ಭಾನುವಾರ, ಏಪ್ರಿಲ್ 27, 2025
HomeCinemaNimmellara Aashirvada : ಜುಲೈ 21ಕ್ಕೆ ತೆರೆಗೆ ಬರ್ತಿದೆ ಹೊಸಬರ 'ನಿಮ್ಮೆಲ್ಲರ ಆರ್ಶೀರ್ವಾದ' ಸಿನಿಮಾ

Nimmellara Aashirvada : ಜುಲೈ 21ಕ್ಕೆ ತೆರೆಗೆ ಬರ್ತಿದೆ ಹೊಸಬರ ‘ನಿಮ್ಮೆಲ್ಲರ ಆರ್ಶೀರ್ವಾದ’ ಸಿನಿಮಾ

- Advertisement -

ಕನ್ನಡ ಸಿನಿರಂಗದಲ್ಲಿ ಹೊಸಬರ ಆಗಮನದಿಂದ ಹೊಸತನದಿಂದ ಕೂಡಿದ ಸಿನಿಮಾಗಳು ಒಂದರ ಹಿಂದೆ ಮತ್ತೊಂದು ಎನ್ನುವಂತೆ ತೆರೆ ಕಾಣುತ್ತಿದೆ. ಇದೀಗ ಅದರ ಮುಂದುವರೆದ ಭಾಗವಾಗಿ ರೂಪಗೊಂಡಿರುವ ಸಿನಿಮಾವೇ ನಿಮ್ಮೆಲ್ಲರ ಆಶೀರ್ವಾದ (Nimmellara Aashirvada) ಆಗಿದೆ. ಈ ಸಿನಿಮಾವು ವರುಣ್ ಸಿನಿ ಕ್ರಿಯೇಷನ್ ಮೊದಲ ಪ್ರಯತ್ನದಿಂದ ಬಿಡುಗಡೆಗೆ ತಯಾರಾಗಿದೆ. ವಿಶೇಷವೆನೆಂದರೆ ಯುವ ಸಿನಿ ಸಿನಿಮೋತ್ಸಾಹಿಗಳೇ ಸೇರಿಕೊಂಡು ತಯಾರಿಸಿರುವ ಸಿನಮಾವಾಗಿದ್ದು, ನಿಮ್ಮೆಲ್ಲರ ಆಶೀರ್ವಾದ ಜುಲೈ 21ಕ್ಕೆ ರಾಜ್ಯಾದ್ಯಂತ ತೆರೆಗೆ ಅಪ್ಪಳಿಸಲಿದೆ. ಹೀಗಾಗಿ ಸಿನಿರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ವರುಣ್ ಹೆಗ್ಡೆ ಈ ಸಿನಿಮಾ ನಿರ್ಮಾಣ ಮಾಡಿದ್ದು, ಇದು ಇವರ ಮೊದಲ ಕನಸಾಗಿದೆ. ಈ ಬಗ್ಗೆ ಸಿನಿತಂಡ ಮಾಧ್ಯಮದವರೊಟ್ಟಿಗೆ ಒಂದಷ್ಟು ವಿಷಯವನ್ನು ಹಂಚಿಕೊಂಡಿದೆ.

ನಿರ್ಮಾಪಕರಾದ ವರುಣ್ ಹೆಗ್ಡೆ ಮಾತನಾಡಿ, ನನ್ನ ಸ್ನೇಹಿತ ಕತೆ ಬರೆಯುತ್ತಿದ್ದ, ಕತೆ ಕೇಳಿ ಖುಷಿ ಆಯ್ತು. ಕೊರೋನಾ ಬಂದು ಎಲ್ಲಾ ಜೀವನದ ಮೇಲೆ ಪರಿಣಾಮ ಬೀರಿತು. ಜನರಿಗೆ ಎಂಟರ್ಟೈನ್ಮೆಂಟ್ ಈ ಸಿನಿಮಾ ಹಾಸ್ಯಮಯದ ರೀತಿಯಲ್ಲಿ ಬರೆಯಲಾಗಿದೆ. ಈ ಸಿನಿಮಾವನ್ನು ಒಂದೊಳ್ಳೆ ಟೈಮ್ ಗೆ ತಂದು ಒಪ್ಪಿಸಬೇಕು ಎಂದುಕೊಂಡಿದ್ದೆವು. ಇದೊಂದು ಫ್ಯಾಮಿಲಿ ಎಂಟರ್ ಟೈನರ್. ನನ್ನ ಹಾಗು ನಿರ್ದೇಶಕನ ಸ್ನೇಹಕ್ಕಿಂತ ಕತೆ ನನಗೆ ಇಷ್ಟವಾಯ್ತು. ಹೀಗಾಗಿ ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ಮಾಡಿದ್ದೇನೆ.

ನಿರ್ದೇಶಕ ರವಿಕಿರಣ್‌ ಮಾತನಾಡಿ, ಸುಂದರ-ಸರಳ ಕತೆಯನ್ನು ಎಣೆದಿದ್ದೇವೆ. ಪ್ರತಿಯೊಬ್ಬರಿಗೂ ಸಿನಿಮಾ ಇಷ್ಟಪಡಬೇಕು. ಅರ್ಥ ಮಾಡಿಕೊಳ್ಳಬೇಕು ಎಂಬ ರೀತಿಯಲ್ಲಿ ಸಿನಿಮಾ ಮಾಡಿದ್ದೇವೆ. ಇತ್ತೀಚೆಗಿನ ವರ್ಷಗಳಲ್ಲಿ ತುಂಬಾ ಜಾನರ್ ಗಳ ಬಗ್ಗೆ ಯೋಚನೆ ಮಾಡುತ್ತಿದ್ದೆ. ಫ್ಯಾಮಿಲಿ ಡ್ರಾಮಾ ಇದ್ದಾವೆ. ಆದ್ರೆ ಮೊದಲಿನಿಂದ ಕೊನೆತನಕ ಸಿಂಪಲ್ ಆಗಿ ಎಂಟರ್ ಟೈನ್ ಡ್ರಾಮಾಗಳು ಇತ್ತೀಚೆಗೆ ಕಡಿಮೆಯಾಗಿವೆ ಎಂದು ಈ ಕತೆ ಬರೆದಿದ್ದೇವೆ. ಈಗ ಸಿನಿಮಾ ರಿಲೀಸ್ ಹಂತದಲ್ಲಿದೆ. ಇಡೀ ಫ್ಯಾಮಿಲಿ ಕುಳಿತುಕೊಂಡು ನೋಡುವ ಸಿನಿಮಾ ಇದಾಗಿದ್ದು, ಇದೇ ಜುಲೈ 21ಕ್ಕೆ ತೆರೆಗೆ ಬರಲಿದೆ. ಈ ಸಿನಿಮಾದ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಹೇಳಿದರು.

ಕೌಟುಂಬಿಕ ಕಥಾಹಂದರದ ನಿಮ್ಮೆಲ್ಲರ ಆಶೀರ್ವಾದ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕಿನ ದಿನಚರಿಯನ್ನು ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಈ ಸಿನಿಮಾದ ಮೂಲಕ ಪ್ರತೀಕ್‌ ಶೆಟ್ಟಿ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು, ಭಿನ್ನ ಸಿನಿಮಾ ಖ್ಯಾತಿಯ ಪಾಯಲ್‌ ರಾಧಾಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಎಂ. ಎನ್‌.ಲಕ್ಷ್ಮೀದೇವಿ, ಅರವಿಂದ ಬೋಳಾರ್‌, ಗೋವಿಂದೇಗೌಡ, ಸ್ವಾತಿ ಗುರುದತ್‌, ದಿನೇಶ್‌ ಮಂಗಳೂರು ಸೇರಿದಂತೆ ಹಿರಿಯ ಹಾಗೂ ಅನುಭವಿ ತಾರಾಂಗಣ ಸಿನಿಮಾದಲ್ಲಿದೆ.

ಇದನ್ನೂ ಓದಿ : Yash : ಜಪಾನಿ ಭಾಷೆಯಲ್ಲಿ ಮಾತನಾಡಿದ ರಾಕಿಂಗ್‌ ಸ್ಟಾರ್‌ ಯಶ್‌ ಕಾರಣವೇನು ಗೊತ್ತಾ ?

ಇದನ್ನೂ ಓದಿ : Project K : ಅಮೇರಿಕಾದಲ್ಲಿ ನಟ ಪ್ರಭಾಸ್‌ ಅಭಿನಯದ ಪ್ರಾಜೆಕ್ಟ್ ಕೆ ಟ್ರೇಲರ್‌ ರಿಲೀಸ್‌

ನಿಮ್ಮೆಲ್ಲರ ಆಶೀರ್ವಾದ ಸಿನಿಮಾಗೆ ಯುವ ನಿರ್ದೇಶಕ ರವಿಕಿರಣ್‌ ಆಕ್ಷನ್ ಕಟ್ ಹೇಳಿದ್ದು, ಸರವಣನ್‌ ಜಿ.ಎನ್‌.ಛಾಯಾಗ್ರಹಣ, ರಘು ನಿಡುವಳ್ಳಿ ಡೈಲಾಗ್, ರೂಪೇಂದ್ರ ಆಚಾರ್‌ ಕಲಾ ನಿರ್ದೇಶನ, ಸುನಾದ್‌ ಗೌತಮ್‌ ಸಂಗೀತ ಮತ್ತು ವಿವೇಕ್‌ ಚಕ್ರವರ್ತಿ ಹಿನ್ನೆಲೆ ಸಂಗೀತ, ಸುರೇಶ್‌ ಆರುಮುಗಂ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಕರಾವಳಿಯ ವಿವಿಧ ಭಾಗಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಈಗಾಗಲೇ ಒಂದಷ್ಟು ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ನಿಮ್ಮೆಲ್ಲರ ಆಶೀರ್ವಾದ ಸಿನಿಮಾ ಇದೇ ತಿಂಗಳು 21 ರಾಜ್ಯಾದ್ಯಂತ ತೆರೆಗಪ್ಪಳಿಸಲಿದೆ.

Nimmellara Aashirvada: Newcomer Nimmellara Aashirvada will hit the screens on July 21.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular