕೆ ಮನ ಮಾಡಿದ್ರು. ಆದರೆ ಶುಭಮನ್ ಗಿಲ್ ಆಟ ಕೇವಲ 3 ರನ್‌ಗಳಿಗೆ ಕೊನೆಯಾಯ್ತು. ಗಿಲ್ ಔಟಾಗುತ್ತಿದ್ದಂತೆಯೇ ಕ್ರೀಸ್‌ಗೆ ಆಗಮಿಸಿದ ಸಾಯಿ ಸುದರ್ಶನ್ ಮಂದಗತಿಯಲ್ಲಿ ರನ್ ಗಳಿಸಿದ್ರು. ಆರಂಭದಲ್ಲಿ 12 ಎಸೆತಗಳಲ್ಲಿ ೧೦ರನ್ ಗಳಿಸಿದ್ದ ಸಾಯಿ ಸುದರ್ಶನ್ ನಂತರ 33 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದ್ದಾರೆ. ಇನ್ನೊಂದೆಡೆಯಲ್ಲಿ ವೃದ್ದಿಮಾನ್ ಸಾಹ ಕೂಡ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. 39 ಎಸೆತಗಳನ್ನು ಎದುರಿಸಿದ ವೃದ್ದಿಮಾನ್ ಸಾಹ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 54 ರನ್ ಗಳಿಸಿದ್ರೆ, ಸಾಯಿ ಸುದರ್ಶನ್ ಕೇವಲ 47 ಎಸೆತಗಳಲ್ಲಿ 8 ಬೌಂಡರಿ 6 ಸಿಕ್ಸರ್ ನೆರವಿನಿಂದ ಬರೋಬ್ಬರಿ 96 ರನ್ ಬಾರಿಸಿದ್ರು. ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 20 ರನ್ ಬಾರಿಸುವ ಮೂಲಕ ತಂಡ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು. ಮತೀಶ್ ಪತಿರಣ 44 ರನ್ ನೀಡಿ 2 ವಿಕೆಟ್ ಪಡೆದುಕೊಂಡ್ರೆ ರವೀಂದ್ರ ಜಡೇಜಾ ಹಾಗೂ ದೀಪಕ್ ಚಹರ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
We are not crying, you are 🥹
— IndianPremierLeague (@IPL) May 30, 2023
The Legend continues to grow 🫡#TATAIPL | #Final | #CSKvGT | @msdhoni | @ChennaiIPL pic.twitter.com/650x9lr2vH
215 ರನ್ ಗಳ ಗುರಿಯನ್ನು ಬೆನ್ನತ್ತಲು ಹೊರಟ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮಳೆ ಅಡ್ಡಿಯಾಯಿತು. ಆರಂಭಿಕರಾದ ಋತುರಾಜ್ ಗಾಯಕ್ವಾಡ್ ಹಾಗೂ ಡೆವೋನ್ ಕಾನ್ವೆ ಉತ್ತಮ ಆರಂಭ ವೊದಗಿಸಿದ್ರು. ರುತುರಾಜ್ ಗಾಯಕ್ವಾಡ್ 16 ಎಸೆತಗಳಲ್ಲಿ 26 ರನ್ ಬಾರಿಸಿದ್ರೆ, ಡೇವೋನ್ ಕಾನ್ವೆ 25 ಎಸೆತಗಳಲ್ಲಿ 47 ರನ್ ಸಿಡಿಸಿದ್ದಾರೆ. ನಂತರ ಕ್ರೀಸ್ ಗೆ ಬಂದ ಶಿವಂ ದುಬೆ 21 ಎಸೆತಗಳಲ್ಲಿ 32 ರನ್ ಬಾರಿಸಿದ್ರು, ಇನ್ನು ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ 27 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನೆರವಾದ್ರು. ಸಾಲು ಸಾಲು ವಿಕೆಟ್ ಉದುರುತ್ತಿದ್ದಂತೆಯೇ ಕ್ರೀಸ್‌ಗೆ ಬಂದ ಅಂಬಟಿ ರಾಯಡು 19ರನ್ ಗಳಿಸಿದ್ರೆ, ಮಹೇಂದ್ರ ಸಿಂಗ್ ಧೋನಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದ್ರು. ರವೀಂದ್ರ ಜಡೇಜಾ ಅಂತಿಮ ಹಂತದಲ್ಲಿ 6 ಎಸೆತಗಳಲ್ಲಿ 15 ರನ್ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವನ್ನು ತಂದುಕೊಟ್ರು. ಗುಜರಾತ್ ಟೈಟಾನ್ಸ್ ಪರ ಮೋಹಿತ್ ಶರ್ಮಾ 3ವಿಕೆಟ್ ಹಾಗೂ ನೂರ್ ಅಹ್ಮದ್ 2 ವಿಕೆಟ್ ಪಡೆದುಕೊಂಡ್ರು.
M.O.O.D! 🤗
— IndianPremierLeague (@IPL) May 29, 2023
Ravindra Jadeja 🤝 MS Dhoni#TATAIPL | #Final | #CSKvGT | @imjadeja | @msdhoni pic.twitter.com/uggbDA4sFd
ಆರೆಂಜ್ ಕ್ಯಾಪ್
ಆರೆಂಜ್ ಕ್ಯಾಪ್: ಶುಭಮನ್ ಗಿಲ್ (890 ರನ್)
ಪರ್ಪಲ್ ಕ್ಯಾಪ್
ಪರ್ಪಲ್ ಕ್ಯಾಪ್: ಮೊಹಮ್ಮದ್ ಶಮಿ
ಫೇರ್‌ಪ್ಲೇ ಪ್ರಶಸ್ತಿ
ಫೇರ್‌ಪ್ಲೇ ಪ್ರಶಸ್ತಿ: ಡೆಲ್ಲಿ ಕ್ಯಾಪಿಟಲ್ಸ್
ರಶೀದ್ ಖಾನ್
ಋತುವಿನ ಕ್ಯಾಚ್
ಪಂದ್ಯಾವಳಿಯ ಸುದೀರ್ಘ 6: ಫಾಫ್ ಡು ಪ್ಲೆಸಿಸ್ (115 ಮೀ)
ಶುಭಮನ್ ಗಿಲ್
ಋತುವಿನ ಹೆಚ್ಚಿನ 4 ಸೆ
ತುಂಬಾ ಅಮೂಲ್ಯವಾದ ಆಟಗಾರ
ಋತುವಿನ MVP: ಶುಭಮನ್ ಗಿಲ್
ಗೇಮ್ ಸೀಸನ್ ಚೇಂಜರ್: ಶುಬ್ಮನ್ ಗಿಲ್
ಸ್ಟ್ರೈಕರ್ ಆಫ್ ದಿ ಟೂರ್ನಮೆಂಟ್: ಗ್ಲೆನ್ ಮ್ಯಾಕ್ಸ್‌ವೆಲ್
ಟೂರ್ನಿಯ ಉದಯೋನ್ಮುಖ ಆಟಗಾರ್ತಿ: ಯಶಸ್ವಿ ಜೈಸ್ವಾಲ್
ಪಂದ್ಯದ ಆಟಗಾರ: ಡೆವೊನ್ ಕಾನ್ವೆ
ಪಂದ್ಯದ ಕ್ಯಾಚ್: ಎಂಎಸ್ ಧೋನಿ
ಉದ್ದದ SIX : ಸಾಯಿ ಸುದರ್ಶನ್ (97 ಮೀ)
ಗುಜರಾತ್ ಟೈಟಾನ್ಸ್ ಪ್ಲೇಯಿಂಗ್ XI: ವೃದ್ಧಿಮಾನ್ ಸಹಾ(ಪ), ಶುಬ್ಮನ್ ಗಿಲ್, ಸಾಯಿ ಸುದರ್ಶನ್, ಹಾರ್ದಿಕ್ ಪಾಂಡ್ಯ(ಸಿ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೋಹಿತ್ ಶರ್ಮಾ, ನೂರ್ ಅಹ್ಮದ್, ಮೊಹಮ್ಮದ್ ಶಮಿ
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (w/c), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ
CSK vs GT IPL 2023 chennai Super kings vs Gujarat Titans Ipl Final