ಸೋಮವಾರ, ಏಪ್ರಿಲ್ 28, 2025
HomeCinemaKorean singer choi sung bong : 33 ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ...

Korean singer choi sung bong : 33 ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡ ಪಾಪ್ ತಾರೆ ಚೋಯ್ ಸುಂಗ್-ಬಾಂಗ್

- Advertisement -

ದಕ್ಷಿಣ ಕೊರಿಯಾ : (Korean singer choi sung bong) ಒಂದು ಕಾಲದಲ್ಲಿ ಭರವಸೆಯ ದಕ್ಷಿಣ ಕೊರಿಯಾದ ಪಾಪ್ ತಾರೆ ಚೋಯ್ ಸುಂಗ್-ಬಾಂಗ್ ಅವರು 33 ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿತ್ತು. ಆದರೆ ಸಿಯೋಲ್‌ನಲ್ಲಿರುವ ಅವರ ಮನೆಯಲ್ಲಿ ಪೊಲೀಸರು ಅವರ ಮೃತ ದೇಹವನ್ನು ವಶಪಡೆದುಕೊಂಡಿದ್ದಾರೆ. ಹೆಸರಾಂತ ಪಾಪ್ ತಾರೆ ಚೋಯ್ ಸುಂಗ್-ಬಾಂಗ್ ಸಾವು ಅಭಿಮಾನಿಗಳಿಗೆ ಆಘಾತವನ್ನು ತಂದಿದೆ.

ಆತ್ಮಹತ್ಯೆಗೂ ಒಂದು ದಿನ ಮೊದಲೇ ಅವರು ಯೂಟ್ಯೂಬ್‌ಗೆ ದ್ವೇಷಪೂರಿತ ಹೇಳಿಕೆಯ ವಿಡಿಯೋವೊಂದನ್ನು ಅಪ್ಲೋಡ್‌ ಮಾಡಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಲ್ಲದೇ ಚೋಯ್ ಸುಂಗ್-ಬಾಂಗ್ ತನ್ನ ಹೇಳಿಕೆಯಲ್ಲಿ ನನ್ನ ಮೂರ್ಖತನದ ತಪ್ಪಿನಿಂದ ಬಳಲುತ್ತಿರುವ ಎಲ್ಲರಿಗೂ ಕ್ಷಮೆಯಾಚಿಸಿದ್ದಾರೆ. ಚೋಯ್ ಸುಂಗ್-ಬಾಂಗ್ ಅವರಿಗೆ ಕ್ಯಾನ್ಸರ್‌ ಹಗರಣ ಕಳಂಕ ತಂದಿತ್ತು.

ಇದನ್ನೂ ಓದಿ : Ram charan teja Upasana Kamineni : ಮಗುವಿನ ಜೊತೆ ಆಸ್ಪತ್ರೆ ಮುಂದೆ ಪೋಸ್‌ ಕೊಟ್ಟ ರಾಮ್ ಚರಣ್, ಉಪಾಸನಾ ಕಾಮಿನೇನಿ

ಇದನ್ನೂ ಓದಿ : Rashmika Mandanna : ಮ್ಯಾನೇಜರ್ ನನಗೆ ಮೋಸ ಮಾಡಿಲ್ಲ ಎಂದ ನಟಿ ರಶ್ಮಿಕಾ ಮಂದಣ್ಣ

ಕೊರಿಯಾಸ್ ಗಾಟ್ ಟ್ಯಾಲೆಂಟ್” ನ 2011 ರ ಋತುವಿನಲ್ಲಿ ಚೋಯ್ ತನ್ನ ಆಕರ್ಷಕ ಪ್ರದರ್ಶನಗಳ ಮೂಲಕ ಖ್ಯಾತಿಗೆ ಪಡೆದಿದ್ದರು. ಅಲ್ಲಿ ಎನ್ನಿಯೋ ಮೊರಿಕೋನ್ ಅವರ “ನೆಲ್ಲಾ ಫ್ಯಾಂಟಸಿಯಾ” ಅವರ ನಿರೂಪಣೆಯು ವೀಕ್ಷಕರನ್ನು ಮೂಕಸ್ಮಿತರನ್ನಾಗಿಸಿತ್ತು. ಅಂತಿಮ ಸ್ಪರ್ಧೆಯಲ್ಲಿ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದರು.ಚೋಯ್ ಅವರ ಭಾವನಾತ್ಮಕ ಅಭಿನಯದ ವೀಡಿಯೊ ವೈರಲ್‌ ಆಗಿದೆ.

ಅವರ ವಿಡಿಯೋ ಯೂಟ್ಯೂಬ್‌ನಲ್ಲಿ 21 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಮಹತ್ವಾಕಾಂಕ್ಷಿ ಗಾಯಕನನ್ನು ಹೊಗಳಿದ ಜಸ್ಟಿನ್ ಬೈಬರ್‌ನಂತಹ ಅಂತರರಾಷ್ಟ್ರೀಯ ತಾರೆಗಳಿಂದ ಗಮನ ಸೆಳೆಯಿತು. 2021 ರಲ್ಲಿ ಅವರು ಸುಳ್ಳು ಮಾಹಿತಿಯನ್ನು ನೀಡಿ ಸಾರ್ವಜನಿಕರಿಗೆ ವಂಚನೆ ಮಾಡಿದ್ದರು. ಇದೀಗ ಚೋಯ್ ಸುಂಗ್-ಬಾಂಗ್ ಸಾವಿನ ಸುದ್ದಿ ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದೆ.

Korean singer choi sung bong : Pop star Choi Sung-bong met a tragic end at the age of 33

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular