ಉಡುಪಿ : Udupi weather Report : ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಕಣ್ಣಾಮುಚ್ಚಾಲೆಯಾಟ ಆಡುತ್ತಿದೆ. ಮುಂಗಾರು ಆಗಮವಾಗಿದ್ದರೂ ಕೂಡ ಮಳೆ ಸರಿಯಾದ ಪ್ರಮಾಣದಲ್ಲಿ ಸುರಿಯುತ್ತಿಲ್ಲ. ಆದರೆ ಮುಂದಿನ ನಾಲ್ಕು ದಿನಗಳಲ್ಲಿ ಭಾರೀ ಮಳೆಯಾಗುವ ಕುರಿತು ಉಡುಪಿ ಜಿಲ್ಲಾಡಳಿತ ಮಾಹಿತಿಯನ್ನು ನೀಡಿದೆ. ಜೂನ್ 25 ರಂದು ಭಾರೀ ಮಳೆ ಸುರಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಇಂದಿನಿಂದ ಜೂನ್ ೨೪ರ ವರೆಗೆ ಉಡುಪಿ ಜಿಲ್ಲೆಯಲ್ಲಿ ಹಗುರ/ ಸಾಧಾರಣ ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ಗರಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಸೆಲ್ಸಿಯಸ್ ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕನಿಷ್ಠ ಉಷ್ಣಾಂಶ 25.7 ಡಿಗ್ರಿ ಸೆಲ್ಸಿಯಸ್ ಇದ್ದು, ಗರಿಷ್ಠ ಉಷ್ಣಾಂಶ 32.6 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಉಡುಪಿ ಜಿಲ್ಲೆಯಲ್ಲಿ ನಿನ್ನೆ ಸರಾಸರಿ 3.9 ಮಿ.ಮೀ. ಮಳೆ ಸುರಿದೆ. ಅದ್ರಲ್ಲೂ ಕಾಪುವಿನಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದೆ. ಕಾಪುವಿನಲ್ಲಿ 1.8 ಮಿ.ಮೀ ಮಳೆಯಾಗಿದ್ದರೆ, ಹೆಬ್ರಿಯಲ್ಲಿ 9.7 ಮಿ.ಮೀ, ಬೈಂದೂರು 3.2 ಮಿ.ಮೀ., ಕುಂದಾಪುರ 2.7 ಮೀ.ಮೀ, ಬ್ರಹ್ಮಾವರ 2.4 ಮಿ.ಮೀ, ಉಡುಪಿ 1.7 ಮೀ.ಮೀ ಮಳೆಯಾಗಿದ್ದರೆ, ಕಾರ್ಕಳದಲ್ಲಿ ಅತೀ ಕಡಿಮೆ 0.8 ಮೀ.ಮೀ. ಮಳೆಯಾಗಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಗಂಟೆಗೆ 40 ರಿಂದ 45 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ.
ಜಿಲ್ಲೆಯಾದ್ಯಂತ ಮಳೆ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗಿದ್ದು, ಅಗ್ನಿಶಾಮಕ, ಗೃಹ ರಕ್ಷಕ ದಳದಲ್ಲಿ ಒಟ್ಟು 8 ಬೋಟ್ ಗಳಿದ್ದು, ಬೈಂದೂರು, ಮಲ್ಪೆ, ಕುಂದಾಪುರ, ಕಾರ್ಕಳ ಹಾಗೂ ಉಡುಪಿಯ ಅಗ್ನಿಶಾಮಕ ಕಚೇರಿಗಳಲ್ಲಿ 7 ಬೋಟುಗಳು ಲಭ್ಯವಿದ್ದು, ಗೃಹರಕ್ಷಕ ದಳದ ಬ್ರಹ್ಮಾವರ ಹಾಗೂ ಪಡುಬಿದ್ರಿಯಲ್ಲಿ ತಲಾ 1 ಬೋಟ್ ಜೊತೆಗೆ 7 ಜನರ ತಂಡವನ್ನು ಸಜ್ಜುಗೊಳಿಸಳಾಗಿದೆ. ಗೃಹ ರಕ್ಷಕದಳದಿಂದ ಸಮುದ್ರ ತೀರದ ಪ್ರದೇಶಗಳಲ್ಲಿ 10 ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮಂಗಳೂರು ಕೇಂದ್ರ ಕಚೇರಿಯಲ್ಲಿ 100 ಸಿಬ್ಬಂದಿಗಳನ್ನು ಒಳಗೊಂಡಿರುವ ಎಸ್‌ಡಿಆರ್‌ಎಫ್ ತಂಡ ಹಾಗೂ 25 ಸಿಬ್ಬಂದಿಗಳನ್ನು ಒಳಗೊಂಡಿರುವ ಎನ್‌ಡಿಆರ್‌ಎಫ್ ತಂಡವನ್ನು ನಿಯೋಜಿಸಲಾಗಿದೆ. ಉಡುಪಿ ಜಿಲ್ಲೆಯ ಕಂಟ್ರೋಲ್ ರೂಮ್ ನಂಬ್ರ : 1077/0820=2574802 ಜಿಲ್ಲಾ ಅಗ್ನಿಶಾಮಕ ಕಚೇರಿ : 0820-2520333 ಜಿಲ್ಲಾಗೃಹರಕ್ಷಕ ದಳ : 0820 -2533650
ಇದನ್ನೂ ಓದಿ : Benefits of eating eggs : ಸಂಜೆ ವೇಳೆ ಮೊಟ್ಟೆ ತಿನ್ನುವುದು ಹೆಚ್ಚು ಸೂಕ್ತ ಯಾಕೆ ?
ಇದನ್ನೂ ಓದಿ : ಇಂದಿರಾ ಕ್ಯಾಂಟೀನ್ ಊಟದ ಪಟ್ಟಿ ಬದಲಾವಣೆ : ಹೊಸ ಮೆನು ಅಲ್ಲಿ ಏನೇನಿದೆ ?
Udupi weather Report Heavy rain in June 25, yellow alert announced