ಬುಧವಾರ, ಏಪ್ರಿಲ್ 30, 2025
HomeSportsCricketNatwest final : ಐತಿಹಾಸಿಕ ನಾಟ್‌ವೆಸ್ಟ್ ಟ್ರೋಫಿ ಫೈನಲ್’ಗೆ 19ನೇ ಹ್ಯಾಪಿ ಬರ್ತ್ ಡೇ

Natwest final : ಐತಿಹಾಸಿಕ ನಾಟ್‌ವೆಸ್ಟ್ ಟ್ರೋಫಿ ಫೈನಲ್’ಗೆ 19ನೇ ಹ್ಯಾಪಿ ಬರ್ತ್ ಡೇ

- Advertisement -

ಬೆಂಗಳೂರು : Natwest final : ಅದು 2002ರ ಜುಲೈ 13. ಕ್ರಿಕೆಟ್ ಕಾಶಿ ಇಂಗ್ಲೆಂಡ್”ನ ಲಾರ್ಡ್ಸ್ ಮೈದಾನ. ಅವತ್ತು ಕ್ರಿಕೆಟ್ ಕಾಶಿಯಲ್ಲಿ ಇತಿಹಾಸವೊಂದು ನಿರ್ಮಾಣವಾಗಿತ್ತು.

ನಾಟ್’ವೆಸ್ಟ್ ಟ್ರೋಫಿ (Natwest Trophy final 2022) ತ್ರಿಕೋನ ಸರಣಿಯ ಫೈನಲ್ ಪಂದ್ಯದ. ಭಾರತ Vs ಇಂಗ್ಲೆಂಡ್ ಮುಖಾಮುಖಿ. ಗೆಲ್ಲಲು ಭಾರತದ ಮುಂದಿದ್ದ ಟಾರ್ಗೆಟ್ 326 ರನ್. ಅವತ್ತಿನ ಮಟ್ಟಿಗೆ ಅದು ಅಸಾಧ್ಯ ಸವಾಲು. ಗುರಿ ಬೆನ್ನಟ್ಟಲಾರಂಭಿಸಿದ ಸೌರವ್ ಗಂಗೂಲಿ ಸಾರಥ್ಯದ ಟೀಮ್ ಇಂಡಿಯಾಗೆ ನಾಯಕ ಗಂಗೂಲಿ ಹಾಗೂ ವೀರೇಂದ್ರ ಸೆಹ್ವಾಗ್ 106 ರನ್’ಗಳ ಜೊತೆಯಾಟವಾಡಿ ಸ್ಫೋಟಕ ಆರಂಭ ಒದಗಿಸ್ತಾರೆ. ಆದರೆ 43 ಎಸೆತಗಳಲ್ಲಿ 60 ರನ್ ಗಳಿಸಿದ ನಾಯಕ ಗಂಗೂಲಿ ಔಟಾಗ್ತಾ ಇದ್ದಂತೆ ಭಾರತ ದಿಢೀರ್ ಕುಸಿತ ಕಂಡಿತ್ತು. 146 ರನ್ ಆಗುವಷ್ಟರಲ್ಲಿ ಸೆಹ್ವಾಗ್, ದಿನೇಶ್ ಮೋಂಗಿಯಾ, ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ ಔಟಾಗಿರ್ತಾರೆ. ಇನ್ನೇನು ಭಾರತ ಮ್ಯಾಚ್ ಸೋಲ್ತು ಎಂದು ಜನ ಟಿವಿ ಆಫ್ ಮಾಡಿ ಮಲಗ್ತಾರೆ.

ಆದ್ರೆ ಬೆಳಗ್ಗೆದ್ದು ನೋಡಿದ್ರೆ ಭಾರತ ಐತಿಹಾಸಿಕ ವಿಜಯ ಸಾಧಿಸಿತ್ತು. ಆ ವಿಜಯದ ಹಿಂದಿದ್ದದ್ದು ಎರಡು ಯುವಶಕ್ತಿಗಳು. ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್. ಕ್ರಿಕೆಟ್ ಕಾಶಿಯಲ್ಲಿ ಕೆಚ್ಚೆದೆಯ ಆಟವಾಡಿದ್ದ ಈ ಯುವ ಜೋಡಿ 6ನೇ ವಿಕೆಟ್’ಗೆ 121 ರನ್ ಸೇರಿಸಿ ಭಾರತದ ಗೆಲುವಿನ ಗೋಪುರ ಕಟ್ಟಿತ್ತು. 63 ಎಸೆತಗಳಲ್ಲಿ 69 ರನ್ ಗಳಿಸಿದ ಯುವರಾಜ್ ಸಿಂಗ್ 267ರ ಮೊತ್ತದಲ್ಲಿ ಔಟಾದ ನಂತರ ಕೊನೆಯವರೆಗೂ ಪಟ್ಟು ಬಿಡದೆ ಹೋರಾಡಿದ್ದ ಮೊಹಮ್ಮಕ್ ಕೈಫ್ 75 ಎಸೆತಗಳಲ್ಲಿ ಅಜೇಯ 87 ರನ್ ಬಾರಿಸಿ ಭಾರತಕ್ಕೆ ನಂಬಲಸಾಧ್ಯ ಗೆಲುವು ತಂದು ಕೊಟ್ಟಿದ್ದರು. ಯುವಿ ಮತ್ತು ಕೈಫ್ ಸಾಹಸದಿಂದ ಭಾರತ 49.3 ಓವರ್’ಗಳಲ್ಲಿ 8 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಗೆಲುವೊಂದನ್ನು ದಾಖಲಿಸಿತ್ತು.

ಇದನ್ನೂ ಓದಿ : Dhoni in Chennai : ಚೆನ್ನೈನಲ್ಲಿ ಅಭಿಮಾನಿಗಳ ಆಸೆ ಈಡೇರಿಸಿದ “ಥಲಾ” ಧೋನಿ

ಇದನ್ನೂ ಓದಿ : Duleep Trophy final : ದಕ್ಷಿಣ ವಲಯಕ್ಕೆ ಮೊದಲ ದಿನವೇ ಆಘಾತ, ಮೇಲುಗೈ ಸಾಧಿಸಿದ ಪಶ್ಚಿಮ ವಲಯ

ಭಾರತ ಗೆಲ್ಲುತ್ತಿದ್ದಂತೆ ನಾಯಕ ಸೌರವ್ ಗಂಗೂಲಿ ಲಾರ್ಡ್ ಕ್ರೀಡಾಂಗಣದ ಪೆವಿಲಿಯನ್’ನಲ್ಲಿ ಶರ್ಚ್ ಬಿಚ್ಚಿ ಸಂಭ್ರಮಿಸಿದ್ದರು. ಆ ಮಹಾನ್ ಗೆಲುವಿಗೆ ಇಂದಿಗ 19ನೇ ವರ್ಷ ತುಂಬಿದೆ. ಹೀಗಾಗಿ ಆ ಐಕಾನಿಕ್ ಕ್ಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಪ್ರಿಯರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

19 years for iconic Natwest final

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular