ಬುಧವಾರ, ಜೂನ್ 18, 2025
HomeCinemaRihanna Birthday celebration : ಹಿರಣ್ಯನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ : ರಾಜವರ್ಧನ್‌ಗೆ ಯುವನಟಿ ರಿಹಾನಾ...

Rihanna Birthday celebration : ಹಿರಣ್ಯನ ನಾಯಕಿಗೆ ಹುಟ್ಟುಹಬ್ಬದ ಸಂಭ್ರಮ : ರಾಜವರ್ಧನ್‌ಗೆ ಯುವನಟಿ ರಿಹಾನಾ ಜೋಡಿ

- Advertisement -

ಹಿರಿಯ ನಟ ಡಿಂಗ್ರಿ ನಾಗರಾಜ್ ಸುಪುತ್ರ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಹಿರಣ್ಯ (Hiranya movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿರುವ ಸಿನಿತಂಡ ನಾಯಕಿಯನ್ನು (Rihanna Birthday celebration) ಕನ್ನಡ ಸಿನಿರಂಗಕ್ಕೆ ಪರಿಚಯಿಸಿದೆ. ಇದೀಗ ರಾಜವರ್ಧನ್ ಗೆ ಜೋಡಿಯಾಗಿ ಯುವ ನಟಿ ರಿಹಾನಾ ಬಣ್ಣ ಹಚ್ಚಿದ್ದು, ಸಿನಿತಂಡ ಈ ಕುರಿತು ಮಾಹಿತಿಯನ್ನು ನೀಡಿದೆ. ರಿಹಾನಾ ಹುಟ್ಟುಹಬ್ಬದ ದಿನದಂದೇ ನಾಯಕಿ ಪಾತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ರಿಲೀಸ್‌ ಮಾಡಿದ್ದಾರೆ.

ರಿಹಾನಾ ಹುಟ್ಟುಹಬ್ಬದ ಉಡುಗೊರೆಯಾಗಿ ಸಿನಿತಂಡ ಸ್ಪೆಷಲ್ ಪೋಸ್ಟರ್ ಅನಾವರಣ ಮಾಡಿದೆ. ಎಲ್ಲವನ್ನೂ ಕಳೆದುಕೊಂಡಂತೆ ಬಾವುಕಳಾಗಿ ನಿಂತಿರುವ ಪೋಸ್ಟರ್‌ ಸಿನಿಮಾದ ಬಗ್ಗೆ ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ರಿಹಾನಾ ಅಡಿಷನ್‌ ಮೂಲಕ ಸೆಲೆಕ್ಟ್‌ ಆಗಿದ್ದರು. ಹಿರಣ್ಯದಲ್ಲಿ ಇವರದ್ದು ಪವರ್ ಫುಲ್ ಪಾತ್ರ ಆಗಿದೆ. ಸಿನಿಮಾ ಪೂರ್ತಿ ಅಭಿನಯ ಎಮೋಷನ್ ಕ್ಯಾರಿ ಮಾಡುತ್ತಾರೆ ಎಂದು ನಿರ್ದೇಶಕ ಪ್ರವೀಣ್ ಅವ್ಯುಕ್ತ ಹೇಳಿದರು.

ಸಾಕಷ್ಟು ಶಾರ್ಟ್‌ ಮೂವಿಗಳನ್ನು ನಿರ್ದೇಶನ ಮಾಡಿರುವ ಪ್ರವೀಣ್‌ ಅವ್ರ್ಯುಕ್ತ್ ಹಿರಣ್ಯ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್‌, ಅರವಿಂದ ರಾವ್‌, ದಿಲೀಪ್‌ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಇದನ್ನೂ ಓದಿ : Abhishek Ambareesh – Aviva Wedding : ಅಭಿಷೇಕ್ ಅಂಬರೀಶ್ – ಅವಿವಾ ವಿವಾಹ : ಮನೆಗಳಲ್ಲಿ ಸಂಭ್ರಮಾಚರಣೆ

ವೇದಾಸ್‌ ಇನ್ಫಿನಿಟಿ ಪಿಕ್ಚರ್ ಬ್ಯಾನರ್‌ನಲ್ಲಿ ವಿಘ್ನೇಶ್ವರ ಯು. ಹಾಗೂ ವಿಜಯ್‌ ಕುಮಾರ್‌ ಬಿ. ವಿ ಜಂಟಿಯಾಗಿ ಬಂಡವಾಳ ಹೂಡಿ ನಿರ್ಮಿಸುತ್ತಿರುವ ಹಿರಣ್ಯ ಸಿನಿಮಾಕ್ಕೆ ಯೋಗೇಶ್ವರನ್‌ ಆರ್‌. ಛಾಯಾಗ್ರಹಣವಿದೆ. ಸಿನಿಮಾದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ. ಚಿತ್ರೀಕರಣ ಮುಗಿಸಿ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತವಾಗಿರುವ ಹಿರಣ್ಯ ಸಿನಿಮಾವನ್ನು ಆದಷ್ಟು ಬೇಗೆ ತೆರೆಗೆ ತರುವ ಯೋಚನೆಯಲ್ಲಿದೆ ಸಿನಿತಂಡ.

Hiranya Movie Actress Rihanna Birthday celebration First look poster Release

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular