ಸ್ಯಾಂಡಲ್ವುಡ್ನಲ್ಲಿ (Racer Movie) ಇತ್ತೀಚೆಗೆ ಹೊಸ ನಟ-ನಟಿಯರು ಎಂಟ್ರಿ ನೀಡುತ್ತಿದ್ದು, ಹೊಸಬರಿಗೆ ಹೊಸಬರು ಹಣ ಹಾಕಿ ಸಿನಿಮಾ ಮಾಡುತ್ತಿರುವುದು ವಿಶೇಷವಾಗಿದೆ. ನಿರ್ಮಾಪಕ ಹಾಗೂ ನಿರ್ದೇಶಕರು ಆಗಿರುವ ವಿಷ್ಣುಕಾಂತ್ ಪುತ್ರ ಭರತ್ ವಿಷ್ಣುಕಾಂತ್ ಅವರು ರೇಸರ್ ಸಿನಿಮಾ ಮೂಲಕ ನಿರ್ದೇಶನ ಸಾಹಸಕ್ಕೆ ಇಳಿದಿದ್ದಾರೆ. ಈ ಸಿನಿಮಾದಲ್ಲಿ ಬೈಕ್ ರೇಸಿಂಗ್ ಕುರಿತ ನೈಜ ಘಟನೆ ಆಧಾರಿತ ಕಥೆಯನ್ನು ಒಳಗೊಂಡಿದೆ. ಇದೀಗ ಸಿನಿಮಾದ ಹೀರೋಯಿನ್ ಇಂಟ್ರೂಡಕ್ಷನ್ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.
ತೆಲುಗು ಸೀರಿಯಲ್ ಮೂಲಕ ನಟನಾ ವೃತ್ತಿ ಆರಂಭಿಸಿದ್ದ ಅಕ್ಷಿತಾ ಸತ್ಯನಾರಾಯಣ್ ರೇಸರ್ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಮೂಲತಃ ಕನ್ನಡದವರೇ ಆದ ಅಕ್ಷಿತಾ ಮಾಡೆಲ್ ಜಗತ್ತಿಗೆ ಚಿರಪರಿಚಿತರಾಗಿದ್ದಾರೆ. 2020ರ VK ನವತಾರೆ ಕಿರೀಟ ಮುಡಿಗೇರಿಸಿಕೊಂಡಿರುವ ಅವರೀಗ ನಾಯಕಿಯಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಮೊದಲೇ ಹೇಳಿದಂತೆ ರೇಸರ್, ಗ್ಯಾರೇಜ್ನಲ್ಲಿ ನಡೆದ ನೈಜ ಘಟನೆ ಇಟ್ಟುಕೊಂಡು ಅದಕ್ಕೆ ಸಿನಿಮಾ ಟಚ್ ಕೊಟ್ಟು ಕಥೆ ಬರೆಯಲಾಗಿದೆ. ಅದಕ್ಕಾಗಿ ನಾಯಕಿ ಅಕ್ಷಿತಾ ಸತ್ಯನಾರಾಯಣ್ ಬೈಕ್ ರೇಸ್ ಕಲಿತಿದ್ದಾರೆ. ದುಬಾರಿ ಬೆಲೆ ಬೈಕ್ ಏರಿ ಅಕ್ಷಿತಾ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿರುವ ಮೋಷನ್ ಪೋಸ್ಟರ್ನಿಂದ ಸಿನಿಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಅಂದ ಹಾಗೇ ಅಕ್ಷಿತಾ ಸಿನಿಮಾದಲ್ಲಿ ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ : Actress Usha arrest : ಪ್ರಣಯ, ದೋಖಾ ಕನ್ನಡದ ಖ್ಯಾತ ನಟಿ ಉಷಾ ಅರೆಸ್ಟ್
ಕಳೆದ ಜನವರಿಯಲ್ಲಿ ಸೆಟ್ಟೇರಿದ್ದ ರೇಸರ್ ಸಿನಿಮಾದ 35ರಷ್ಟು ಭಾಗ ಶೂಟಿಂಗ್ ಕಂಪ್ಲೀಟ್ ಆಗಿದೆ. ಇದೇ ತಿಂಗಳಾತ್ಯಂತಕ್ಕೆ ಹಾಡುಗಳ ಶೂಟಿಂಗ್ ನಡೆಯಲಿದೆ. ಭಾಯ್ ಎಂಬ ದೊಡ್ಡ ಪಾತ್ರಕ್ಕಾಗಿ ಮಲಯಾಳಂ, ಕನ್ನಡದ ಇಬ್ಬರು ದೊಡ್ಡ ಸ್ಟಾರ್ ಗಳನ್ನು ಅಪ್ರೋಚ್ ಮಾಡಲಾಗಿದೆ. ಸಂದೇಶ್ ಪ್ರಸನ್ನ ನಾಯಕನಾಗಿ ನಟಿಸುತ್ತಿದ್ದು, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ, ಬಾಲ ರಾಜ್ವಾಡಿ, ಕಾಮಿಡಿ ಕಿಲಾಡಿ ಸೂರಜ, ಸ್ವಾತಿ ಸೇರಿದಂತೆ ಹಲವು ಕಲಾವಿದರು ಸಿನಿಮಾದ ತಾರಾಬಳಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ. ಇನ್ನು ಮೈಸೂರು ಸ್ವಾಮಿ ಛಾಯಾಗ್ರಹಣ ಸಿನಿಮಾಕ್ಕಿದೆ. ಭರತ್ ವಿಷ್ಣುಕಾಂತ್ ನಿರ್ದೇಶನದ ಜೊತೆಗೆ ಭರತ್ ಫಿಲಂಸ್ ನಡಿ ತಾವೇ ರೇಸರ್ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
Racer Movie: Actress Akshitha Satyanarayan rode an expensive bike in Racer movie