ಬುಧವಾರ, ಏಪ್ರಿಲ್ 30, 2025
HomeSportsCricketDwayne Bravo Junior : ಟ್ರಿನಿಡಾಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಎದುರಾದ ಅಪರೂಪದ ಅತಿಥಿ, ಕ್ಯೂಟ್...

Dwayne Bravo Junior : ಟ್ರಿನಿಡಾಡ್‌ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ಎದುರಾದ ಅಪರೂಪದ ಅತಿಥಿ, ಕ್ಯೂಟ್ ವೀಡಿಯೊ ವೈರಲ್!

- Advertisement -

ಟ್ರಿನಿಡಾಡ್: ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡ, ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕಾಗಿ (Dwayne Bravo Junior ) ಟ್ರಿನಿಡಾಡ್‌ನಲ್ಲಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3ನೇ ಏಕದಿನ ಪಂದ್ಯ (India Vs West Indies ODI series) ಮಂಗಳವಾರ ಟ್ರಿನಿಡಾಡ್‌ನಲ್ಲಿರುವ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿ 1-1ರಲ್ಲಿ ಸಮಬಲದಲ್ಲಿರುವುದರಿಂದ ಇಂದು ನಡೆಯುವ 3ನೇ ಪಂದ್ಯಕ್ಕೆ ಫೈನಲ್ ಮಹತ್ವ ಬಂದಿದೆ.

ಮೊದಲ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದಿದ್ರೆ, 2ನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಗೆದ್ದಿದ್ದ ವಿಂಡೀಸ್, ಭಾರತಕ್ಕೆ ತಿರುಗೇಟು ನೀಡಿ ಸರಣಿ ಸಮಬಲ ಸಾಧಿಸಿತ್ತು. ಹೀಗಾಗಿ ತೀವ್ರ ಕುತೂಹಲ ಕೆರಳಿಸಿರುವ ಸರಣಿಯ 3ನೇ ಪಂದ್ಯ ಮಂಗಳವಾರ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದೆ. 3ನೇ ಏಕದಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ಟ್ರಿನಿಡಾಡ್‌ನಲ್ಲಿ ಅಪರೂಪದ ಅತಿಥಿಯೊಬ್ಬನ ದರ್ಶನವಾಗಿದೆ. ಆತ ಬೇರಾರೂ ಅಲ್ಲ, ಡ್ವೇನ್ ಬ್ರಾವೋ *Dwayne Bravo) ಅವರ ಪುತ್ರ ಡ್ವೇನ್ ಬ್ರಾವೋ ಜ್ಯೂನಿಯರ್ (Dwayne Bravo Junior). ಇದನ್ನೂ ಓದಿ : James Anderson – Stuart Broad : ಟೆಸ್ಟ್ ಕ್ರಿಕೆಟ್’ನ ಡೆಡ್ಲಿ ಬೌಲಿಂಗ್ ಕಾಂಬಿನೇಷನ್, ಆ್ಯಂಡರ್ಸನ್-ಬ್ರಾಡ್ “1039” ಟಾಪ್

ಟ್ರಿನಿಡಾಡ್‌ನವರೇ ಆದ ಡ್ವೇನ್ ಬ್ರಾವೋ ಸೋಮವಾರ ಟ್ರಿನಿಡಾಡ್‌ಗೆ ಆಗಮಿಸಿದ ಟೀಮ್ ಇಂಡಿಯಾ ಆಟಗಾರರನ್ನು ಹೋಟೆಲ್‌ನಲ್ಲಿ ಸ್ವಾಗತಿಸಿದರು. ಈ ವೇಳೆ ತಮ್ಮ ಜೊತೆಗಿದ್ದ ಪುತ್ರನನ್ನು ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ ಸೇರಿದಂತೆ ಇತರ ಆಟಗಾರರಿಗೆ ಬ್ರಾವೋ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಕ್ಯೂಟ್ ವೀಡಿಯೊವನ್ನು ಬಿಸಿಸಿಐ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ಟ್ರಿನಿಡಾಡ್‌ನವರಾದ ಡ್ವೇನ್ ಬ್ರಾವೋ ವೆಸ್ಟ್ ಇಂಡೀಸ್ ಪರ 40 ಟೆಸ್ಟ್, 164 ಏಕದಿನ ಹಾಗೂ 91 ಟಿ20 ಪಂದ್ಯಗಳನ್ನಾಡಿದ್ದಾರೆ. ಐಪಿಎಲ್‌ನಲ್ಲಿ ಆರಂಭದಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಬ್ರಾವೋ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪರ ಸುದೀರ್ಘವಾಗಿ ಆಡಿದ್ದರು. ಇದೀಗ 40 ವರ್ಷದ ಆಲ್ರೌಂಡರ್ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Dwayne Bravo Junior : A rare guest who met Team India players in Trinidad, cute video viral!

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular