ಬುಧವಾರ, ಏಪ್ರಿಲ್ 30, 2025
HomeCinemaGhost Movie : ನಿರ್ದೇಶಕ ಶ್ರೀನಿ ಹುಟ್ಟುಹಬ್ಬ : ಘೋಸ್ಟ್‌ ಸಿನಿಮಾದ ಬಿಗ್‌ ಅಪ್‌ಡೇಟ್‌ ಕೊಟ್ಟ...

Ghost Movie : ನಿರ್ದೇಶಕ ಶ್ರೀನಿ ಹುಟ್ಟುಹಬ್ಬ : ಘೋಸ್ಟ್‌ ಸಿನಿಮಾದ ಬಿಗ್‌ ಅಪ್‌ಡೇಟ್‌ ಕೊಟ್ಟ ಸಿನಿತಂಡ

- Advertisement -

ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅಭಿನಯದ ಘೋಸ್ಟ್‌ ಸಿನಿಮಾ (Ghost Movie) ಬಿಡುಗಡೆಗೆ ಸಜ್ಜಾಗಿದೆ. ಸದಾ ಯುವಕರಂತೆ ಆಕ್ಟಿವ್‌ ಆಗಿರುವ ನಟ ಶಿವ ರಾಜ್‌ಕುಮಾರ್‌ ಈ ಸಿನಿಮಾಕ್ಕೆ ನಿರ್ದೇಶಕ ಶ್ರೀನಿ ನಿರ್ದೇಶಿಸುತ್ತಿದ್ದು, ಸಂದೇಶ್‌ ನಾಗರಾಜ್‌ ಅವರು ನಿರ್ಮಾಣ ಹೊಣೆ ಹೊತ್ತಿದ್ದಾರೆ. ಸದ್ಯ ನಿರ್ದೇಶಕ ಶ್ರೀನಿ ಹುಟ್ಟುಹಬ್ಬದಂದು ಘೋಸ್ಟ್‌ ಸಿನಿಮಾದ ಅಪ್‌ಡೇಟ್‌ನ್ನು ಹಂಚಿಕೊಂಡಿದೆ.

ಘೋಸ್ಟ್‌ ಸಿನಿಮಾದಲ್ಲಿ ವಿಭಿನ್ನ ಹಿನ್ನಲೆ ಸಂಗೀತ ಹಾಗೂ ಶಿವ ರಾಜ್‌ಕುಮಾರ್‌ ಲುಕ್‌ನಿಂದಾಗಿ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಹೀಗಾಗಿ ಶಿವಣ್ಣ ಅವರ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷಕರು ಘೋಸ್ಟ್‌ ಸಿನಿಮಾ ಯಾವಾಗ ರಿಲೀಸ್‌ ಆಗಲಿದೆ ಎಂದು ಎದುರು ನೋಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಶಿವಣ್ಣ ಹುಟ್ಟುಹಬ್ಬದಂದು ಈ ಸಿನಿಮಾದ ವಿಶೇಷ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಇನ್ನಷ್ಟು ಖುಷಿಗೆ ಸಿನಿತಂಡ ತಯಾರಿ ನಡೆಸಿದೆ.

ಇಂದು ನಿರ್ದೇಶಕ ಶ್ರೀನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಘೋಸ್ಟ್‌ ಸಿನಿಮಾದ ಬಗ್ಗೆ ಹೊಸ ಅಪ್‌ಡೇಟ್‌ ಹಂಚಿಕೊಂಡಿದ್ದಾರೆ. ಬಿಗ್‌ ಡ್ಯಾಡಿ ಪೋಸ್ಟರ್‌ನ್ನು ಹಂಚಿಕೊಂಡಿರುವ ಶ್ರೀನಿ ನಟ ಶಿವ ರಾಜ್‌ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ವಿಡಿಯೊವೊಂದನ್ನು ಬಿಡುಗಡೆ ಮಾಡಲಿದ್ದೇವೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಇದೇ ತಿಂಗಳು 12ರಂದು ನಟ ಶಿವ ರಾಜ್‌ಕುಮಾರ್‌ ಹುಟ್ಟುಹಬ್ಬವಿದೆ. ನಟ ಶಿವ ರಾಜ್‌ಕುಮಾರ್‌ 62ನೇ ವಸಂತಕ್ಕೆ ಕಾಲಿಡಲಿದ್ದು, ಈ ಸಂಭ್ರಮದಂದು ಘೋಸ್ಟ್‌ ಸಿನಿತಂಡ ಬಿಗ್‌ ಡ್ಯಾಡಿಯನ್ನು ರಿವೀಲ್‌ ಮಾಡಲಿದೆ. ಈ ಘೋಸ್ಟ್‌ ಬಿಗ್‌ ಡ್ಯಾಡಿ ವಿಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್‌ ಸಿನಿಮಂದಿರದಲ್ಲಿ ಬಿಡುಗಡೆಗೊಳಿಸುವುದೆಂದು ಸಿನಿತಂಡ ತೀರ್ಮಾನಿಸಲಾಗಿದೆ.

ಇದನ್ನೂ ಓದಿ : Ambuja Movie Teaser : ಬೆಚ್ಚಿ ಬೀಳಿಸೋ ಕಥೆ ಹೊತ್ತು ತಂದಿದೆ ಅಂಬುಜ : ಜುಲೈ 21ಕ್ಕೆ ಶುಭಾ-ರಜನಿ ಸಿನಿಮಾ ತೆರೆಗೆ

ಇದನ್ನೂ ಓದಿ : God Movie Teaser : ಆಡು ಸ್ವಾಮಿಯ ಮಹಿಮೆ ಸಾರುವ ಆಡೇ ನಮ್ಮ God ಸಿನಿಮಾದ ಟೀಸರ್ ರಿಲೀಸ್

ಘೋಸ್ಟ್‌ ಸಿನಿಮಾದಲ್ಲಿ ನಾಯಕಿ ಇರುವುದಿಲ್ಲ. ನಟ ಶಿವ ರಾಜ್‌ಕುಮಾರ್‌, ಸತ್ಯಪ್ರಕಾಶ್‌, ಪ್ರಶಾಂತ್‌ ನಾರಾಯಣನ್‌, ದತ್ತಣ್ಣ, ಅಭಿಜಿತ್‌ ಮುಂತಾದವರು ಅಭಿನಯಿಸಿದ್ದಾರೆ. ಇನ್ನು ಮಲಯಾಳಂ ನಟ ಜಯತಾಮ್‌ ಪೊಲೀಸ್‌ ಪಾತ್ರದಲ್ಲಿ ಮಿಂಚಿದ್ದಾರೆ. ಅಷ್ಟೇ ಅಲ್ಲದೇ ಬಾಲಿವುಡ್‌ ನಟ ಅನುಪಮ್‌ ಖೇರ್‌ ಕೂಡ ಈ ತಾರಾಗಣದಲ್ಲಿದ್ದಾರೆ.

Ghost Movie: Director Srini’s Birthday: Ghost Movie’s Big Update

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular