ಸೋಮವಾರ, ಜೂನ್ 16, 2025
HomeCinemaಶಿವಣ್ಣ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ರೆಡಿಯಾದ ಎ.ಹರ್ಷ : ಜುಲೈ 12 ರಂದು ಸರ್ಪೈಸ್ ಕೊಡ್ತಾರಂತೆ...

ಶಿವಣ್ಣ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ರೆಡಿಯಾದ ಎ.ಹರ್ಷ : ಜುಲೈ 12 ರಂದು ಸರ್ಪೈಸ್ ಕೊಡ್ತಾರಂತೆ ನಿರ್ದೇಶಕರು

- Advertisement -

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎ.ಹರ್ಷ ಅವರಿಗೂ ಅಂಜನೇಯನಿಗೂ ಬಿಡದ ನಂಟು. ಹೀಗಾಗಿಯೇ ಹರ್ಷ ಅವರ ಬಹುತೇಕ ಸಿನಿಮಾಗಳ ಹೆಸರು ಕೂಡ ಅಂಜನೇಯನದ್ದೇ ಆಗಿರೋದು ವಿಶೇಷ. ಡಾ.ಶಿವಣ್ಣ ಮತ್ತ ಹರ್ಷ ಕಾಂಬಿನೇಷನಲ್ಲಿ ಈಗಾಗಲೇ ಎರಡು ಸಿನಿಮಾಗಳು ತೆರೆಕಂಡಿದ್ದು, ಎರಡೂ ಸಿನಿಮಾಗಳು ಕೂಡ ಭರ್ಜರಿ ಸಕ್ಸಸ್ ಕಂಡಿದೆ. ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ.

Shivaraj Kumar Bhajarangi E1592898869849

ಹೌದು, ಹಲವು ದಿನಗಳಿಂದಲೂ ಸದ್ದು ಮಾಡ್ತಾ ಇರೋ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಭಜರಂಗಿ -2 ಸಿನಿಮಾದ ಫಸ್ಟ್ ಲುಕ್ ನ್ನು ಶಿವಣ್ಣ ಹುಟ್ಟುಹಬ್ಬಕ್ಕೆ ಭರ್ಜರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ ನಿರ್ದೇಶಕ ಎ.ಹರ್ಷ. ಇದೇ ದಿನ ಭಜರಂಗಿ-2 ಸಿನಿಮಾದಲ್ಲಿ ಬೇರೆ ಕಲಾವಿದರ ಅನೌನ್ಸ್ ಸಹ ಪೋಸ್ಟರ್ ಮೂಲಕ ಆಗಲಿದೆ.

Shivaraj Kumar Bhajrangi 1

ನಿರ್ದೇಶಕ ಹರ್ಷ ಹೇಳುವಂತೆ ಸಿನಿಮಾದಲ್ಲಿ ಶಿವಣ್ಣ ಅವರ ಲುಕ್ ಯಾರು ಊಹಿಸಿರದ ರೀತಿ ಮೂಡಿಬಂದಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡುತ್ತೇವೆ ಎಂದಿರೋದು ಸಿನಿಮಾ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

Alvas1

ಈಗಾಗಲೇ ಒಂದೆರಡು ಪೋಸ್ಟರ್ ನಿಂದ ಸಾಕಷ್ಟು ಹವಾ ಸೃಷ್ಟಿಸಿರೋ ಭಜರಂಗಿ -2 ಸಿನಿಮಾ ಕೆಜಿಎಫ್ ಸಿನಿಮಾವನ್ನೇ ಮೀರಿಸುವಂತಿದೆ ಸಿನಿಮಾದ ಮೇಕಿಂಗ್. ಸಿನಿಮಾದ ಮೇಕಿಂಗ್ ಬಗ್ಗೆ ಸಾಕಷ್ಟು ಮಂದಿ ಈಗಾಗಲೇ ಮಾತನಾಡಿಕೊಳ್ಳುತ್ತಿದ್ದಾರೆ.

Shivaraj Kumar

ಭಜರಂಗಿ -2 ಸಿನಿಮಾಕ್ಕಾಗಿ ಈಗಾಗಲೇ ಬೆಂಗಳೂರು ಪ್ಯಾಲೇಸ್ ಗ್ರೌಂಡ್ ಮತ್ತು ಮೋಹನ್ ಬಿ ಕೇರ್ ಸ್ಟುಡಿಯೋದಲ್ಲಿ ಬಹುವೆಚ್ಚದ ಸೆಟ್ ಹಾಕಿದ್ದು, ಅಲ್ಲಿನ ಕೆಲವೊಂದು ಫೋಟೊಸ್ ಸಹ ಲೀಕ್ ಆಗಿತ್ತು. ಆ ಫೋಟೊಗಳು ನೋಡಿದಾಗ ಎಂಥವರಿಗೂ ವಾವ್ ಅನ್ನಿಸೋದೆ ಇರಲ್ಲ. ಈಗಾಗಲೇ ಭದರಂಗಿ ಮತ್ತು ವಜ್ರಕಾಯ ಹಿಟ್ ನಂತರ ಶಿವಣ್ಣ ಹರ್ಷ ಕಾಂಬಿನೇಷನ್ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡ್ತಿರೋದು ಚಂದನವನದಲ್ಲಿ ಖುಷಿ ತಂದಿದೆ.

Shivaraj Kumar Harsha Bhogendra

ಜಯಣ್ಣ ಮತ್ತ ಭೋಗಣ್ಣ ಬಂಡವಾಳ ಹೂಡಿರೋ ಈ ಸಿನಿಮಾದ ಫಸ್ಟ್ ಲುಕ್ ಅಭಿಮಾನಿಗಳಿಗೆ ಮತ್ತು ಸಿನಿಮಾ ಪ್ರೇಮಿಗಳಿಗೆ ಬಾಡೂಟ ನೀಡುವಲ್ಲಿ ಯಾವುದೇ ಸಂಶಯವಿಲ್ಲ. ಭಜರಂಗಿ -2 ಸಿನಿಮಾ ತಂಡಕ್ಕೆ ನಮ್ ಕಡೆಯಿಂದ ಶುಭಹಾರೈಕೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular