ಕೇರಳ : ಎಚ್1ಎನ್1 ಸೋಂಕಿನಿಂದ (H1N1 infection) 13 ವರ್ಷದ ಬಾಲಕನೋರ್ವ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಕೇರಳದ ಸಮೀಪದ ಕುಟ್ಟಿಪ್ಪುರಂ ಬಳಿಯ ಪೈಂಕನ್ನೂರು ನಿವಾಸಿ ಎಂದು ತಿಳಿದು ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳು ಮೃತ ಬಾಲಕನ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೇ ಗ್ರಾಮದಲ್ಲೆಡೆ ಇದೀಗ ತೀವ್ರ ಮುನ್ನೆಚ್ಚರಿಕೆಯನ್ನು ಕೈಗೊಳ್ಳಲಾಗುತ್ತಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಆರ್.ರೇಣುಕಾ ಅವರು ಗುರುವಾರ (ಜೂನ್ 22) ಎಚ್1ಎನ್1 ವೈರಸ್ ಸೋಂಕಿನಿಂದ ಸಾವು ಸಂಭವಿಸಿದೆ ಎಂದು ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ. ಎಚ್1ಎನ್1 ಜ್ವರದ ವಿರುದ್ಧ ಸಾರ್ವಜನಿಕರು ಜಾಗೃತರಾಗಬೇಕು ಎಂದು ಅವರು ಮನವಿ ಮಾಡಿದರು. ಎಚ್1ಎನ್1 ಅಲ್ಲದೆ, ಡೆಂಗ್ಯೂ ಮತ್ತು ಲೆಪ್ಟೊಸ್ಪೈರೋಸಿಸ್ ವಿರುದ್ಧವೂ ಜನರು ಜಾಗರೂಕರಾಗಿರಬೇಕು ಎಂದಿದ್ದಾರೆ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿರುವ ನಡುವಲ್ಲೇ ಇದೀಗ ಹಂದಿಜ್ವರ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.
ಏನಿದು ಎಚ್1ಎನ್1 (ಹಂದಿಜ್ವರ) ?
ಎಚ್1ಎನ್1 ಅನ್ನು ಸಾಮಾನ್ಯವಾಗಿ ಹಂದಿಜ್ವರ ಎಂದು ಕರೆಯಲಾಗುತ್ತದೆ. ಜ್ವರಕ್ಕೆ ತುತ್ತಾದ ಮೂರು ದಿನಗಳ ನಂತರ ರೋಗಾಣುವನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ೭-೮ ದಿನಗಳ ವರೆಗೆ ಮನುಷ್ಯ ಮಾಮೂಲಿಯಾಗುತ್ತಾನೆ. ಆದರೆ ಸಾಮಾನ್ಯ ಜ್ವರ ಎಂದು ನಿರ್ಲಕ್ಷ್ಯ ತೋರಿದ್ರೆ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆಯಿದೆ. ಈ ಜ್ವರ ಬಹುಬೇಗನೇ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ.
ಹಂದಿ ಜ್ವರಕ್ಕೆ ತುತ್ತಾದ ವ್ಯಕ್ತಿಗೆ ಸಾಮಾನ್ಯವಾಗಿ ಜ್ವರ, ಭೇಧಿ, ಶೀತ, ಗಂಟಲು ನೋವು, ತಲೆನೋವು, ದೇಹದಲ್ಲಿ ಬಳಿಕೆಯ ಜೊತೆಗೆ ಇತರ ಜ್ವರದ ಲಕ್ಷಣಗಳಾದ ಕೆಮ್ಮು, ವಾಂತಿ ಕಾಣಿಸಿಕೊಳ್ಳುತ್ತದೆ. ದೇಕ್ಕೆ ಈ ಸೋಂಕು ತಗುಲಿದ ಮೂರರಿಂದ ಐದು ದಿನಗಳ ವರೆಗೆ ರೋಗಾಣು ಅಭಿವೃದ್ದಿಯನ್ನು ಹೊಂದಿ ನಂತರ ಹತ್ತು ದಿನಗಳ ಬಳಿಕ ರೋಗಿ ಇತರರಿಗೆ ರೋಗವನ್ನು ಹರಡಲಿದ್ದಾನೆ.
ಇದನ್ನೂ ಓದಿ : Submarine explosion : ಟೈಟಾನಿಕ್ ವೀಕ್ಷಣೆಗೆ ತೆರಳಿದ್ದ ಜಲಾಂತರ್ಗಾಮಿ ನೌಕೆ ಸ್ಫೋಟ, 5 ಸಾವು
ಇದನ್ನೂ ಓದಿ : Kaukradi PDO Mahesh G.N. : ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಕೌಕ್ರಾಡಿ ಪಿಡಿಒ
ಎಚ್1ಎನ್1 ಇನ್ಫ್ಲುಯೆನ್ಸ ವೈರಸ್ಗಳಿಂದ ಕಾಣಿಸಿಕೊಳ್ಳುತ್ತದೆ. ಹಂದಿಜ್ವರವನ್ನು ಸಾಮಾನ್ಯ ತಪಾಸಣೆಯ ಮೂಲಕ ಪತ್ತೆಹಚ್ಚಲು ಸಾಧ್ಯವಿಲ್ಲ. ಮೂಗಿನ ಸ್ರಾವ, ಉಗುಳು, ಉಸಿರಾಟದ ಅಂಶಗಳ ಮಾದರಿಯನ್ನು ಪರೀಕ್ಷೆ ಒಳಪಡಿಸುವ ಮೂಲಕ ಹಂದಿಜ್ವರವನ್ನು ಪತ್ತೆ ಹೆಚ್ಚಬಹುದಾಗಿದೆ. ಹಂದಿಜ್ವರವನ್ನು ಆರಂಭಿಕ ಹಂತದಲ್ಲಿ ಪತ್ತೆ ಹೆಚ್ಚಿದ್ರೆ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ. ಆದರೆ ನಿರ್ಲಕ್ಷ್ಯ ವಹಿಸಿದ್ರೆ ಪ್ರಾಣಕ್ಕೆ ಕುತ್ತು ಬರಲಿದೆ.
H1N1 infection: A 13-year-old boy died of H1N1 infection